ಸಿನಿಮಾ ಸುದ್ದಿ

ಕಲೆಕ್ಷನ್‌ನಲ್ಲಿ ಸೋತ 'ಲಿಂಗಾ': ರಜನಿ ಮೊರೆಹೋದ ವಿತರಕರು

ಸೂಪರ್ ಸ್ಟಾರ್ ರಜನಿಕಾಂತ್...

ಕಲೆಕ್ಷನ್‌ನಲ್ಲಿ ಸೋತ 'ಲಿಂಗಾ': ರಜನಿ ಮೊರೆಹೋದ ವಿತರಕರು
ಲಿಂಗಾ
Published On :

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾದ ಲಿಂಗಾ ಚಿತ್ರ ಎರಡನೇ ವಾರ ಕಳೆಯುತ್ತಿದ್ದಂತೆ ಬಾಕ್ಸ್ ಆಫೀಸ್ ಕಲೆಕ್ಷನ್ ಕಡಿಮೆಯಾಗಿದೆ.

ಈ ವರ್ಷದ ರಜನಿಕಾಂತರ ಬಹುನಿರೀಕ್ಷಿತ ಲಿಂಗಾ ಚಿತ್ರದ ಬಾಕ್ಸ್ ಆಫೀಸ್‌ ರಿಪೋರ್ಟ್ ತಲೆಕೆಳಗಾಗಿದೆ. ಸಾಧಾರಣ ಕಥೆ ಇರುವ ಈ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ವೇಳೆ ಸಾಕಷ್ಟು ಇತರ ಹೀರೋಗಳ ಚಿತ್ರಗಳು ತೆರೆಗೆ ಬಂದಿದ್ದು ಬಾಕ್ಸ್ ಆಫೀಸ್ ಕಲೆಕ್ಷನ್ ಕಡಿಮೆಯಾಗಲು ಕಾರಣ ಎನ್ನಲಾಗುತ್ತಿದೆ.

ಲಿಂಗಾ ಚಿತ್ರ ಸುಮಾರು 100 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಬಿಡುಗಡೆ ದಿನ ಉತ್ತಮ ಪ್ರತಿಕ್ರಿಯೆ ಸಿಕ್ಕದ್ದ ಚಿತ್ರ ಇದೀಗ ಕಲೆಕ್ಷನ್ ಡಲ್ ಹೊಡೆಯುತ್ತಿದೆ. ತಮಿಳುನಾಡಿನಲ್ಲೇ ರು. 38 ಕೋಟಿ ಇದುವರೆಗಿನ ಗಳಿಕೆಯಾಗಿದೆ.

ಉಳಿದಂತೆ ಚಿತ್ರದ ಗಳಿಕೆ ನಿರಾಶಾದಾಯಕವಾಗಿದೆ ಅಂತ ವಿತರಕರು ಹಾಗೂ ಚಿತ್ರಮಂದಿರದ ಮಾಲೀಕರು ನಿರ್ಮಾಪಕ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಲಿಂಗ ಚಿತ್ರ ಗಳಿಕೆ ನಿರಾಶಾದಾಯಕವಾಗಿರುವುದರಿಂದ ನಮ್ಮ ಪರಿಸ್ಥಿತಿಯನ್ನು ತಿಳಿದು ರಜನಿಕಾಂತ ಅವರೇ ಮಧ್ಯಪ್ರವೇಶಿಸಿ ವಿತರಕರಿಗೆ ಪರಿಹಾರ ನೀಡಬೇಕಾಗಿ ಮನವಿ ಮಾಡುವುದಾಗಿ ವಿತರಕರು ತೀರ್ಮಾನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.