ಮೈ ಹಸ್ಬೆಂಡ್ ಮೇಡ್ ಮಿ ಎ ಪ್ರಾಸ್ಟಿಟ್ಯೂಟ್: ವೈರಲ್ ಆದ ಕಿರು ಸಿನೆಮಾ
ಮದ್ಯಪಾನ ಮಾಡಿ ವಾಹನ ಚಾಲನೆ...

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ವಿಷಯದ ಮೇಲೆ ಮಾಡಿರುವ "ಮೈ ಹಸ್ಬೆಂಡ್ ಮೇಡ್ ಮಿ ಎ ಪ್ರಾಸ್ಟಿಟ್ಯೂಟ್" (ನನ್ನ ಗಂಡ ನನ್ನನ್ನು ವೇಶ್ಯೆಯನ್ನಾಗಿಸಿದ) ಕಿರುಸಿನೆಮಾ, ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಯೂ ಟ್ಯೂಬ್ ನಲ್ಲಿ ಈಗಾಗಲೇ ೧೫ ಲಕ್ಷ ಜನ ಇದನ್ನು ನೋಡಿದ್ದಾರೆ.
ಜಾಯ್ಬರ್ತೋ ದತ್ತಾ ಅವರ ಸ್ಕ್ರಿಪ್ಟ್ ಇರುವ ಈ ಸಿನೆಮಾದ ನಿರ್ದೇಶಕ ಪಂಕಜ್ ಠಾಕೂರ್. ಮದ್ಯಪಾನ ಮಾಡಿ ಅಪಘಾತಕ್ಕೆ ಒಳಗಾಗಿ ಕೋಮಾಗೆ ಹೋಗುವ ತನ್ನ ಗಂಡನನ್ನು ಜೀವಂತವಾಗಿರಿಸಲು ವೇಶ್ಯಾವಟಿಕೆಗೆ ಇಳಿಯುವ ಯುವತಿಯ ಕಥೆ ಇದು.
"ಪ್ರತಿ ವರ್ಷ ಸುಮಾರು ೧.೩೪ ಲಕ್ಷ ಜನ ರಸ್ತೆಗಳ ಅಪಘಾತಗಳಲ್ಲಿ ಮರಣ ಹೊಂದುತ್ತಾರೆ. ಇದರಲ್ಲಿ ೭೦% ಜನ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದಲೇ ಸಾವನ್ನಪ್ಪುವುದು. ಮದ್ಯಪಾನ ಮಾಡಿಯೂ ತಾನು ಉತ್ತಮವಾಗಿ ವಾಹನ ಚಾಲನೆ ಮಾಡಬಲ್ಲೆ ಎಂದು ಬೊಗಳೆ ಕೊಚ್ಚುವವರಿಗೆ ಈ ಸಿನೆಮಾ" ಎನ್ನುತ್ತಾರೆ ರೋಹಿತ್ ಸಕುನಿಯಾ, ಮಿಶನ್ ಶೇರಿಂಗ್ ನಾಲೆಜ್ ನ ಸಂಸ್ಥಾಪಕ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


