ಬ್ಯಾಟ್ ಬೀಸಲಿದ್ದಾರೆಯೇ ಸುದೀಪ್?
ನವೆಂಬರ್ ೨೧ ರಿಂದ ೨೩ ರವೆರೆಗೆ ನಡೆಯಲಿರುವ ಡಾ. ರಾಜ್ ಕಪ್ ನ ನಾಲ್ಕನೇ ಆವೃತ್ತಿಯಲ್ಲಿ ಸುದೀಪ್...

ಬೆಂಗಳೂರು: ನವೆಂಬರ್ ೨೧ ರಿಂದ ೨೩ ರವೆರೆಗೆ ನಡೆಯಲಿರುವ ಡಾ. ರಾಜ್ ಕಪ್ ನ ನಾಲ್ಕನೇ ಆವೃತ್ತಿಯ ಕ್ರಿಕೆಟ್ ಸರಣಿಯಲ್ಲಿ ಸುದೀಪ್ ಭಾಗವಹಿಸುವಂತೆ ಮನವಿ ಮಾಡಲು ೧೨ ಜನರ ನಿರ್ಮಾಪಕರ ತಂಡವೊಂದು ಚೆನ್ನೈಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ. 'ರನ್ನ' ಚಲನಚಿತ್ರಕ್ಕೆ ಚಿತ್ರೀಕರಣ ಮುಗಿಸಿರುವ ಸುದೀಪ್, ಈಗ ಚೆನ್ನೈನಲ್ಲಿ 'ವಿಜಯ್ ೫೮' ಚಿತ್ರ ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲಿ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವಾರ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಚಲನಚಿತ್ರ ಕಾರ್ಮಿಕರ ಮತ್ತು ಕಲಾವಿದರ ಒಕ್ಕೂಟ ಈ ಕ್ರಿಕೆಟ್ ಸರಣಿಯ ಆಯೋಜಕರು.
ಈ ಸರಣಿಯ ಅಂತಿಮ ಪಂದ್ಯ ಡಿಸೆಂಬರ್ ೭ ರಂದು ಮಲೇಶಿಯಾದಲ್ಲಿ ನಡೆಯಲಿದೆ. ಈಗಾಗಲೇ ೭ ತಂಡಗಳು ಅಂತಿಮಗೊಂಡಿದ್ದು, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಉಪೇಂದ್ರ, ದುನಿಯಾ ವಿಜಯ್ ಮತ್ತು ಶ್ರೀನಗರ ಕಿಟ್ಟಿ ತಮ್ಮ ತಂಡಗಳ ನಾಯಕರು. ಸುದೀಪ್ ಅವರು ತಮ್ಮ ನಿಗದಿತ ಕಾರ್ಯದಿಂದ ಬಿಡುವು ಮಾಡಿಕೊಂಡು ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸುವಂತೆ ಮನವೊಲಿಸುವ ನಿಟ್ಟಿನಲ್ಲಿ ನಿರ್ಮಾಪಕರ ತಂದ ಚೆನ್ನೈಗೆ ತೆರಳಿದೆ. ಸುದೀಪ್ ಅವರು ಕ್ರಿಕೆಟ್ ಮೈದಾನದ ಕ್ರೀಸ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಷ್ಟೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


