'ಕ' ಈ ವಾರ ತೆರೆಗೆ

ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ಪುತ್ರ ಸಾಯಿ ಕೃಷ್ಣ ಅವರ ಬಹು ನಿರೀಕ್ಷಿತ ಕನ್ನಡ ಚಿತ್ರ ‘ಕ’ ಈ ವಾರ ಬಿಡುಗಡೆ ಆಗುತ್ತಿದೆ. ಕುತೂಹಲದ ಜೊತೆಗೆ ಈಗಿನ ಯುವಜನರ ನಾಡಿ ಮಿಡಿತವನ್ನು ಅರಿತಿರುವ ಸಾಯಿ ಕೃಷ್ಣ ಒಂದು ವಿಶೇಷ ಸಿನಿಮಾವನ್ನೇ ಮಾಡಿದ್ದಾರೆ ಎಂಬ ಸುದ್ದಿ ಹರಡಿದೆ.
ಸಾಯಿ ಫಿಲ್ಮ್ಸ್ ‘ಕ’ ಚಿತ್ರ ಹಾಡುಗಳಿಂದ ಈಗಾಗಲೇ ಗೆದ್ದಿದ್ದು ಆಗಿದೆ. ಯು/ಎ ಅರ್ಹತಾ ಪತ್ರ ಸ್ವೀಕರಿಸಿರುವ ‘ಕ’ ...‘ಪ್ಯಾರ್ ರಿಸ್ಕ್ ಔರ್ ಮೋಹಬತ್...ಎಂಬ ಉಪಶೀರ್ಷಿಕೆ ಇಟ್ಟುಕೊಂಡಿದೆ.
ಸಾಯಿ ಕೃಷ್ಣ ಅವರು ‘ಕ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಅಲ್ಲದೆ ಅವರೇ ನಿರ್ಮಾಪಕರು ಸಹ. ಜಯಣ್ಣ ಕಂಬೈನ್ಸ್ ಅರ್ಪಿಸುವ ಸಂಗೀತ ಮೂವೀಸ್ ಅವರ ‘ಕ’ ಚಿತ್ರದ ನಿರ್ಮಾಪಕರು ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್.
ಶರತ್, ಮೋನಿಶ್ ನಾಗರಾಜ್, ವಿಶಾಲ್ ನಾಯರ್, ಶೈನ್ ಶೆಟ್ಟಿ ಜೊತೆಗ ಪವಿತ್ರ, ಅನುಷ, ಪಲ್ಲವಿ, ದೀಪ, ದೀಪ್ತಿ ಸಹ ತಾರಾಗಣದಲ್ಲಿ ಇದ್ದಾರೆ. ಛಾಯಾಗ್ರಹಣ ಸ್ಟೀವ್ ಬೆಂಜಮಿನ್, ಸಂಗೀತ ಗಣೇಶ್ ನಾರಾಯಣ ಅವರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


