ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ 'ಒಗ್ಗರಣೆ'ಯ ಘಾಟು!
ಕನ್ನಡ, ತೆಲಗು ಮತ್ತು ತಮಿಳು ...

ಬೆಂಗಳೂರು: ಕನ್ನಡ, ತೆಲಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಕಂಡು ಸಾಧಾರಣ ಯಶಸ್ಸು ಪಡೆದಿದ್ದ ಪ್ರಕಾಶ್ ರಾಜ್ ನಿರ್ದೇಶನದ 'ಒಗ್ಗರಣೆ' ಚಲನಚಿತ್ರ ಈಗ ಹಿಂದಿ ಮತ್ತು ಮರಾಠಿ ಬಾಷೆಗಳ ಅವತರಣಿಕೆಗೆ ಸಿದ್ಧವಾಗುತ್ತಿದೆ.
ಮೂರು ಭಾಷೆಗಳ ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿ-ನಿರ್ದೇಶಿಸಿದ್ದ ಪ್ರಕಾಶ್ ರಾಜ್ ಅವರೇ ಹಿಂದಿ ಮತ್ತು ಮರಾಠಿ ಅವತರಣಿಕೆಯನ್ನು ನಿರ್ದೇಶಿಸಲಿದ್ದು, ಅಲ್ಲಿ ತಮ್ಮ ಪಾತ್ರವನ್ನು ನಾನಾ ಪಾಟೇಕರ್ ನಿರ್ವಹಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಈ ಮಧ್ಯೆ ಒಗ್ಗರಣೆ ಸಿನೆಮಾವನ್ನು ದಕ್ಷಿಣ ಭಾರತ ಸಿನೆಮಾಟೋಗ್ರಾಫರ್ಸ್ ಸಂಘ ಅತ್ಯುತ್ತಮ ಸಿನೆಮಾ ಎಂದು ಗುರುತಿಸಿದ್ದು ಇದಕ್ಕೆ ಮಲೇಶಿಯಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಿದ್ದಾರೆ.
ಕೈತುಂಬಾ ಕೆಲಸಗಳಿರುವ ಪ್ರಕಾಶ್ ರಾಜ್ ಸದ್ಯಕ್ಕೆ ಬಿ ಸುರೇಶ ಅವರ 'ದೇವರ ನಾಡಿನಲ್ಲಿ' ಹಾಗೂ ದಿನೇಶ್ ಗಾಂಧಿ ಅವರ 'ಪ್ರಿಯಾಂಕ' ಸಿನೆಮಾಗಳನ್ನು ಮುಗಿಸಿದ್ದಾರೆ. ಸುದೀಪ್ ಅವರ 'ರನ್ನ' ಮತ್ತು ದರ್ಶನ್ ಅವರ 'ಐರಾವತ' ಸಿನೆಮಾಗಳ ಚಿತ್ರೀಕರಣದಲ್ಲಿ ಸದ್ಯಕ್ಕೆ ಕಾರ್ಯನಿರತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


