ಸ್ವರದ ಬಗ್ಗೆ ಅಪಸ್ವರ

ಸಲದ ಬಿಗ್‌ಬಾಸ್‌ನಲ್ಲಿ ಕೇಳಿಬರುತ್ತಿರುವ ಹಿನ್ನೆಲೆ ಯಾರದು? ಎಂಬುದು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಕೇಳಬಹುದಾದ ಒಂದು ಕೋಟಿ ರುಪಾಯಿಯ ಪ್ರಶ್ನೆ ಏನಲ್ಲ ಬಿಡಿ. ಆದರೂ ಈ ಬಿಗ್‌ಬಾಸ್ ವಾಯ್ಸ್‌ನ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡಿದ್ದವು. ಮತ್ತು ಮುಖ್ಯ ಆ್ಯಂಕರ್‌ಸುದೀಪ್ ಅವರ ಜೊತೆ ಪ್ತಿದಿನದ ಸೋನ ವಿವರ ನೀಡುವ ಈ ಬಾಗ್ ಬಾಸ್ ಸ್ವರ ಅಮಿತ್ ಭಾರ್ಗವ ಎಂಬುವವರದ್ದು ಎಂಬ ಗಾಳಿಸುದ್ದಿಗಳು ತೇಲಾಡಿದಾಗ ಅದರ ಬಗ್ಗೆ ಅಪಸ್ವರಗಳು ಕೇಳಿಬಂದಿದ್ದವು. ಹಾಗಾಗಿ ಕಳೆದ ವರ್ಷದ ಬಿಗ್‌ಬಾಸ್‌ನಲ್ಲಿ ಅಮಿತ್ ಭಾರ್ಗವ ಕಂಠದಾನ ಮಾಡಿದ್ದರು ಎಂಬ ಮಾತಿಗೆ ಈಗ ಬಿಗ್‌ನಾಯ್ಸ್ ಕೇಳಿಬರುತ್ತಿದೆ. ಅಸಲಿಗೆ ಬಿಗ್‌ಬಾಸ್‌ನ ಕಳೆದ ಸೀಸನ್‌ಗೆ ತಮ್ಮ ಕಂಠದ ಮೂಲಕ ಜೀವ ತುಂಬಿದ್ದು ನಂದ ಎಂಬುವವರು. ಅವರ ಬಗ್ಗೆ ನಿಖರವಾಗಿ ಗೊತ್ತಾಗಬೇಕು ಎಂದರೆ ಸುಮನಾ ಕಿತ್ತೂರು ನಿರ್ದೇಶನದ ಎದೆಗಾರಿಕೆ ಚಿತ್ರದಲ್ಲಿ ನಟ ಅತುಲ್ ಕುಲಕರ್ಣಿ ಅವರ ಪಾತ್ರ ಅಷ್ಟು ಚೆನ್ನಾಗಿ ಮೂಡಿಬರಲು ಕಾರಣವಾಗಿದ್ದು ಈ ನಂದ ಅವರ ವಾಯ್ಸೇ ಪ್ರಮುಖ ಕಾರಣ. ಹೀಗೆ ಅತುಲ್‌ಗೆ ಕಂಠದಾನ ಮಾಡಿದ್ದ ನಂದ ಬಿಗ್‌ಬಾಸ್‌ನ ಮೊದಲ ಸೀಸನ್‌ನಲ್ಲಿ ವಾಯ್ಸ್ ಓವರ್ ನೀಡಿ ವೀಕ್ಷಕರನ್ನು ಸೆಳೆದಿದ್ದರು. ಅವರ ಜೊತೆಗೆ ಇನ್ನಿತರ ಕಾಮೆಂಟರಿ ನೀಡಿದ್ದು ಕಿರುತೆರೆಯ ವಾಯ್ಸ್ ಓವರ್ ನೀಡುವಲ್ಲಿ ದೊಡ್ಡ ಹೆಸರು ಮಾಡಿರುವ ಪ್ರದೀಪ್ ಬಡೆಕ್ಕಿಲ. ಆದರೆ ನಂದಾ, ಈ ಬಾರಿಯ ಬಿಗ್‌ಬಾಸ್‌ನ ಸೀಸನ್‌ನಲ್ಲಿ ಬರುತ್ತಿರುವ ವಾಯ್ಸ್ ನಿಮ್‌ದಾ ಅಂತ ಕೇಳಿದರೆ ಅವರ ಉತ್ತರ ಅಲ್ಲ ಎಂಬುದು. ಪ್ರದೀಪ್ ಬಡೆಕ್ಕಿಲ ಕೂಡ ತಮಿಳು ಧಾರಾವಾಹಿ, ಕನ್ನಡ ಸಿನಿಮಾ ಅಂತ ಬ್ಯುಸಿಯಾಗಿರುವುದರಿಂದ ಅವರೂ ಕೂಡ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಅವರು ಭಾಗಿಯಲ್ಲ. ಹಾಗಾದರೆ ಈಗ ಕೇಳಿಬರುತ್ತಿರುವ ವಾಯ್ಸ್ ಯಾರದ್ದು ಎಂದರೆ ಅದಕ್ಕೆ ಉತ್ತರ ವಿವೇಕ್ ಮತ್ತು ಅವನೀಧರ್ ಎಂಬ ಇಬ್ಬರು. ಅಂದಹಾಗೆ, ಈ ಇಬ್ಬರ ವಾಯ್ಸ್ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. ಇಂಟರ್‌ನೆಟ್‌ನಲ್ಲಿ ಅನೇಕ ವೀಕ್ಷಕರು 'ಈ ವಾಯ್ಸ್ ಚೆನ್ನಾಗಿಲ್ಲ, ಕಾರ್ಯಕ್ರಮಕ್ಕೆ ಸೂಟ್ ಆಗುತ್ತಿಲ್ಲ ಬದಲಾಯಿಸಿ' ಎಂಬ ಕಾಮೆಂಟ್‌ಗಳನ್ನೂ ಹಾಕಿದ್ದಾರೆ. ಬಹುಶಃ ಈ ವೇಳೆಗೆ ವಾಯ್ ಓವರ್ ಕೊಡುವವರು ಬದಲಾಗಿದ್ದರೂ ಆಶ್ಚರ್ಯವಿಲ್ಲ. ಅದು ಬೇರೆ ವಿಷಯ ಬಿಡಿ. ಆದರೆ ಆಶ್ಚರ್ಯ ಎಂಬಂತೆ ಕಳೆದ ಬಾರಿಯ ಬಿಗ್‌ಬಾಸ್‌ಗೂ, ಈ ಬಾರಿಯ ಬಿಗ್‌ಬಾಸ್‌ಗೂ ಕಂಠದಾನದ ವಿಷಯದಲ್ಲಿ ಸಂಬಂಧವೇ ಇಲ್ಲದ ಅಮಿತ್ ಎಂಬುವವರ ಹೆಸರು ಸುದ್ದಿ ಮಾಡಿದ್ದು ವಿಪರ್ಯಾಸ. ಇದು ಬಿಗ್‌ಬಾಸ್‌ನ ಅಚ್ಚರಿಗಳಲ್ಲಿ ಒಂದಿರಬಹುದು ಎಂಬುದು ಬರೀ ಕುಹಕ ಅಷ್ಟೇ.
= ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


