ಸಿನಿಮಾ ಲೇಖನ

ಬಿಲಿಯನ್ ಡಾಲರ್ ಬೇಬಿ

ಬಿಲಿಯನ್ ಡಾಲರ್ ಬೇಬಿ
Published On :

ಶ್ರೀಸಾಯಿಬಾಲಾಜಿ ಕಂಬೈನ್ಸ್ ಲಾಂಛನದಲ್ಲಿ ದಿನಕರ್ ಗಿರಿರಾಜು ಹಾಗೂ ಸುನಿತಾದಿನಕರ್ ಅವರು ನಿರ್ಮಿಸಿರುವ ಬಿಲಿಯನ್ ಡಾಲರ್ ಬೇಬಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಕಿರಿ ವಯಸ್ಸಿನಲ್ಲೇ ತನ್ನ ಸಾಧನೆಗಳಿಂದ ಖ್ಯಾತಿ ಪಡೆದಿರುವ ಶ್ರೀಯಾ ದಿನಕರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲೂ ಶ್ರೀಯಾ ದಿನಕರ್ ಕಾಣಿಸಿಕೊಂಡಿದ್ದಾರೆ. ಸುರೇಶ್ ಹೆಬ್ಳಿಕರ್, ಶಿವಧ್ವಜ್, ಸಂಗೀತ, ಯಮುನಮೂರ್ತಿ, ನವರಸ ರಾಮಕೃಷ್ಣ, ಬ್ಯಾಂಕ್ ಜನಾರ್ಧನ್, ಪುಷ್ಪಸ್ವಾಮಿ, ಅರವಿಂದ್, ಪ್ರೇಮಲತಾ, ಅಶ್ವಿನಿ, ಬೇಬಿ ಶಾರದ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. <

ಮತ್ತೆ ಸತ್ಯಾಗ್ರಹ   
ಆತ್ಮಬಿಂದು ವಿಷನ್ಸ್ ಅರ್ಪಿಸುತ್ತಿರುವ ಮತ್ತೆ ಸತ್ಯಾಗ್ರಹ ಚಲನಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.  ಬಿ. ಶಿವಾನಂದ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ದತ್ತಾತ್ರೇಯ, ಯೋಗೀಶ್, ನೇಹ ಪಾಟಿಲ್, ಅನಿಲಲ್ಕುಮಾರ್, ಅಂಬುಜಾಕ್ಷಿ, ಎಸ್.ಗೋವಿಂದ್ ಮತ್ತಿತರರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಮ್ಯಾಥ್ಯೂರಾಜನ್  ಛಾಯಾಗ್ರಹಣ, ಬಿ.ಆರ್.ಹೇಮಂತ್‌ಕುಮಾರ್ ಸಂಗೀತ ಹಾಗೂ ಸಂಕಲನ ಸಂಜೀಮ್ ರೆಡ್ಡಿ ಅವರದಾಗಿದೆ. ನಿರ್ಮಾಣ ಸಾರಥ್ಯದಲ್ಲಿ  ಶ್ರೀನಿವಾಸ್, ಕೆ. ದತ್ತಾತ್ರೇಯ, ಎಸ್.ಕೆ. ಅನಂತ್, ಬಿ.ಹೆಚ್. ಸುರೇಶ್, ಕೇಶವ, ಶ್ರೀನಿಧಿ ಹಾಗೂ ಮೋಹನ್ ನಾಗಮ್ಮನವರ್ ನಿರ್ದೇಶಕ ಬಿ. ಶಿವಾನಂದ ಅವರೊಂದಿಗೆ ಕೈಜೋಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.