ಮತ್ತೊಂದು ದಾಖಲೆ ಬರೆದ "ರಾಮಾಚಾರಿ": 10 ಭಾಷೆಗಳಿಗೆ ಚಿತ್ರ ಡಬ್
ನಟ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ 100ನೇ ದಿನದ ಸಂಭ್ರಮದಲ್ಲಿರುವಂತೆಯೇ ಮತ್ತೊಂದು ಹೊಸ ದಾಖಲೆಯೊಂದನ್ನು ಬರೆದಿದೆ...

ಬೆಂಗಳೂರು: ನಟ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ 100ನೇ ದಿನದ ಸಂಭ್ರಮದಲ್ಲಿರುವಂತೆಯೇ ಮತ್ತೊಂದು ಹೊಸ ದಾಖಲೆಯೊಂದನ್ನು ಬರೆದಿದೆ.
ಈ ಹಿಂದೆ ದಾಖಲೆ ಗಳಿಕೆ ಮತ್ತು ತೆಲುಗು ಭಾಷೆಗೆ ರೀಮೇಕ್ ಅಗುತ್ತಿರುವ ವಿಚಾರವಾಗಿ ಸುದ್ದಿಯಲ್ಲಿದ್ದ ರಾಮಾಚಾರಿ ಚಿತ್ರ ಇದೀಗ ಡಬ್ ಆಗುವ ವಿಚಾರದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದೆ. ಮೂಲಗಳ ಪ್ರಕಾರ ನಟ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ "ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ" ಚಿತ್ರ ಬರೊಬ್ಬರಿ 10 ಭಾಷೆಗಳಿಗೆ ಡಬ್ ಆಗುತ್ತಿದೆ. ಮರಾಠಿ, ಬೆಂಗಾಲಿ, ಗುಜರಾತಿ, ಪಂಜಾಬಿ, ಬೋಜ್‍ಪುರಿ ಸೇರಿದಂತೆ ಒಟ್ಟು ಹತ್ತು ಭಾಷೆಗಳಿಗೆ ಕನ್ನಡದ ಸಿನಿಮಾ ಡಬ್ ಆಗಲು ಸಿದ್ದತೆ ನಡೆದಿದೆ ಎಂದು ತಿಳಿದುಬಂದಿದೆ.
ಕನ್ನಡ ಚಿತ್ರವೊಂದು ಏಕಕಾಲದಲ್ಲಿ 10 ಭಾಷೆಗಳಿಗೆ ಡಬ್ ಆಗುತ್ತಿದ್ದು, ಇದು ಹೊಸ ದಾಖಲೆ ಎನ್ನಲಾಗುತ್ತಿದೆ. ಇನ್ನು ಚಿತ್ರದಲ್ಲಿ ಯಶ್ ಮತ್ತು ರಾಧಿಕಾ ಅವರ ಅಮೋಘ ನಟನೆಯಿಂದಾಗಿ ನಿರ್ಮಾಪಕರು ಚಿತ್ರವನ್ನು ಇತರೆ ಭಾಷೆಗಳಿಗೆ ಡಬ್ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡದಲ್ಲಿ ತೆರೆಕಂಡ "ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ" ಚಿತ್ರವು ಈಗಾಗಲೇ ಕನ್ನಡದಲ್ಲಿ ಭರ್ಜರಿ 100 ದಿನಗಳ ಪ್ರದರ್ಶನಗೊಂಡು ಮುಂದುವರೆಯುತ್ತಿರುವಂತೆಯೇ, ತೆಲುಗ ಮತ್ತು ತಮಿಳು ಭಾಷೆಗಳಲ್ಲಿ ಈ ಚಿತ್ರವನ್ನು ರಿಮೇಕ್ ಮಾಡುವ ಕಾರ್ಯಕೂಡ ಚಾಲ್ತಿಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


