ಸಿನಿಮಾ ಸುದ್ದಿ

ಬೆಂಕಿಪಟ್ನ ಟ್ರೇಲರ್ ನೋಡಿ ಖುಷ್ ಆದ ತಮಿಳು ನಿರ್ದೇಶಕ

ಖ್ಯಾತ ತಮಿಳು ನಿರ್ದೇಶಕ ಚೇರನ್ ಅವರು ಟಿ ಕೆ ದಯಾನಂದ ಅವರ ಚೊಚ್ಚಲ ನಿರ್ದೇಶನದ ಚಲನಚಿತ್ರ ಬೆಂಕಿಪಟ್ನ ನೋಡಲು ಆಸಕ್ತಿ ..

ಬೆಂಕಿಪಟ್ನ ಟ್ರೇಲರ್ ನೋಡಿ ಖುಷ್ ಆದ ತಮಿಳು ನಿರ್ದೇಶಕ
ಬೆಂಕಿಪಟ್ನ ಚಲನಚಿತ್ರ ಸ್ಟಿಲ್
Published On :

ಬೆಂಗಳೂರು: ಖ್ಯಾತ ತಮಿಳು ನಿರ್ದೇಶಕ ಚೇರನ್ ಅವರು ಟಿ ಕೆ ದಯಾನಂದ ಅವರ ಚೊಚ್ಚಲ ನಿರ್ದೇಶನದ ಚಲನಚಿತ್ರ ಬೆಂಕಿಪಟ್ನ ನೋಡಲು ಆಸಕ್ತಿ ತೋರಿಸಿರುವುದರಿಂದ, ದಯಾನಂದ್ ಅವರು ಖುಷಿಯಿಂದ ತೇಲುತ್ತಿದ್ದಾರೆ. ತನಗೆ ಸಿನೆಮಾ ಮಾಡಲು ಪ್ರೇರಣೆಯಾದ ಚೇರನ್ ಅವರು ಸಿನೆಮ ನೋಡಲು ಆಸಕ್ತಿ ತೋರಿಸಿರುವುದರಿಂದ ದಯಾನಂದ್ ಬಹಳ ಉಸ್ತುಕರಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಿನೆಮಾದ ಮೊದಲ ಪ್ರತಿ ಸಿಗಲಿದ್ದು, ಚೇರನ್ ಅವರನ್ನು ಸಿನೆಮಾ ವೀಕ್ಷಣೆಗೆ ಆಹ್ವಾನಿಸಲಿದ್ದಾರೆ.

ಚೇರನ್ ಅವರ ದಾಖಲೆ ಸಿನೆಮಾಗಳಾದ ಆಟೋಗ್ರಾಫ್, ಆಡುಂ ಕೂತು ಮತ್ತು ಇತರ ಸಿನೆಮಾಗಳೆ ನನಗೆ ಚಲನಚಿತ್ರ ನಿರ್ದೇಶಿಸಲು ಪ್ರೇರಣೆ. ಈ ಪ್ರಶಸ್ತಿ ವಿಜೇತ ನಿರ್ದೇಶಕನ ಅಭಿಮಾನಿಯಾಗಿ, ನನ್ನ ಖುಷಿಗೆ ಚಿತ್ರದ ಪೋಸ್ಟರ್, ಟ್ರೇಲರ್ ಮತ್ತು ಚಿತ್ರದ ಸಾರಾಂಶವನ್ನು ವಾಟ್ಸ್ ಆಪ್ ನಲ್ಲಿ ಅವರಿಗೆ ಕಳುಹಿಸಿದೆ. ಅವರು ನನಗೆ ಕರೆ ಮಾಡಿ, ಕನ್ನಡ ನಿರ್ದೇಶಕರು ಕೂಡ ನೇಟಿವಿಟಿಯನ್ನು ಗಮನದಲ್ಲಿಟ್ಟು ಇಂತಹ ಹೊಸ ಬಗೆಯ ಸಿನೆಮಾಗಳನ್ನು ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ವಿಚಾರಿಸಿ ಚಿತ್ರ ನೋಡಲು ಬೆಂಗಳೂರಿಗೆ ಬರುವುದಾಗಿ ತಿಳಿಸಿದರು. ಈ ಅನಿರೀಕ್ಷಿತ ಕರೆಯಿಂದ ನನಗೆ ಅತೀವ ಖುಷಿಯಾಯ್ತು" ಎಂದು ವಿವರಿಸುತ್ತಾರೆ ದಯಾನಂದ್.

ದಿನೇಶ್ ಕುಮಾರ್ ರಚಿಸಿ, ವಿಜಯ ಪ್ರಕಾಶ್ ಹಾಡಿರುವ ಈ ಚಿತ್ರದ ಒಂದು ಹಾಡು 'ದೂರಿ ದೂರಿ' ಈಗಾಗಲೇ ಜನರ ಮನ್ನಣೆ ಗಳಿಸಿದ್ದು, ಅರುಣ್ ಸಾಗರ, ಅನುಶ್ರೀ ಮತ್ತು ಹೊಸ ನಟ ಪ್ರತಾಪ್ ನಾರಾಯಣ್ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.