ಕರೆಂಟ್ ಇಲ್ಲದ ಬಳ್ಳಾರಿಗೆ ಪವರ್

ಗೋಪಿ ಅಚಂಟ, ರಾಮ್ ಅಚಂಟ ಹಾಗೂ ಅನಿಲ್ ಸುಂಕರ ನಿರ್ಮಿಸುತ್ತಿರುವ ಹಾಗೂ ಕೊಲ್ಲ ಪ್ರವೀಣ್‌ರ ಸಹ ನಿರ್ಮಾಣದ 'ಪವರ್' ಚಿತ್ರದ ಸಿಡಿ ಬಿಡುಗಡೆ ಬಳ್ಳಾರಿಯಲ್ಲಿ ನಡೆಯಿತು. ಎಸ್.ಎಸ್. ತಮನ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಸಿಡಿಯನ್ನು ಲಹರಿ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಹಿಂದೆ ಪ್ರಿನ್ಸ್ ಮಹೇಶ್ ಬಾಬು ಅಭಿನಯಿಸಿದ 'ದೂಕುಡು' ಚಿತ್ರವನ್ನು ಕನ್ನಡದಲ್ಲಿ 'ಪವರ್' ಆಗಿ ನಿರ್ದೇಶಕ ಕೆ. ಮಾದೇಶ್ ನಿರೂಪಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಪುನೀತ್ ರಾಜಕುಮಾರ್ 'ಪವರ್' ಆಗಿ ನಟಿಸಿದ್ದಾರೆ. ಖ್ಯಾತ ನಟಿ ತ್ರಿಷಾ ಚಿತ್ರಕ್ಕೆ ನಾಯಕಿ. ಪ್ರಿನ್ಸ್ ಮಹೇಶ್ ಬಾಬು ಆಡಿಯೋ ಸಿಡಿ ಬಿಡುಗಡೆ ಮಾಡಿದರು. ಮೊದಲ ಸಿಡಿಯನ್ನು 'ದೂಕುಡು' ನಿರ್ದೇಶಕ ಶ್ರೀನುವೈಟ್ಲಾ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಮಹೇಶ್ ಬಾಬು 'ಪೋಕಿರಿ' ಚಿತ್ರದ ಸಂದರ್ಭದಲ್ಲಿ ವರನಟ ಡಾ.ರಾಜಕುಮಾರ್‌ರ ಮನೆಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. 'ಪುನೀತ್‌ರದ್ದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು. ನನ್ನ ಆತ್ಮೀಯರು ಕೂಡ. ನನ್ನ ದೂಕುಡು ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾವೂ ದೊಡ್ಡ ಹೆಸರು ಮಾಡಲಿದೆ' ಎಂದು ಭವಿಷ್ಯ ನುಡಿದರು.
ಇದೇ ವೇಳೆ ಪುನೀತ್, 'ಮಹೇಶ್ ಬಾಬು ಇಲ್ಲಿಗೆ ಬಂದು ನನ್ನ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದು ತುಂಬಾ ಖುಷಿಯಾಗಿದೆ. ಅಲ್ಲದೆ ಬಳ್ಳಾರಿ ನಗರ ನನಗೆ ಇಷ್ಟವಾದ ಊರು. ನನ್ನ ಹಲವಾರು ಚಿತ್ರಗಳ ಚಿತ್ರೀಕರಣ ಇಲ್ಲಿನ ಸುತ್ತಮುತ್ತವೇ ನಡೆದಿದೆ. ಮಾದೇಶ್ ಈ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ' ಎಂದು ಶ್ಲಾಘಿಸಿದರು.
ಬಳ್ಳಾರಿಯಲ್ಲಿ ಆಗಾಗ್ಗೆ ಕರೆಂಟ್ ಇರಲ್ಲ ಅಂತಾರೆ. ಈಗ ಪವರ್ ಬಂದಿದೆ. ಇನ್ಮೇಲೆ ನಿರಂತರವಾಗಿ ಪವರ್ ಇರುತ್ತೆ ಎಂದು ಹಿರಿಯ ನಟ ದೊಡ್ಡಣ್ಣ ತಮಾಷೆ ಮಾಡಿದರು. ಶರತ್ ಲೋಹಿತಾಶ್ವ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


