ಸೂರಿ ಸಾರಿ ಸಾರ್ ಅಂದ್ರು

ಕಳೆದ ಶುಕ್ರವಾರದ ಸಂಜೆ ಸೂರಿ ಏನು ಏನ್ ಮಾಡ್ತಾ ಇದ್ರೋ ಗೊತ್ತಿಲ್ಲ, ಆದರೆ, ಅಂದು ಬೆಳಗ್ಗೆ ಸೂರಿಯೋದಯದ ಹೊತ್ತಲ್ಲೇ ಅವರಿಗೆ ಒಂಥರಾ ಜ್ಞಾನೋದಯ ಆದಂತಿತ್ತು. ಅದು ಹೊತ್ತಲ್ಲದ ಹೊತ್ತಲ್ಲಿ ಆಡಿದ ಮಾತೇನೂ ಆಗಿರಲಿಲ್ಲ. ಆದರೂ ಸೂರಿ ಯೋಗಿ ಪಡೆದಿದ್ದು ಮತ್ತು ಜೋಗಿ ಪಡೆದಿದ್ದರ ನಡುವಿನ ವ್ಯತ್ಯಾಸ ಕಂಡುಕೊಂಡಂತಿತ್ತು. ಆದರೂ ಸೂರಿ ಲುಂಗಿ ಕಟ್ಕೊಳ್ಳೋ ವಿಷ್ಯ ಏನೂ ಮಾತಾಡಲಿಲ್ಲ. ಏಕೆಂದರೆ ಅವರೇನೂ ಟವೆಲ್ಲು, ಶಾಲು ಸುತ್ತಿಕೊಂಡು ಹೊಡೆದಿರಲಿಲ್ಲ. ಹೇಳಿದ್ದನ್ನು ಎಷ್ಟು ನೇರವಾಗಿ ಹೇಳಿಕೊಂಡಿದ್ದರೋ ಅಷ್ಟೇ ನೇರವಾಗಿ ಪಶ್ಚಾತ್ತಾಪವನ್ನೂ ಹೇಳಿಕೊಂಡರು ಸೂರಿ. ಯೋಗರಾಜ್ ಅಂದ್ರೆ ದೊಡ್ಡ ಅಣ್ಣ, ಅವರಂದ್ರೆ ಭಯ ಭಕ್ತಿ, ಯಾಕೋ ಎಲ್ಲಾ ಕೆಟ್ಟೋಯ್ತಾ ಅನ್ನಿಸ್ತಿದೆ ಎಂದು ತಮ್ಮ ಮೇಲೆಯೇ ಬೇಸರಿಸಿಕೊಂಡಿದ್ದರು ಸೂರಿ. ಮತ್ತೊಂದಿಷ್ಟು ಸಮಯದ ನಂತರ ಇನ್ನಷ್ಟು ಎಮೋಷನಲ್ ಆಗಿಬಿಟ್ಟರು. ಅಮ್ಮ ಬೈದ್ರು, ಹೊಡೆದ್ರು ಅಂತ, ಅಮ್ಮ ಸರಿ ಇಲ್ಲ ಅಂತ ಮಗನೇ ಊರಿಗೆಲ್ಲಾ ಹೇಳಿದಂಗಾಯ್ತು, ನಾನು ತಪ್ಪು ಮಾಡಿದೆ ಅಂತ ಅವರಿಗನ್ನಿಸುತ್ತಿತ್ತು. ಅಲ್ಲಿಗೆ ಸೂರಿ, ಯೋಗರಾಜ್ಭಟ್ಟರ ನಡುವಿನ ವಿರಸ, ಸೂರಿ ಅವರ ಅಸಮಾಧಾನದ ಮಾತಿನ ವರಸೆ ಟೆಂಪರರಿ ಆಗಿತ್ತು ಎಂಬುದು ಸದ್ಯದ ಸುದ್ದಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


