'ಮೈ ಹೀರೋ ಮೈತ್ರಿ'ಯಾದ ಮೈತ್ರಿ
ಯುವ ನಿರ್ದೇಶಕ ಬಿ ಎಂ ಗಿರಿರಾಜ್ ನಿರ್ದೇಶನದ ಮೈತ್ರಿ ಕರ್ನಾಟಕದಲ್ಲಿ ೫೦ ದಿನಗಳನ್ನು ದಾಟುತ್ತಿದೆ.

ಬೆಂಗಳೂರು: ಯುವ ನಿರ್ದೇಶಕ ಬಿ ಎಂ ಗಿರಿರಾಜ್ ನಿರ್ದೇಶನದ ಮೈತ್ರಿ ಕರ್ನಾಟಕದಲ್ಲಿ ೫೦ ದಿನಗಳನ್ನು ದಾಟುತ್ತಿದೆ. ಈಗ ಇದೆ ಸಿನೆಮಾದ ಮಲಯಾಳಮ್ ಅವತರಿಣಿಕೆ 'ಮೈ ಹೀರೋ ಮೈತ್ರಿ'ಯಾಗಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸಿನೆಮಾದ ಸೆನ್ಸಾರ್ ಗಾಗಿ ನಿರ್ಮಾಪಕ ಎನ್ ಎಸ್ ರಾಜಕುಮಾರ್ ಮತ್ತು ಚಿತ್ರತಂಡ ತ್ರಿವೆಂಡ್ರಮ್ ಕಡೆಗೆ ಮುಖ ಮಾಡಿದೆ. "ಈ ಸಿನೆಮಾವನ್ನು ಏಪ್ರಿಲ್ ೨೪ ರಂದು ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ, ಅದು ತಪ್ಪಿದರೆ ಮೇ ೧ರಂದು ಖಂಡಿತಾ ಬಿಡುಗಡೆಯಾಗಲಿದೆ" ಎನ್ನುತ್ತಾರೆ ನಿರ್ಮಾಪಕ ರಾಜಕುಮಾರ್.
ದ್ವಿಭಾಷಾ ಚಲನಚಿತ್ರ ಮೈತ್ರಿಯ ಮೂಲಕ ಪುನೀತ್ ರಾಜಕುಮಾರ್ ಮಲಯಾಳಮ್ ನಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. "ಅತಿಥಿ ಪಾತ್ರಗಳಲ್ಲಿ ಕೆಲವು ಬದಲಾವಣೆಗಳಿವೆ. ಉಳಿದಂತೆ ಇನ್ನೆಲ್ಲವೂ ಹಾಗೆಯೇ ಇದೆ. ಸಾಮಾನ್ಯವಾಗಿ ಪುನೀತ್ ಸಿನೆಮಾಗಳನ್ನು ಮಲಯಾಳಮ್ ಗೆ ಡಬ್ ಮಾಡಲಾಗುತ್ತದೆ, ಆದರೆ ಈಗ ಮೈತ್ರಿ ಸಿನೆಮಾವನ್ನು ಎರಡು ಭಾಷೆಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ" ಎನ್ನುತ್ತಾರೆ ರಾಜಕುಮಾರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


