ಸಿನಿಮಾ ಸುದ್ದಿ

'ಉತ್ತಮ ವಿಲನ್' ನಿಷೇಧಕ್ಕೆ ವಿ ಎಚ್ ಪಿ ಕರೆ

ನಟ ನಿರ್ದೇಶಕ ಕಮಲಹಾಸನ್ ನಟನೆಯ 'ಉತ್ತಮ ವಿಲನ್' ಚಲನಚಿತ್ರ ಹಿಂದುಗಳ ಭಾವನೆಯನ್ನು ಘಾಸಿಗೊಳಿಸುತ್ತದೆ ಎಂದು ದೂರಿ ಚಲನಚಿತ್ರವನ್ನು

'ಉತ್ತಮ ವಿಲನ್' ನಿಷೇಧಕ್ಕೆ ವಿ ಎಚ್ ಪಿ ಕರೆ
ಉತ್ತಮ ವಿಲನ್ ಚಿತ್ರದಲ್ಲಿ ಕಮಲ ಹಾಸನ್
Published On :

ಚೆನ್ನೈ: ನಟ ನಿರ್ದೇಶಕ ಕಮಲ ಹಾಸನ್ ನಟನೆಯ 'ಉತ್ತಮ ವಿಲನ್' ಚಲನಚಿತ್ರ ಹಿಂದುಗಳ ಭಾವನೆಯನ್ನು ಘಾಸಿಗೊಳಿಸುತ್ತದೆ ಎಂದು ದೂರಿ ಚಲನಚಿತ್ರವನ್ನು ನಿಷೇಧಿಸುವಂತೆ ಹಿಂದು ಸಂಘಟನೆ ವಿಶ್ವ ಹಿಂದು ಪರಿಷತ್ ನ ಸದಸ್ಯರು ಕರೆ ಕೊಟ್ಟಿದ್ದಾರೆ.

ಸೋಮವಾರ ಪೊಲೀಸ್ ಮಹಾನಿರ್ದೇಶಕರಿಗೆ ನೀಡಿರುವ ಹೇಳಿಕೆಯಲ್ಲಿ ಚಲನಚಿತ್ರದ ಹಾಡೊಂದಾದ "ಇರಾನಿಯನ್ ನಾಡಗಮ್" ನಲ್ಲಿ ಪ್ರಹ್ಲಾದ ಮತ್ತು ಹಿರಣ್ಯಕಶಿಪುವಿನ ನಡುವಿನ ಸಂಭಾಷಣೆಯನ್ನು ಬಹಳ ಲಘುವಾಗಿ ಪ್ರತಿನಿಧಿಸಿರುವುದು ಹಿಂದುಗಳ ಭಾವನೆಗೆ ಧಕ್ಕೆ ಉಂಟುಮಾಡುತ್ತದೆ ಎಂದು ದೂರಿದ್ದಾರೆ.

"ಈ ಹಾಡಿನ ಸಾಹಿತ್ಯ ವಿಷ್ಣು ಭಕ್ತರಿಗೆ ನೋವುಂಟು ಮಾಡುತ್ತದೆ. ಪ್ರಹ್ಲಾದ ಮತ್ತು ಹಿರಣ್ಯಕಶಿಪುವಿನ ನಡುವಿನ ಸಂಭಾಷಣೆಯನ್ನು ಬಹಳ ಲಘುವಾಗಿ ಪರಿಗಣಿಸುತ್ತದೆ. ಆದುದರಿಂದ ಚಲನಚಿತ್ರವನ್ನಿ ನಿಷೇಧಿಸಬೇಕೆಂದು" ವಿ ಎಚ್ ಪಿ ಸದಸ್ಯ ಕೆ ಎಲ್ ಸತ್ಯಮೂರ್ತಿ ಆಗ್ರಹಿಸಿದ್ದಾರೆ.

ಕನ್ನಡಿಗ ರಮೇಶ್ ಅರವಿಂದ ನಿರ್ದೇಶನದ ಈ ಚಲನಚಿತ್ರ ೮ನೆ ಶತಮಾನದ ರಂಗಭೂಮಿ ನಟ ಮತ್ತು ಆಧುನಿಕ ಯುಗದ ಸೂಪರ್ಸ್ಟಾರ್ ಬಗೆಗಿನ ಕಥೆ ಉಳ್ಳದ್ದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.