ಸ್ಯಾಂಡಲ್‌ವುಡ್ ಕೃಷ್ಣನಿಗೆ ಕೂಡಿಬಂದ ಕಂಕಣ ಭಾಗ್ಯ
ಸ್ಯಾಂಡಲ್‌ವುಡ್ ಕೃಷ್ಣನಿಗೆ ಕೂಡಿಬಂದ ಕಂಕಣ ಭಾಗ್ಯ, ಡಿ.18ಕ್ಕೆ ಮದುವೆ

'ಎಕ್ಸ್ ಕ್ಯೂಸ್ ಮಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಅಜಯ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮುಂದಿನವಾರವೇ ಅವರ ಗಟ್ಟಿ ಮಳೆ ನಡೆಯಲಿದೆ.
ಅಷ್ಟಕ್ಕು ಅವರು ಕೈ ಹಿಡಿಯಲಿರುವ ಹುಡುಗಿಯ ಹೆಸರು ಸ್ವಪ್ನ. ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಸ್ವಪ್ನ ಹೊಸಪೇಟೆಯ ಮೂಲದವರು. ಇದೊಂದು ಲವ್ ಕಮ್ ಅರೆಂಜ್ ಮ್ಯಾರೆಜ್ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಅಜಯ್ ರಾವ್ ಅಭಿನಯದ ಹಾಗೂ ರವಿ ವರ್ಮಾ ನಿರ್ದೇಶನದ 'ಜೈ ಭಜರಂಗಬಲಿ' ಚಿತ್ರದ ಪ್ರಮೋಷನಲ್ ಅಕ್ಟಿವಿಟಿಯಲ್ಲಿ ಬ್ಯುಸಿಯಾಗಿದ್ದು, ಪರ್ಯಾಯವಾಗಿ ತಮ್ಮ ಮದುವೆ ಕಾರ್ಯದಲ್ಲೂ ಗಮನಹರಿಸುತ್ತಿದ್ದಾರೆ.
ಡಿಸೆಂಬರ್ 18 ರಂದು ಮದುವೆ ದಿನಾಂಕ ನಿಗಧಿಯಾಗಿದೆ. ಸ್ಯಾಂಡಲ್‌ವುಡ್ ತಾರೆಗಳಂತೆ ಅಜಯ್ ಅವರು ತಮ್ಮ ಮದುವೆಯನ್ನು ಧಾಂಧೂಂ ಆಗಿ ನಡೆಸಲು ಇಚ್ಚಿಸದೆ, ಸರಳ ರೀತಿಯಲ್ಲೇ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಜಯ್ ರಾವ್, ಗೃಹಸ್ಥಾಶ್ರಮಕ್ಕೆ ಕಾಲಿಡಲು ಇದು ಸೂಕ್ತ ಸಮಯವಾಗಿದೆ. ಆದ್ದರಿಂದಾಗಿ ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ವಿವರಿಸಿದರು.
ಇದೇ ವೇಳೆ ಮಾತನಾಡಿದ ಅಜಯ್. ಟ್ರಾಜಿಡಿ ಎಂಡ್ ಕಥೆಯಾಗಿದ್ದ ತಾಜ್‌ಮಹಲ್ ಚಿತ್ರ ನನ್ನ ಕೆರಿಯರ್‌ನಲ್ಲಿ ಒಳ್ಳೆಯ ಟರ್ನ್ ನೀಡಿತ್ತು. ಆದರೆ ಮುಂದಿನ ಚಿತ್ರಗಳಲ್ಲಿ ಟ್ರಾಜಿಡಿ ಎಂಡ್ ಬದಲು ಆಕ್ಷನ್ ಚಿತ್ರಗಳಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದರು. ಅದರೆಂತೆಯೇ 'ಜೈ ಭಜರಂಗಬಲಿ' ಚಿತ್ರವೂ ಉತ್ತಮ ಮನೋರಂಜನಾ ಚಿತ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


