'ರಾಜಕಾರಣಿ'ಯಾಗಲಿದ್ದಾರೆ ರವಿಚಂದ್ರನ್!

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ದೃಶ್ಯ ಚಿತ್ರದ ಯಶಸ್ಸಿನ ನಂತರ ಈಗ ಮತ್ತೊಂದು ಮಲೆಯಾಳಂ ಚಿತ್ರದ ರಿಮೇಕ್ ಮಾಡಲು ಮುಂದಾಗಿದ್ದಾರೆ. ಮೋಹನ್ಲಾಲ್ ಅಭಿನಯದ 'ಮಿಸ್ಟರ್ ಫ್ರಾಡ್' ಚಿತ್ರವನ್ನು ರವಿಚಂದ್ರನ್ ಅವರು ಕನ್ನಡಕ್ಕೆ ತರುತ್ತಿದ್ದಾರೆ ಎನ್ನಲಾಗಿದೆ.
ಬಿ. ಉನ್ನಿಕೃಷ್ಣ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದ 'ವಿಸ್ಟರ್ ಫ್ರಾಡ್' 2014ರ ಮೇನಲ್ಲಿ ತೆರೆಕಂಡಿತ್ತು. ಇದೊಂದು ಆ್ಯಕ್ಷನ್ ಮತ್ತು ತ್ರಿಲ್ಲರ್ ಚಿತ್ರವಾಗಿದ್ದು, ಒಬ್ಬ ಸಾಮಾನ್ಯ ವ್ಯಕ್ತಿ ರಾಜಮನೆತನಕ್ಕೆ ಸೇರಿದ ಆಸ್ತಿಯನ್ನು ಲೂಟಿ ಮಾಡುವ ಕಥೆ ಹೊಂದಿದೆ.
ಕನ್ನಡದಲ್ಲಿ ರವಿಚಂದ್ರನ್ ಅವರು ನಟಿಸಿ, ನಿರ್ದೇಶನ ಮಾಡಲು ಮುಂದಾಗಿರುವ ಈ ಚಿತ್ರಕ್ಕೆ 'ರಾಜಕಾರಣಿ' ಎಂದು ಹೆಸರಿಡುವ ಸಾಧ್ಯತೆ ಇದೆ.
ಈ ಮಧ್ಯೆ, ರವಿಚಂದ್ರನ್ ಅವರು ಮತ್ತೆ ಮಲೆಯಾಳಂ ಸಿನಿಮಾ ರಿಮೇಕ್ ಮಾಡುವುದಕ್ಕೆ ಸ್ಯಾಂಡಲ್ವುಡ್ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರವಿಚಂದ್ರನ್ ಅವರು 'ಮಿಸ್ಟರ್ ಫ್ರಾಡ್' ಅನ್ನು ಕನ್ನಡದಲ್ಲಿ ಏಕೆ ರಿಮೇಕ್ ಮಾಡುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಎಲ್ಲವು ಅಂದುಕೊಂಡಂತೆ ಆದರೆ, ಅಂಧ, ಅಪೂರ್ವ ಮತ್ತು ರಣಧೀರ ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ರವಿಚಂದ್ರನ್ ಅವರ, ನಾಲ್ಕನೇ ಚಿತ್ರ 'ರಾಜಕಾರಣಿ' ಸಹ ಸದ್ಯದಲ್ಲೇ ಸೆಟ್ಟೇರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


