ಬಾಲಿವುಡ್ ನಟಿ ದಿಯಾ ಮಿರ್ಜಾಗೆ ಹನಿಮೂನ್ ಗೂ ಸಮಯವಿಲ್ಲ
ತನ್ನ ಬಹುದಿನದ ಗೆಳೆಯ ಸಾಹಿಲ್ ಸಂಗ ರವರನ್ನು ಇತ್ತೀಚೆಗಷ್ಟೇ ಮದುವೆಯಾದ ದಿಯಾ ಮಿರ್ಜಾ

ನವದೆಹಲಿ: ತನ್ನ ಬಹುದಿನದ ಗೆಳೆಯ ಸಾಹಿಲ್ ಸಂಗ ರವರನ್ನು ಇತ್ತೀಚೆಗಷ್ಟೇ ಮದುವೆಯಾದ ದಿಯಾ ಮಿರ್ಜಾ ಮದುವೆಯ ನಂತರವೂ ಬ್ಯುಸಿ. ಈ ದಂಪತಿಗಳು ಈಗಾಗಲೇ ಪೂರ್ವನಿಯೋಜಿತ ಕೆಲಸಗಳಲ್ಲಿ ಕಾರ್ಯನಿರತರಾಗಿರುವುದರಿಂದ ತಮ್ಮ ಹನಿಮೂನ್ ಯೋಜನೆಯನ್ನು ಹಾಕಿಕೊಂಡಿಲ್ಲವಂತೆ.
೩೨ ವರ್ಷದ ನಟಿಯ ಪತಿಯಷ್ಟೇ ಅಲ್ಲದೆ ಸಾಹಿಲ್, ೨೦೧೧ ರಲ್ಲಿ ಪ್ರಾರಂಭವಾದ 'ಬಾರ್ನ್ ಫ್ರೀ ಎಂಟರ್ಟೈನ್ಮೆಂಟ್" ಎಂಬ ನಿರ್ಮಾಣ ಸಂಸ್ಥೆಯಲ್ಲಿ ದಿಯಾ ಮಿರ್ಜಾ ಅವರ ಪಾಲುದಾರ ಕೂಡ. ಈ ಸಂಸ್ಥೆಯಡಿ 'ಲವ್ ಬ್ರೇಕ್ ಅಪ್ಸ್ ಜಿಂದಗಿ' ಮತ್ತು 'ಬಾಬಿ ಜಾಸೂಸ್' ಎಂಬ ಎರಡು ಸಿನೆಮಾಗಳನ್ನು ಒಟ್ಟಿಗೆ ನಿರ್ಮಿಸಿದ್ದಾರೆ.
"ಯುವ ಜೋಡಿಗಳು ಕೆಲಸದಿಂದ ಸಮಯ ಬಿಡುವು ಮಾಡಿಕೊಂಡು ಹನಿಮೂನಿಗೆ ಹೋಗಬೇಕೆಂಬುದು ಜನರ ಒತ್ತಾಸೆ. ಆದರೆ ಸದ್ಯಕ್ಕೆ ನಾನು ಮತ್ತು ಸಾಹಿಲ್ ಕೆಲಸದಲ್ಲಿ ಒಳ್ಳೆಯ ಸಮಯ ಕಳೆಯುತ್ತಿದ್ದೇವೆ. ಇಬ್ಬರೂ ಉತ್ಸಾಹದಿಂದ ಇದ್ದೇವೆ. ಆದುದರಿಂದ ರಜೆಯ ಬಗ್ಗೆ ಯಾವುದೇ ಯೋಚನೆ ಸದ್ಯಕ್ಕಿಲ್ಲ" ಎಂದಿದ್ದಾರೆ ದಿಯಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


