ಬುಡಾಪೆಸ್ಟ್ ನಲ್ಲಿ 'ಅದ್ಭುತ' ಟಾಮ್ ಹ್ಯಾಂಕ್ಸ್ ಭೇಟಿ ಮಾಡಿದ ಇರ್ಫಾನ್
ಹಾಲಿವುಡ್ ಸಿನೆಮಾ 'ಇನ್ಫರ್ನೋ'ದಲ್ಲಿ ನಟಿಸುತ್ತಿರುವ ನಟ ಇರ್ಫಾನ್ ಖಾನ್ ತಮ್ಮ ಬುಡಾಪೆಸ್ಟ್ ಪ್ರವಾಸದಿಂದ ಹಿಂದಿರುಗಿದ್ದಾರೆ.

ಮುಂಬೈ: ಹಾಲಿವುಡ್ ಸಿನೆಮಾ 'ಇನ್ಫರ್ನೋ'ದಲ್ಲಿ ನಟಿಸುತ್ತಿರುವ ನಟ ಇರ್ಫಾನ್ ಖಾನ್ ತಮ್ಮ ಬುಡಾಪೆಸ್ಟ್ ಪ್ರವಾಸದಿಂದ ಹಿಂದಿರುಗಿದ್ದಾರೆ. ತಮ್ಮ ಪ್ರವಾಸ ಫಲಪ್ರದವಾಗಿದೆ ಎಂದಿರುವ ಅವರು, ಅದಕ್ಕಿಂತಲೂ ಹೆಚ್ಚು ನಟ ಟಾಮ್ ಹ್ಯಾಂಕ್ಸ್ ಅವರನ್ನು ಭೇಟಿ ಮಾಡಿರುವುದು ಅವರಿಗೆ ಸಂತಸ ತಂದಿದೆ. ಅವರೊಂದಿಗೆ ನಟಿಸಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
"ಬುಡಾಪೆಸ್ಟ್ ನ ನನ್ನ ಪ್ರವಾಸ ಫಲಪ್ರದವಾಗಿತ್ತು. ಅಲ್ಲಿಗೆ ಒಂದು ವಾರದ ಮಟ್ಟಿಗೆ ಹೋಗಿದ್ದೆ. ಚಲನಚಿತ್ರದ ಸಂಪೂರ್ಣ ತಂಡವನ್ನು ಭೇಟಿ ಮಾಡಿದ್ದು ಚೆನ್ನಾಗಿತ್ತು. ನಾನು, ಟಾಮ್, ನಿರ್ದೇಶಕ ಮತ್ತು ಚಲನಚಿತ್ರದ ಇತರ ನಟರೊಂದಿಗೆ ಸ್ಕ್ರಿಪ್ಟ್ ಓದಿ ಅಭ್ಯಾಸ ಮಾಡಿದೆವು. ನನ್ನ ಪಾತ್ರದ ನೋಟವನ್ನು ಬಹುತೇಕ ಅಂತಿಮಗೊಳಿಸಲಾಗಿದೆ" ಎಂದು ಇರ್ಫಾನ್ ತಿಳಿಸಿದ್ದಾರೆ.
ಈ ಹಿಂದೆ ಅಂತರಾಷ್ಟ್ರೀಯ ಸಿನೆಮಾಗಳಾದ 'ಸ್ಲಂ ಡಾಗ್ ಮಿಲಿಯನೇರ್', 'ಲೈಫ್ ಆಫ್ ಪೈ' ಮತ್ತು 'ಅಮೇಜಿಂಗ್ ಸ್ಪೈಡರ್ ಮ್ಯಾನ್' ಚಿತ್ರಗಳಲ್ಲಿ ನಟಿಸಿರುವ ನಟ 'ಫಾರೆಸ್ಟ್ ಗಂಪ್' ನಟ ಟಾಮ್ ಹ್ಯಾಂಕ್ ಭೇಟಿ ಮಾಡುವುದೇ ಒಂದು ಅನುಭವ ಎಂದಿದ್ದಾರೆ ಇರ್ಫಾನ್.
"ಟಾಮ್ ಹ್ಯಾಂಕ್ ಅದ್ಭುತವಾದ ನಟ ಮತ್ತು ಅತ್ಯುತ್ತಮ ಮನುಷ್ಯ. ಅವರನ್ನು ಸ್ವಲ್ಪ ಸಮಯಕ್ಕೆ ಭೇಟಿ ಮಾಡಿದೆ. ಇನ್ನೆರಡು ವಾರಗಳಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ. ಅವರ ಜೊತೆ ನಟಿಸಲು ಉತ್ಸುಕನಾಗಿ ಕಾಯುತ್ತಿದ್ದೇನೆ" ಎನ್ನುತ್ತಾರೆ ಇರ್ಫಾನ್.
'ಇನ್ಫರ್ನೋ' ನಿರ್ದೇಶಕ ರಾನ್ ಹಾವರ್ಡ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


