ರಾಜಧಾನಿ-2 ಚಿತ್ರಕ್ಕೆ ಹರಿಪ್ರಿಯಾ ನಾಯಕಿ
ಉಗ್ರಂ ಚಿತ್ರದ ಯಶಸ್ಸಿನ ನಂತರ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಉಗ್ರಂ ಚಿತ್ರದ ಯಶಸ್ಸಿನ ನಂತರ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಅಭಿನಯದ ರಿಕ್ಕಿ ಹಾಗೂ ಕಿಚ್ಚ ಸುದೀಪ್ ರ ರನ್ನ ಚಿತ್ರದಲ್ಲಿ ನಟಿಸಿರುವ ಅವರು ಇದೀಗ ರಾಜಧಾನಿ-2 ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ನಗರದ ಕಂಠೀರವ ಸ್ಟುಡಿಯೋದಲ್ಲಿ ಏಪ್ರಿಲ್ 6 ರಂದು ಚಿತ್ರದ ಮೂಹೂರ್ತ ನಡೆಯಲಿದ್ದು, ರಾಜಧಾನಿ-2 ಚಿತ್ರದಲ್ಲಿ ನಟ ಯಶ್ ಬದಲಿಗೆ ಪ್ರೀತಮ್ ನಟಿಸುತ್ತಿದ್ದಾರೆ. ಅವರಿಗೆ ಹರಿಪ್ರಿಯಾ ಸಾಥ್ ನೀಡುತ್ತಿದ್ದಾರೆ.
ರಾಜಧಾನಿ ಚಿತ್ರಕ್ಕೆ ದುಡಿದ ತಂತ್ರಜ್ಞರೇ ಇಲ್ಲೂ ಮುಂದುವರೆಯುತ್ತಿದ್ದಾರೆ. ಛಾಯಾಗ್ರಾಹಕ ಎಚ್.ಸಿ. ವೇಣು, ಸಂಗೀತ ನಿರ್ದೇಶಕ ಅರ್ಜುನ್‌ಜನ್ಯ ಮತ್ತು ಸಂಕಲನಕಾರ ಕೆ.ಎಂ. ಪ್ರಕಾಶ್ ಇಲ್ಲೂ ಮುಂದುವರೆಯುತ್ತಿದ್ದಾರೆ. ಜೊತೆಗೆ ಹರ್ಷ, ಮುರಳಿ ಮತ್ತು ಧನ್ ಕುಮಾರ್ ಅವರ ನೃತ್ಯ ನಿರ್ದೇಶನ, ರವಿವರ್ಮ ಮತ್ತು ಪಳನಿರಾಜ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಈ ಹಿಂದೆ ಯಶ್ ಅಭಿನಯಿಸಿದ್ದ ರಾಜಧಾನಿ ಚಿತ್ರವನ್ನು ರಘು ಜಯಾ ನಿರ್ದೇಶಿಸಿದ್ದರು. ಆದರೆ ಬಿಡುಗಡೆಯ ಸಮಯದಲ್ಲಿ ಅವರು ಚಿತ್ರತಂಡದಿಂದ ಹೊರಬಂದು, ಇನ್ನಾರದ್ದೋ ಹೆಸರಲ್ಲಿ ಬಿಡುಗಡೆಯಾಗಿತ್ತು. ಇದೀಗ ಮುಂದುವರೆದ ಭಾಗದೊಂದಿಗೆ ರಘು ಜಯ ಮತ್ತೆ ವಾಪಸ್ಸು ಬಂದಿದ್ದಾರೆ.
ನಾಲ್ವರು ಹುಡುಗರು ರೌಡಿಸಂನಿಂದ ಆಕರ್ಷಿತಗೊಳ್ಳುವ ಕಥಾ ಹಂದರ ರಾಜಧಾನಿ ಚಿತ್ರದಲ್ಲಿತ್ತು. ಈ ಚಿತ್ರದಲ್ಲಿ ನಾಲ್ವರ ಪೈಕಿ ಒಬ್ಬ ಮಾತ್ರ ಉಳಿಯುತ್ತಾನೆ. ಆ ಪಾತ್ರವನ್ನೇ ಮುಂದುವರೆಸಿ, ಇನ್ನೊಂದು ಕಥೆ ರೆಡಿ ಮಾಡಿದ್ದಾರೆ ರಘು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


