ಸಿನಿಮಾ ಸುದ್ದಿ

ಆಸ್ಕರ್ ರೇಸ್‍ನಲ್ಲಿ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್

ಸ್ಲಂಡಾಗ್ ಮಿಲಿಯನೇರ್ ಚಿತ್ರದ...

ಆಸ್ಕರ್ ರೇಸ್‍ನಲ್ಲಿ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್
ಎ. ಆರ್ ರೆಹಮಾನ್
Published On :

ಚೆನ್ನೈ: ಸ್ಲಂಡಾಗ್ ಮಿಲಿಯನೇರ್ ಚಿತ್ರದ ಸಂಗೀತಕ್ಕಾಗಿ ಆಸ್ಕರ್ ಪ್ರಶಸ್ತಿ ಗಳಿಸಿದ್ದ ಸಂಗೀತ ಮಾಂತ್ರಿಕ ಎ. ಆರ್ ರೆಹಮಾನ್ ಮತ್ತೆ ಆಸ್ಕರ್ ಪ್ರಶಸ್ತಿ ರೇಸ್‍ನಲ್ಲಿದ್ದಾರೆ.

ರೆಹಮಾನ್ ಅವರ ಮೂರು ಚಿತ್ರಗಳು ಈ ಬಾರಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದು, ಜನವರಿ 15 ರಂದು ಆಸ್ಕರ್ ಪ್ರಶಸ್ತಿಯ ವಿಜೇತರನ್ನ ಘೋಷಿಸಲಾಗುತ್ತದೆ.

ರೆಹಮಾನ್ ಸಂಗೀತ ನೀಡಿರುವ ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಕೊಚಾಡಿಯನ್ ಚಿತ್ರ ಸೇರಿದಂತೆ ಹಂಡ್ರೆಡ್ ಪೂಟ್ ಜರ್ನಿ, ಮಿಲಿಯನ್ ಡಾಲರ್ ಆರ್ಮ್ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿವೆ.

ಹಿಂದೆ ಹಲವು ಬಾರಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವ ರೆಹಮಾನ್ ಡ್ಯಾನಿ ಬೋಯ್ಲ್ ನಿರ್ದೇಶನದ ಸ್ಲಂಡಾಗ್ ಮಿಲಿಯನೇರ್ ಚಿತ್ರ ಸಂಗೀತಕ್ಕಾಗಿ ಆಸ್ಕರ್ ಪ್ರಶಸ್ತಿ ಗಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.