ಪೀಕೆ ಅಲ್ಲ ವೀಕೆ!!
ಎಲ್ಲೆಡೆ ಅನುಷ್ಕಾ ಶರ್ಮ ಅಧರಗಳದ್ದೇ ಮಾತು. ಪೀಕೆ ಚಿತ್ರ ನೋಡಿದವರೂ...

ಎಲ್ಲೆಡೆ ಅನುಷ್ಕಾ ಶರ್ಮ ಅಧರಗಳದ್ದೇ ಮಾತು. ಪೀಕೆ ಚಿತ್ರ ನೋಡಿದವರೂ ಆಮಿರ್ ಖಾನ್‌ಗಿಂತ ಹೆಚ್ಚು ಅನುಷ್ಕಾ ತುಟಿಗಳ ಬಗ್ಗೆಯೇ ಕಮೆಂಟ್ ಮಾಡುತ್ತಿದ್ದಾರೆ.
ಇತ್ತ ವಿರಾಟ್ ಕೊಹ್ಲಿ ಜೊತೆಗಿನ ಆಕೆಯ ಅಫೇರ್ ವಿಷಯದಲ್ಲೂ ಅವಳ ತುಟಿಗಳದ್ದೇ ಸುದ್ದಿ. ವಿರಾಟ್ ಮುತ್ತು ಕೊಟ್ಟ ಅನ್ನೋದು, ಎಲ್ಲೋ ಬಾಂಬ್ ಬಿತ್ತು ಎಂಬಂತೆ ಹಾಟ್ ನ್ಯೂಸ್ ಆಗಲಾರಂಭಿಸಿದೆ.
ಇಷ್ಟಕ್ಕೂ ವಿರಾಟ್ ಚುಂಬಿಸಿರೋದೇನು ತುಟಿಗೆ ತುಟಿ ತಾಕಿಸಿಯೇನಲ್ಲ. ಹಾಗೆ ಚುಂಬಿಸಿರಬಹುದಾದರೂ ಅದು ಯಾರ ಕಣ್ಣಿಗೂ ಬಿದ್ದಿಲ್ಲ. ಸೆಂಚುರಿ ಹೊಡೆದ ಸಂಭ್ರಮದಲ್ಲಿ ಗ್ರೌಂಡ್ ಮಧ್ಯದಿಂದ ತನ್ನ ಬ್ಯಾಟಿನ ಮೇಲೆ ಮುತ್ತಿಟ್ಟು ಅನುಷ್ಕಾಳೆಡೆಗೆ ಹಾರಿ ಬಿಡೋದು ವಿರಾಟ್ ಇತ್ತೀಚೆಗೆ ಮಾಡಿಕೊಂಡಿರುವ ರೂಢಿ.
ಅದು ಇಷ್ಟೊಂದು ಸುದ್ದಿಯಾಗುತ್ತಿರುವುದು ಮಾತ್ರ ವಿರಾಟ್ ಅನುಷ್ಕಾ ಸಂಬಂಧವನ್ನು ರೆಕ್ಕೆ ಪುಕ್ಕ ಜೋಡಿಸಿ ಬಲಿಷ್ಠ ಗೊಳಿಸುವುದಕ್ಕಾಗಿಯೇ ಎಂಬುದು ಸತ್ಯ. ನಾನು ಅಭಿಮಾನಿಗಳತ್ತ ಮುತ್ತು ಹಾರಿಸಿದ್ದು ಅಂತ ವಿರಾಟ್ ನುಣುಚಿಕೊಳ್ಳಲು ಪ್ರಯತ್ನಿಸಿದ್ದು ಹೌದಾದರೂ, ಅನುಷ್ಕಾ ಕೂತಲ್ಲಿ ಮಾತ್ರವೇ ಇವನ ಫ್ಯಾನ್ಸ್ ಕೂತಿರೋದಾ ಅಂತ ಕಾಲೆಳೆಯುತ್ತಿದ್ದಾರೆ ಆತನ ಡ್ರೆಸ್ಸಿಂಗ್ ರೂಮ್ ಸದಸ್ಯರು! ಎಲ್ಲಕ್ಕಿಂತ ಹೆಚ್ಚಾಗಿ, ಜಗತ್ತಿನ ಜಗತ್ತೇ ಪೀಕೆ ಬಗ್ಗೆ ಮಾತಾಡುತ್ತಿದ್ದರೆ ಅನುಷ್ಕಾ ಮಾತ್ರ ವೀಕೆ ಜೊತೆ ಇರೋಕೆ ಆಸ್ಟ್ರೇಲಿಯಾಗೆ ಹಾರಿರೋದು ನೋಡಿದ್ರೆ ಗೊತ್ತಾಗಲ್ವೇ ವಿಷಯ ಏನು ಅಂತ!?.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


