ಪೂರಿ (ತಲೆ) ತಿಂದ ಚಾರ್ಮಿ
ಲವಕುಶ ಚಿತ್ರದಲ್ಲಿ ಉಪೇಂದ್ರ ಆ್ಯಪಲ್ ಕೊಡೆ ಆ್ಯಪಲ್ ಕೊಡೆ...

ಲವಕುಶ ಚಿತ್ರದಲ್ಲಿ ಉಪೇಂದ್ರ ಆ್ಯಪಲ್ ಕೊಡೆ ಆ್ಯಪಲ್ ಕೊಡೆ ಅಂತ ಹಾಡ್ತಾ...ನಾಯಕಿ ಚಾರ್ಮಿಯನ್ನು ಕಿಚಾಯಿಸುತ್ತಿದ್ದರೆ, ಪ್ರೇಕ್ಷಕರು ಅದನ್ನು ಡಬಲ್ ಮೀನಿಂಗ್ ಸಾಂಗ್ ಎಂಬಂತೆ ನೋಡಿದ್ದರು. ಕಾರಣ ಚಾರ್ಮಿಯ ಅಂಗಸೌಷ್ಟವ. ಆದರೆ ಅತಿ ಆದರೆ ಆ್ಯಪಲ್ಲೂ ಡಾಕ್ಟರ್ರನ್ನ ಹತ್ರ ಕರೆಸಿಕೊಳ್ಳುತ್ತೆ.
ಚಾರ್ಮಿ ಚಾರ್ಮ್ ಕಳ್ಕೊಂಡ್ಳು. ಸಣ್ಣ ಆಗೋಕೆ ಟ್ರೈ ಮಾಡಿದ್ಳು. ಯಾವುದೂ ಬರಕತ್ತಾಗಲಿಲ್ಲ. ಕೊನೆಗೆ ಐಟಂಸಾಂಗಿಗೆ ಸೀಮಿತಳಾಗಿ ದಕ್ಷಿಣ ಭಾರತದ ಎಲ್ಲ ಚಿತ್ರಗಳಲ್ಲೂ ಒಂದೊಂದು ಹಾಡಲ್ಲಿ ಕುಣಿದು ಹೋದಳು.
ಯಾರೇ ಕೂಗಾಡಲಿ ಚಿತ್ರದ ರೆಡಿ ಒನ್ ಟೂ ತ್ರೀ ಸಾಂಗ್ ನೆನಪಿದೆಯಲ್ಲ. ಆ ಥರದ ಡ್ಯಾನ್ಸಿನ ಫಲವೋ ಎಂಬಂತೆ ಚಾರ್ಮಿಗೆ ಈಗ ಐಟಂ ಡ್ಯಾನ್ಸರ್ ಒಬ್ಬಳ ಜೀವನಗಾಥೆಯ ಕುರಿತ ಚಿತ್ರಕ್ಕೆ ಹೀರೋಯಿನ್ ಆಗುವ ಅವಕಾಶ ಸಿಕ್ಕಿದೆ. ಚಿತ್ರದ ಹೆಸರು ಜ್ಯೋತಿಲಕ್ಷ್ಮಿ. ಹಾಗಂತ ಇದು ಮಾಮೂಲಿ ಚಿತ್ರವಲ್ಲ. ಪೂರಿ ಜಗನ್ನಾಥ್ ನಿರ್ದೇಶನದ ಚಿತ್ರವಿದು.
ಚಾರ್ಮಿ ಈ ಪಾತ್ರಕ್ಕಾಗಿ ಯಾವ ಪರಿ ತಯಾರಿ ನಡೆಸಿದ್ದಾಳೆಂದರೆ ಪೂರಿಯ ಬೆನ್ನು ಬಿದ್ದು ಚಿತ್ರದ ಬಗ್ಗೆ ಡಿಸ್ಕಷನ್ನು ಮಾಡ್ತಿದ್ದಾಳೆ. ಪೂರಿ ಇನ್ನೂ ತನ್ನ ಕೇವ್ ಚಿತ್ರದ ಚಿತ್ರೀಕರಣವನ್ನೇ ಮುಗಿಸಿಲ್ಲ. ಆತ ಕಾಜಲ್ ಅಗರ್‌ವಾಲ್‌ಳೊಂದಿಗೆ ಗೋವಾದಲ್ಲಿ ಶೂಟಿಂಗ್ ಮಾಡುತ್ತಿದ್ದರೆ, ಚಾರ್ಮಿ ಅಲ್ಲಿಗೂ ಹೋಗಿ ಡಿಸ್ಕಷನ್ ಶುರುಮಾಡಿದ್ದಾಳೆ. ಈಕೆಯ ಇನ್ವಾಲ್ವ್‌ಮೆಂಟ್ ನೋಡಿ ಪೂರಿ ಇಂಪ್ರೆಸ್ ಆಗ್ತಾನೋ, ಇರ್ರಿಟೇಟ್ ಆಗಿ ರೀಪ್ಲೇಸ್ ಮಾಡ್ತಾನೋ ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


