ನಾನು ಖಾಸಗಿ ವ್ಯಕ್ತಿ, ನನ್ನ ಮೇಲೆ ಸಿನೆಮಾ ಬೇಡ: ಸಾನಿಯಾ ಮಿರ್ಜಾ
ಬಾಲಿವುಡ್ಡಿನಲ್ಲಿ ಕ್ರೀಡಾ ಸಾಧಕರ ಜೀವನ

ನವ ದೆಹಲಿ: ಬಾಲಿವುಡ್ಡಿನಲ್ಲಿ ಕ್ರೀಡಾ ಸಾಧಕರ ಜೀವನ ಆಧಾರಿತ ಸಿನೆಮಾಗಳು ಒಂದರ ಮೇಲೊಂದು ಗೆಲ್ಲುತ್ತಿದ್ದರೂ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ತಮ್ಮ ಜೀವನ ತೆರೆಯ ಮೇಲೆ ಕಾಣಿಸುವುದು ಇಷ್ಟವಿಲ್ಲವಂತೆ. ನನ್ನ ನಿಜ ಜೀವನದಲ್ಲಿ ನಾನು ಖಾಸಗಿ ವ್ಯಕ್ತಿ ಎಂದಿದ್ದಾರೆ.
ನನ್ನ ಜೀವನ ಆಧಾರಿತ ಯಾವುದೇ ಸಿನೆಮಾಗೂ ನಾನು ವಿವರಗಳನ್ನು ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ, ಒಂದು ಪಕ್ಷ ಮುಂದೊಂದು ದಿನ ಈ ತರಹದ ಸಿನೆಮಾ ಸಿದ್ಧವಾದರೆ ದೀಪಿಕಾ ಪಡುಕೋಣೆ ನನ್ನ ಪಾತ್ರವನ್ನು ಪೋಷಿಸಬೇಕೆಂದು ನನಗೆ ಇಷ್ಟ ಎಂದಿದ್ದಾರೆ.
ಶನಿವಾರಕ್ಕೆ ೨೮ ತುಂಬಿದ ಸಾನಿಯಾ, "ಎಗೇನಿಸ್ಟ್ ಆಲ್ ಆಡ್ಸ್" (ಎಲ್ಲ ತೊಂದರೆಗಳನ್ನೂ ಮೀಟಿ) ಎಂಬ ತಾತ್ಕಾಲಿಕ ಹೆಸರಿನ ಆತ್ಮಕಥೆ ಬರೆದಿದ್ದ, ಈಗ ಅದು ಸಂಕಲನ ಹಂತದಲ್ಲಿದೆ.
ಬಾಲಿವುಡ್ ನಟಿಯರಾದ ದಿಯಾ ಮಿರ್ಜಾ ಮತ್ತು ದಿವ್ಯಾ ದತ್ತ ಅವರೊಂದಿಗೆ ಈ ಭಾರತೀಯ ಟೆನಿಸ್ ತಾರೆ ಭಾರತೀಯ ಮಕ್ಕಳ ಸಿನೆಮಾ ಸಮಾಜ ಆಯೋಜಿಸಿದ್ದ ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


