'ಓ ಕಾದಲ್ ಕಣ್ಮಣಿ'ಯಿಂದ ತಮಿಳುನಾಡಿನಲ್ಲಿ ಎರಡು ಆತ್ಮಹತ್ಯೆ?
ಒಂದೇ ದಿನದಲ್ಲಿ ನಡೆದ ಎರಡು ಘಟನೆಗಳಲ್ಲಿ ತನ್ನ ಪ್ರೇಯಸಿ ಇತ್ತೀಚಿಗೆ ಬಿಡುಗಡೆಯಾದ 'ಓ ಕಾದಲ್ ಕಣ್ಮಣಿ' ಚಿತ್ರವನ್ನು ನೋಡಲು ಜೊತೆಗೂಡಲಿಲ್ಲ

ಕೊಯಂಬತ್ತೂರು: ಒಂದೇ ದಿನದಲ್ಲಿ ನಡೆದ ಎರಡು ಘಟನೆಗಳಲ್ಲಿ ತನ್ನ ಪ್ರೇಯಸಿ ಇತ್ತೀಚಿಗೆ ಬಿಡುಗಡೆಯಾದ 'ಓ ಕಾದಲ್ ಕಣ್ಮಣಿ' ಚಿತ್ರವನ್ನು ನೋಡಲು ಜೊತೆಗೂಡಲಿಲ್ಲ ಎಂಬ ಕಾರಣಕ್ಕೆ ಕೊಯಂಬತ್ತುರಿನಲ್ಲಿ ೨೯ ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ತನ್ನ ಗಂಡ ಇದೇ ಚಲನಚಿತ್ರಕ್ಕೆ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಬಿ ಆರ್ ಪುರಂ ನಿವಾಸಿ ಜೆ ಜೈಶಂಕರ್ ಮೊದಲು ಮದ್ಯ ಸೇವಿಸಿ, ಅಲ್ಲೇ ಖಾಸಗಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ತನ್ನ ಪ್ರೇಯಸಿಗೆ ಚಲನಚಿತ್ರಕ್ಕೆ ಬರುವಂತೆ ಕೇಳಿದ್ದಾನೆ. ಮಣಿರತ್ನಂ ಅವರ 'ಓ ಕಾದಲ್ ಕಣ್ಮಣಿ' ಸಿನೆಮಾಕ್ಕೆ ತನ್ನ ಜೊತೆಗೂಡದೆ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಯುವತಿ ಬರಲು ನಿರಾಕರಿಸಿದ್ದರಿಂದ ಜೈಶಂಕರ್ ನೇಣು ಬಿಗಿದುಕೊಂಡಿದ್ದಾನೆ ಎಂದು ಪೀಲಮೇಡು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ನವ ಇಂಡಿಯಾ ಪ್ರದೇಶದ ನಿವಾಸಿ ಪಿ ಸತ್ಯಪ್ರಿಯ ತನ್ನ ಪತಿ ಪಳನಿಸ್ವಾಮಿ ಅವರಿಗೆ ಬಿಗ್ ಬಜಾರ್ ನಲ್ಲಿ ಶಾಪಿಂಗ್ ಗೆ ಕರೆದುಕೊಂಡು ಹೋಗಿ 'ಓ ಕಾದಲ್ ಕಣ್ಮಣಿ' ಚಲನಚಿತ್ರ ತೋರಿಸುವಂತೆ ದುಂಬಾಲು ಬಿದ್ದಿದ್ದಾರೆ.
ಖಾಸಗಿ ಸಂಸ್ಥೆಯೊಂದರ ಮಾರಾಟ ನಿರ್ದೇಶಕನಾಗಿರುವ ಪಳನಿಸ್ವಾಮಿ ತನಗೆ ಹುಷಾರಿಲ್ಲ ಎಂದು ನಿರಾಕರಿಸಿದ್ದಕ್ಕೆ ವಿಷ ಸೇವಿಸಿ ಅವನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದರು ಯಾವುದೇ ಪ್ರಯೋಜನವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


