ಪ್ರೇಮ್ ಈಗ ಸ್ಟೈಲಿಷ್ ಲವ್ಲೀ ಸ್ಟಾರ್
ಇತ್ತೀಚಿನ ದಿನಗಳಲ್ಲಿ ನೆನಪಿರಲಿ ಪ್ರೇಮ್ರ ಪ್ರತಿ ಹೊಸ ಚಿತ್ರ ಶುರುವಾದಾಗಲೂ ಅವರದ್ದೊಂದು ಹೊಸ ಗೆಟಪ್ ಗ್ಯಾರಂಟಿ. ಆದರೆ ...

ಇತ್ತೀಚಿನ ದಿನಗಳಲ್ಲಿ ನೆನಪಿರಲಿ ಪ್ರೇಮ್ರ ಪ್ರತಿ ಹೊಸ ಚಿತ್ರ ಶುರುವಾದಾಗಲೂ ಅವರದ್ದೊಂದು ಹೊಸ ಗೆಟಪ್ ಗ್ಯಾರಂಟಿ. ಆದರೆ ಅಂಥ ಪ್ರತಿ ಹೊಸ ಗೆಟಪ್ನಲ್ಲೂ ನೋಡಿ ಸ್ವಾಮಿ ನಾನಿರೋದೆ ಹೀಗೆ ಎನ್ನುವಷ್ಟು ನ್ಯಾಚುರಲ್ ಎನಿಸುತ್ತಾರೆ ಪ್ರೇಮ್. ತೇಜಸ್ ನಿರ್ದೇಶನದ, ಆರ್.ಚಂದ್ರು ಸಾರಥ್ಯದ ಮಳೆ ಚಿತ್ರದಲ್ಲಿ ಲವ್ಲೀ ಸ್ಟಾರ್, ರಾಯಲ್ ಸ್ಟಾರ್, ಹೋಮ್ಲೀ ಸ್ಟಾರ್ಗಳ ನಂತರ ಈಗ ಸ್ಟೈಲಿಷ್ ಲವ್ಲೀ ಸ್ಟಾರ್ ಆಗಿರುವ ಪ್ರೇಮ್ ಅವರಿಗೆ ಮುಂದೊಮ್ಮೆ ನ್ಯಾಚುರಲ್ ಸ್ಟಾರ್ ಎಂಬ ಹೆಸರು ಬಂದರೂ ಆಶ್ಚರ್ಯವಿಲ್ಲ. ಪ್ರೇಮಕಥೆಗಳ ನಾಯಕನಾಗಲು ಹೇಳಿ ಮಾಡಿಸಿದಂತಿರುವ ಪ್ರೇಮ್ ಈಗ ಮಸ್ತ್ ಮೊಹಬ್ಬತ್ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಈ ಹೊಸ ಲವ್ಸ್ಟೋರಿಯ ನಡುವೆ ಒಂದು ಸಣ್ಣ ಬ್ರೇಕ್ನಲ್ಲಿ ನಡೆದ ಮಾತುಕತೆ ಇದು.
ಮಸ್ತ್ ಮೊಹಬ್ಬತ್ ಹೇಗೆ ನಡೀತಿದೆ?
ಫಸ್ಟ್ ಶೆಡ್ಯೂಲ್ ಮುಗಿದಿದೆ. ಸಾಮಾನ್ಯವಾಗಿ ಊಟಿಯಲ್ಲಿ ಎಲ್ಲರೂ ಹಾಡು ಶೂಟ್ ಮಾಡ್ತಾರೆ. ಆದರೆ ನಾವು ಒಂದಷ್ಟು ಕಾರ್ ಚೇಸಿಂಗ್ ಶಾಟ್ಸ್ ತೆಗೆಯಲು ಹೋಗಿದ್ದೆವು. ಸನ್ರೈಸ್ ಶಾಟ್ಸ್ ಬೇಕಿದ್ದುದರಿಂದ, ಮೈನಸ್ಗೆ ಇಳಿದಿರುವ ಟೆಂಪರೇಚರ್ನಲ್ಲಿ ಬೆಳಗಿನ ಜಾವ 3 ಗಂಟೆಗೆ ಶೂಟಿಂಗ್ ಮಾಡ್ತಿದ್ವಿ. ಜೊತೆಗೆ ಒಂದು ರೆಸಾರ್ಟ್ನಲ್ಲೂ ಶೂಟಿಂಗ್ ಇತ್ತು. ಒಟ್ಟಾರೆ, ವಿಜಯ್ಕುಮಾರ್ ಅವರ ಕ್ಯಾಮೆರಾದಲ್ಲಿ ಈ ಸಿನಿಮಾ ಒಳ್ಳೆ ಹಬ್ಬದಂತಿರುತ್ತದೆ ಎಂದು ನನಗನಿಸುತ್ತಿದೆ.
ಒಟ್ಟು ಎಷ್ಟು ಸಿನಿಮಾ ಕೈಯಲ್ಲಿದೆ ಸದ್ಯಕ್ಕೆ?
ಮಸ್ತ್ ಮೊಹಬ್ಬತ್ ನಡೀತಿದೆ. ನಂತರ ಮಳೆ. ಫೇರ್ ಅಂಡ್ ಲವ್ಲೀ ಡಬ್ಬಿಂಗ್ ಮುಗೀತು. ಎರಡು ಹಾಡು ಬಾಕಿ ಇದೆ.
ಇದ್ದಕ್ಕಿದ್ದಂಗೆ ಗೆಟಪ್ ಬದಲಾಯಿಸ್ತಾ ಇರ್ತೀರಾ, ಆದ್ರೆ ಎಲ್ಲ ಗೆಟಪ್ಗಳೂ ತುಂಬಾ ನೀಟ್ ಆಗಿ ಮ್ಯಾಚ್ ಆಗುತ್ವೆ, ನೀವು ಇದ್ದಿದ್ದೇ ಹಿಂಗೆ ಅನ್ನೋ ಥರಾ...ಅದು ಹೇಗೆ?
ಗಾಡ್ ಗಿಫ್ಟ್ ಅನ್ನಬಹುದು. ಜೊತೆಗೆ ಒಂದಿಷ್ಟು ಹೋಮ್ವರ್ಕ್, ನನ್ನ ಶ್ರದ್ಧೆ. ಅದೇ ನನ್ನ ಕಾಪಾಡ್ತಿರೋದು. ಜೊತೆಗೆ ಅಂಥ ವೆರೈಟಿಯಾಗಿ ಕಾಣಿಸಿಕೊಳ್ಳುವ ಅವಕಾಶ ಕೊಟ್ಟ ಎಲ್ಲ ನಿರ್ಮಾಪಕ, ನಿರ್ದೇಶಕರಿಗೆ ನಾನು ಥ್ಯಾಂಕ್ಸ್ ಹೇಳಬೇಕು.
ಶತ್ರುನಂಥ ಆ್ಯಕ್ಷನ್ ಸಿನಿಮಾ ನಿಮ್ಮ ಇಮೇಜ್ ಮೇಲೆ ಯಾವ ರೀತಿ ಪ್ರಭಾವ ಮಾಡಿತು?
ಶತ್ರು ಅಷ್ಟೊಂದ್ ವರ್ಕ್ ಔಟ್ ಆಗ್ಲಿಲ್ಲ. ಆದ್ರೆ ಪ್ರೇಮ್ ಆ್ಯಕ್ಷನ್ ಕೂಡ ಮಾಡಬಲ್ಲರು ಅನ್ನೋದನ್ನ ನನ್ನ ಡೆಡಿಕೇಶನ್ ಮೂಲಕ ತೋರಿಸಿಕೊಟ್ಟೆ. ನಿರ್ಮಾಪಕರಿಗೆ ಲಾಸ್ ಆಗಲಿಲ್ಲ ಅನ್ನೋದು ನನ್ನ ಖುಷಿ.
ಮತ್ತೆ ಆ್ಯಕ್ಷನ್ ಸಿನಿಮಾ ಮಾಡೋ ಮನಸ್ಸಿದೆಯಾ?
ಮಾಡ್ತಾ ಇದೀನಿ. ಒಂದು ಹೊಸ ಬೆಳವಣಿಗೆಯಲ್ಲಿ ಎಸ್.ವಿ.ಬಾಬು ನಿರ್ಮಾಣದ, ನಂದಕಿಶೋರ್ ನಿರ್ದೇಶನದ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಏಪ್ರಿಲ್ನಲ್ಲಿ ಶುರುವಾಗಬಹುದು. ಅದು ಲವ್ ಕಮ್ ಆ್ಯಕ್ಷನ್ ಸಿನಿಮಾ. ಆದರೆ ಆ್ಯಕ್ಷನ್ ಸ್ವಲ್ಪ ಜಾಸ್ತಿ ಇರುತ್ತೆ.
ಲವ್ಲೀ ಸ್ಟಾರ್, ರಾಯಲ್ ಸ್ಟಾರ್, ಹೋಮ್ಲೀ ಸ್ಟಾರ್, ನೆನಪಿರಲಿ ಪ್ರೇಮ್ ಇಷ್ಟು ಹೆಸರಲ್ಲಿ ನಿಮಗೆ ಯಾವುದಿಷ್ಟ?
ಲವ್ಲೀ ಸ್ಟಾರ್ ಅನ್ನೋದು ಡಾ.ರಾಜ್ಕುಮಾರ್ ಅಭಿಮಾನಿಗಳು ಕೊಟ್ಟಿದ್ದು. ಹಾಗಾಗಿ ಅದು ನಂಗಿಷ್ಟ.
ಆರ್. ಚಂದ್ರು ಈಗ ಅವರ ಬ್ಯಾನರ್ನ ಮಳೆ ಚಿತ್ರದಲ್ಲಿ 'ಸ್ಟೈಲಿಷ್ ಲವ್ಲೀ ಸ್ಟಾರ್' ಅಂತ ಹೆಸರಿಡ್ತೀನಿ ಅಂದ್ರು. ಒಬ್ಬ ನಿರ್ದೇಶಕರಿಂದ ಈ ರೀತಿಯ ಹೆಸರು ತಗೋಳ್ಳೋದು ಅದೃಷ್ಠ. ಮತ್ತು ಅದೊಂದು ಗೌರವ. ಹಾಗಾಗಿ ಖುಷಿ ಆಗುತ್ತೆ.
ಸವಿ ಸವಿ ನೆನಪು ಚಿತ್ರದ ನಂತರ ಮತ್ತೆ ಈಗ ಸಿಂಗರ್ ಆಗಿದೀರ, ತರ್ಲೆ ನನ್ಮಕ್ಳು, ಮಾಮೂ ಟೀ ಅಂಗಡಿ, ಯುವ ಸಾಮ್ರಾಟ್..
ಹೌದು. ತರ್ಲೆ ನನ್ಮಕ್ಳು ಚಿತ್ರದಲ್ಲಿ ಐಟಂ ಸಾಂಗ್, ಯುವ ಸಾಮ್ರಾಟ್ ಚಿತ್ರದಲ್ಲಿ ಹೀರೋ ಇಂಟ್ರಡಕ್ಷನ್ನ ಮಾಸ್ ಸಾಂಗು, ಇನ್ನು ಮಾಮೂ ಟೀ ಅಂಗಡಿ ಚಿತ್ರದಲ್ಲಿ ನಾನು, ಕಿಟ್ಟಿ, ಲೂಸ್ ಮಾದ ಮತ್ತು ಅಜಯ್ ನಾಲ್ಕು ಜನನೂ ಸೇರಿ ಒಂದು ಹಾಡು ಹಾಡಿದ್ದೇವೆ.
ನಿಮ್ಮದೇ ಪ್ರೊಡಕ್ಷನ್ ಹೌಸ್ ಮಾಡೋ ಪ್ಲ್ಯಾನ್ ಏನಾಯ್ತು?
ಖಂಡಿತ ಇದೆ. ಆದರೆ ಸದ್ಯಕ್ಕೆ ಒಳ್ಳೆ ಅವಕಾಶಗಳು ಸಾಕಷ್ಟಿವೆ. ಅದನ್ನು ಉಪಯೋಗಿಸಿಕೊಳ್ಳೋಣ. ನಿರ್ಮಾಣ ಯಾವಾಗ ಬೇಕಾದರೂ ಮಾಡಬಹುದು. <
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


