'ಅಕ್ಷತೆ' ಹೆಸರಲ್ಲಿ ಚಿತ್ರವಾಗುತ್ತಿದೆ ನಟಿ ಮೈತ್ರಿಯಾ ಗೌಡ ಜೀವನಗಾಥೆ
ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರ ಪುತರ್ ಕಾರ್ತಿಕ್ ಗೌಡ ವಿರುದ್ಧ ವಂಚನೆ ಆರೋಪ ಮಾಡಿ ದೊಡ್ಡ ಸುದ್ದಿಯಾಗಿದ್ದ ನಟಿ ಮೈತ್ರಿಯಾ ಗೌಡ...

ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರ ಪುತರ್ ಕಾರ್ತಿಕ್ ಗೌಡ ವಿರುದ್ಧ ವಂಚನೆ ಆರೋಪ ಮಾಡಿ ದೊಡ್ಡ ಸುದ್ದಿಯಾಗಿದ್ದ ನಟಿ ಮೈತ್ರಿಯಾ ಗೌಡ ಅವರು ತಮ್ಮ ನಿಜ ಜೀವನವನ್ನೇ ತೆರೆ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಅಕ್ಷತೆ ಪ್ರೇಮಿಗಳು ಮದುವೆಯಾಗುವಾಗ ಎದುರಾಗುವ ತೊಂದರೆಗಳ ಸುತ್ತ ಹೆಣೆದಿರುವ ಕಥೆಯಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಮೈತ್ರಿಯಾ ಗೌಡ ಅಭಿನಯಿಸುತ್ತಿದ್ದು, ಯುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕಾರ್ತಿಕ್ ಶೆಟ್ಟಿ ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಾಕತಾಳೀಯವೆಂಬಂತೆ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ನಟನ ಹೆಸರು ಕಾರ್ತಿಕ್ ಆಗಿದ್ದು, ಚಿತ್ರದಲ್ಲೂ ಕಾರ್ತಿಕ್ ಹೆಸರನ್ನೇ ಬಳಸಿಕೊಳ್ಳಲಾಗುತ್ತಿದೆ.
ಸದ್ಯ ಮೈತ್ರಿಯಾ ಗೌಡ ನಟಿಸಿರುವ 'Love on NH4' ಚಿತ್ರದ ನಿರ್ಮಾಪಕರಾದ ಸಂಜೀವ್ ಶೆಟ್ಟಿ ಮತ್ತು ಎಸ್. ವೆಂಕಟೇಶ್ ಈ ಚಿತ್ರಕ್ಕೂ ಬಂಡವಾಳ ಹಾಕುತ್ತಿದ್ದಾರೆ. ಜಟಾಯು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ರಾಜು ಎಂಬುವರು ಅಕ್ಷತೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


