ಸುದೀಪ್, ಯಶ್ ನಂತ್ರ ಈಗ ಕೋಮಲ್ ವಿಷ್ಣು ವಕ್ತಾರ
ಚಿತ್ರರಂಗದ ಲೆಜೆಂಡ್ ಗಳ ನೇಮು ಫೇಮು ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಕನ್ನಡಕ್ಕೆ ಮಾತ್ರ ಸೀಮಿತವಲ್ಲ...

ಚಿತ್ರರಂಗದ ಲೆಜೆಂಡ್ ಗಳ ನೇಮು ಫೇಮು ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಕನ್ನಡಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ಭಾಷೆಯಲ್ಲೂ ಐಕಾನ್ ಗಳನ್ನು ಹೈಜಾಕ್ ಮಾಡುವ ಪರಂಪರೆ ಇದೆ.
ಕನ್ನಡದಲ್ಲಿ ಡಾ. ರಾಜ್‍ಕುಮಾರ್, ಶಂಕರ್‌ನಾಗ್, ವಿಷ್ಣುವರ್ಧನ್‍ರಂಥ ಗ್ರೇಟ್ ನಟರನ್ನು ಬಳಸಿಕೊಳ್ಳುತ್ತಿದ್ದು, ಈಗ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಇಮೇಜ್ ಹಿಂದೆ ಮತ್ತೊಬ್ಬ ಹೀರೋ ಹೊರಟಿದ್ದಾರೆ.
ವಿಷ್ಣುವರ್ಧನ ಚಿತ್ರದ ಮೂಲಕ ನಟ ಸುದೀಪ್ ಸಾಹಸ ಸಿಂಹ ನೆರಳಿನಲ್ಲಿ ನಿಲ್ಲುವ ಪ್ರಯತ್ನ ಮಾಡುತ್ತಿರುವಾಗಲೇ ನಟ ಕೋಮಲ್ ಕೂಡ ನಾಗರಹಾವು ಹಿಂದೆ ಹೊರಟಿದ್ದಾರೆ. ಹೌದು, ನಟ ಕೋಮಲ್ ಅಭಿನಯದ ಲೊಡ್ಡೆ ಚಿತ್ರದಲ್ಲಿ ವಿಷ್ಣು ಇಮೇಜ್‍ನ ನೆರಳು ಕಾಣಲಿದೆ. ಅಂದರೆ ಡಾ. ವಿಷ್ಣುವರ್ಧನ ಅವರ ನೆನಪಿಗೆ ಒಂದು ಹಾಡನ್ನು ಚಿತ್ರೀಕರಣ ಮಾಡಿದ್ದು, ಈ ಹಾಡು ಸಂಪೂರ್ಣವಾಗಿ ಸಾಹಸ ಸಿಂಹನ ಇಮೇಜ್ ಅನ್ನೇ ತೆರೆ ಮೇಲೆ ತರುವ ಉದ್ದೇಶ ಇದರಲ್ಲಿ ಅಡಗಿದೆ.
ಸದರಿ ಹಾಡಿನ ಚಿತ್ರೀಕರಣ ಮಾಡುವುದರೊಂದಿಗೆ ಶೂಟಿಂಗ್ ಮುಗಿಸಿರುವ ಲೊಡ್ಡೆ ಚಿತ್ರದ ನಿರ್ದೇಶಕರು ಸುರೇಶ್. ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಅರುಣ್ ಸಾಗರ್ ಅವರು ರಚಿಸಿದ ಸೆಟ್‍ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದ್ದು, ಇಡೀ ಸೆಟ್ ಅತ್ಯಂತ ಕಲರ್ಫುಲ್ ಆಗಿತ್ತು. ವಿಷ್ಣುವರ್ಧನ್ ಅವರ ವಿವಿಧ ಚಿತ್ರಗಳ ಪೋಸ್ಟರ್ ಗಳ ಹಿನ್ನೆಲೆಯಲ್ಲಿ ಕೋಮಲ್ ಹಾಗೂ 20 ನೃತ್ಯಗಾರರ ಜೊತೆ ಒಂದು ಪ್ರಮುಖ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು. ಮೂರು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ.
ಪಂಜಾಬಿ ಬೆಡಗಿ ಆಕಾಂಕ್ಷ ಪುರಿ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರ ಎಂ.ಎಸ್ ಶ್ರೀನಾಥ್ ಅವರ ಕಥೆ ಒಳಗೊಂಡಿದೆ, ಎಸ್.ವಿ ಸುರೇಶ್ ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ. ಚರಣ್ ಬಾಂಜೊ ಸಂಗೀತ, ಸೇಫ್ಟಿ ಪ್ರಕಾಶ್ ಕ್ಯಾಮರಾ, ತ್ರಿಭುವನ್, ಮುರಳಿ, ಧನ್ ಕುಮಾರ ಅವರ ನೃತ್ಯ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹೃದಯ ಶಿವ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ. ಶಯ್ಯಾಜಿ ಶಿಂದೆ, ಅವಿನಾಶ್, ಮುಖ್ಯಮಂತ್ರಿ ಚಂದ್ರು, ಕರಿ ಸುಬ್ಬು, ಮಿಮಿಕ್ರಿ ಗೋಪಿ, ಸುಚೇಂದ್ರ ಪ್ರಸಾದ್, ಆಶಾಲತಾ, ಲಕ್ಷ್ಮಿದೇವಮ್ಮ, ನವನೀತ, ಪವಿತ್ರ ಲೋಕೇಶ್ ಚಿತ್ರದ ಮುಖ್ಯ ಪಾತ್ರಧಾರಿಗಳು, ಹಾಸನದ ಮಂಜುನಾಥ್ ಚಿತ್ರದ ನಿರ್ಮಾಪಕರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


