ಸಿನಿಮಾ ಸುದ್ದಿ

ಲವ್ ಜಿಹಾದ್ ನಲ್ಲಿ ನಂಬಿಕೆಯಿಲ್ಲ, ನಾನು ಪ್ರೀತಿಯನ್ನಷ್ಟೇ ನಂಬುವುದು: ಕರೀನಾ

ನಾನು ಪ್ರೀತಿಯ ಭಾವನೆಗಳನ್ನಷ್ಟೆ..

ಲವ್ ಜಿಹಾದ್ ನಲ್ಲಿ ನಂಬಿಕೆಯಿಲ್ಲ, ನಾನು ಪ್ರೀತಿಯನ್ನಷ್ಟೇ ನಂಬುವುದು: ಕರೀನಾ
ಕರೀನಾ ಕಪೂರ್ (ಸಂಗ್ರಹ ಚಿತ್ರ)
Published On :

ಮುಂಬೈ: ನಾನು ಪ್ರೀತಿಯ ಭಾವನೆಗಳನ್ನಷ್ಟೆ ನಂಬುತ್ತೇನೆ. ಜಾತಿ, ಮತ, ಧರ್ಮದ ಹೊರತಾಗಿ ಇಬ್ಬರ ಮಧ್ಯೆ ಪ್ರೀತಿ ಹುಟ್ಟಬಹುದು. ಆದುದರಿಂದ ಲವ್ ಜಿಹಾದ್ ಸಿದ್ಧಾಂತದ ಮೇಲೆ ನನಗೆ ನಂಬಿಕೆಯಿಲ್ಲ ಎಂದಿದ್ದಾರ ಖ್ಯಾತ ಬಾಲಿವುಡ್ ನಟಿ ಕರೀನಾ ಕಪೂರ್.

ಹಿಂದೂ ಹುಡುಗಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಮುಸ್ಲಿಂ ಯುವಕರು ಮಡೆವೆಯಾಗುವ ಯೋಜನೆಯನ್ನು ಲವ್ ಜಿಹಾದ್ ಎನ್ನುವ ಯೋಜನೆಯ ಬಗ್ಗೆ, ನಟ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿರುವ ಕರೀನಾ ಕಪೂರ್ ಅವರಲ್ಲಿ ಕೇಳಿದಾಗ "ನನಗೆ ಪ್ರೀತಿಯ ಭಾವನೆಗಳಲ್ಲಷ್ಟೆ ನಂಬಿಕೆ" ಎಂದಿದ್ದಾರೆ.

"ಸೈಫ್ ಅವರಿಗೆ ಬಹಳ ವಿಶಾಲ ಮನೋಭಾವವಿದೆ ಹಾಗು ಅವರು ಕೂಡ ಲವ್ ಜಿಹಾದ್ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರು ನನ್ನ ರೂಪದಲ್ಲಿ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದಾರೆ. ನಾವು ರಿಜಿಸ್ಟರ್ಡ್ ಮದುವೆಯಾಗಿದ್ದೇವೆ" ಎನ್ನುತ್ತಾರೆ ನಟಿ.

"ಪ್ರೀತಿಯನ್ನು ಹೆಸರಿಸಲು ಆಗುವುದಿಲ್ಲ. ಅದು ತೀವ್ರ ಭಾವೋದ್ವೇಗ, ಲಾಲಸೆ.. ಅದರಲ್ಲಿ ವಿವರಿಸಲಾಗದಂತ ಇನ್ನೂ ವಿಷಯಗಳಿವೆ. ಇದು ಇಬ್ಬರು ಮನುಷ್ಯರ ನಡುವೆ ಹುಟ್ಟಬಲ್ಲದ್ದು "ಎನ್ನುತ್ತಾರೆ ಕರೀನಾ.

"ಈಗ ಯಾರಾದರು ಒಬ್ಬ ಹಿಂದೂ, ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸಿದಾಗ ಅದನ್ನು ತಡೆಯಲಾಗುವುದಿಲ್ಲ. ನೀನು ಮುಸ್ಲಿಮೋ? ಹಿಂದುವೋ? ಎಂದು ಕೇಳಿ ಪ್ರೀತಿ ಮಾಡಲಾಗುವುದಿಲ್ಲ. ಪ್ರೀತಿ ಅಂದರೆ ಉತ್ಕಟ ಭಾವನೆ. ಅದಕ್ಕೆ ನಾನು ಲವ್ ಜಿಹಾದ್ ನಲ್ಲಿ ನಂಬಿಕೆ ಇಡುವುದಿಲ್ಲ" ಎನ್ನುತ್ತಾರೆ ೩೪ ವರ್ಷದ ನಟಿ.

ಕಾಕತಾಳೀಯದಂತೆ ಸಲ್ಮಾನ್ ಖಾನ್ ಅವರೊಂದಿಗೆ ಕರೀನಾ ನಟಿಸುತ್ತಿರುವ ಮುಂದಿನ ಸಿನೆಮಾ "ಭಜರಂಗಿ ಭಜರಂಗಿ" ಬ್ರಾಹ್ಮಣ ಹುಡುಗಿ ಮತ್ತು ಮುಸ್ಲಿಂ ಹುಡುಗನ ನಡುವಿನ ಪ್ರೇಮ ಕಥೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.