ಸಿನಿಮಾ ಲೇಖನ

ಜೋಗಿ ಕಾಲ ಮುಗೀತು..

ಜೋಗಿ ಕಾಲ ಮುಗೀತು..
Published On :

ಅದು ಜೋಗಿ ಮಾಡಿದ ಗಿಮಿಕ್ಕೋ, ಮ್ಯಾಜಿಕ್ಕೋ ಗೊತ್ತಿಲ್ಲ. ಆದರೆ, ಅದು ರಾತ್ರೋ ರಾತ್ರಿ ನಡೆದ ವಿಜಯೋತ್ಸವವಾಗಿತ್ತು. ಆದರೆ, ಈಗ ಜೋಗಿಯ ಆ ವೈಭವದ ದಿನಗಳು ಮುಗಿದಿವೆಯೇ? ಎಂಬ ಪ್ರಶ್ನೆ ಕೇಳಿದರೆ ಹೌದು ಜೋಗಿ ಕಾಲ ಮುಗೀತು, ಸದ್ಯಕ್ಕೆ ಭಜರಂಗಿ ಕಾಲ ಶುರುವಾಗಿದೆ, ಮುಂದೆ ಬಾದ್‌ಶಾ ಕಾಲ ಅಂತಿದಾರೆ, ಯಾರು ಅಂದ್ರಾ? ಶಿವರಾಜ್‌ಕುಮಾರ್ ಅಭಿಮಾನಿಗಳು ಕಣ್ರೀ. ಹಾಗಾಗಿ, 51ನೇ ವಯಸ್ಸಲ್ಲೂ ಶಿವಣ್ಣಂಗೆ ಇದು 'ಮಾಗಿ'ಯ ಕಾಲವೇ.  ರಾತ್ರೋರಾತ್ರಿ ಭಜರಂಗಿ ಹಿಟ್ ಆಗಿದ್ದೇ ತಡ, ಶಿವಣ್ಣನ ಸ್ಪೆಷಲ್ ಗೆಟಪ್‌ನ ಸಿನಿಮಾಗಳಿಗೆ ಬೇಡಿಕೆ ಬರುತ್ತಿದೆ. ಶಿವಣ್ಣ ಸ್ಪೆಷಲ್ ಗೆಟಪ್ ಹಾಕಿದಾಗಲೆಲ್ಲಾ ಅದರಲ್ಲಿ ಏನೋ ಮಜಾ ಇದ್ದೇ ಇರುತ್ತೆ ಅಂತ ಮೊನ್ನೆ ನಿರ್ದೇಶಕ ಹರ್ಷ ಹೇಳಿದ್ದರು. ಅದನ್ನು ನಿಜ ಮಾಡುವಂತೆ ಜೋಗಿಯ ನಂತರ ಶಿವಣ್ಣ ಈಗ ಭಜರಂಗಿ ನಂತರ ಬಾದ್‌ಶಾ, ಹರ್ಷ ನಿರ್ದೇಶನದಲ್ಲಿ ರಾಜಾದೊರೆ ಆಗುತ್ತಿದ್ದಾರೆ.  ಈ ಪೈಕಿ ಬಾದ್‌ಶಾ ಚಿತ್ರವನ್ನು ಈ ಹಿಂದೆ ಶಿವಣ್ಣರ ಮೈಲಾರಿ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡಿದ್ದ ಆರ್. ಚಂದ್ರು ಕೈಗೆತ್ತಿಕೊಂಡಿದ್ದಾರೆ. ಮೊನ್ನೆ ಹುಬ್ಬಳ್ಳಿಯಲ್ಲಿ ಬ್ರಹ್ಮ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಉಪೇಂದ್ರ ಬಾದ್‌ಶಾ ಚಿತ್ರವನ್ನು ಘೋಷಿಸಿದ್ದಾರೆ. ಅಂದಹಾಗೆ ಈ ಚಿತ್ರವನ್ನು ನಿರ್ಮಿಸುತ್ತಿರುವವರು ಆರ್.ಎಸ್. ಪ್ರೊಡಕ್ಷನ್ಸ್‌ನ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ. ಶ್ರೀಕಾಂತ್.
ಏಪ್ರಿಲ್ 24ರ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ದಿನ ಬಾದ್‌ಶಾಗೆ ಮುಹೂರ್ತ ನಡೆಯುವ ಸಾಧ್ಯತೆಗಳಿವೆ. ಇವೆರಡರ ಜೊತೆಗೆ ಸಿಂಪಲ್ಲಾಗೊಂದ್ ಮನಮೋಹಕ ಲವ್‌ಸ್ಟೋರಿ ಮಾಡ್ತಾ ಇರೋ ಸಿಂಪಲ್ ಸುನಿ. ರಾಧಿಕಾ ಜೊತೆಗೆ ರಾಜವಂಶ. ಹೀಗೆ ಶಿವಣ್ಣ ಸಖತ್ ಬ್ಯುಸಿ. ಹಂಗಂತ ಇದೇನೂ ದೊಡ್ಡ ವಿಷ್ಯ ಅಲ್ಲ. ಶಿವಣ್ಣ ಎಷ್ಟೋ ಸೋಲುಗಳನ್ನು ಕಂಡಾಗಲೂ ಅವರ ಕೈತುಂಬ ಸಿನಿಮಾಗಳಿದ್ದವು. ಈಗಲೂ ಇವೆ. ಆದರ ಸದ್ಯಕ್ಕೆ  ಹ್ಯಾಟ್ರಿಕ್ ಮೂರು ವರ್ಷ ಬ್ಯುಸಿಯಾಗಿರುವ ಶಿವಣ್ಣ ಮತ್ತೊಂದು ರೀತಿಯಲ್ಲಿ ಹ್ಯಾಟ್ರಿಕ್ ಹೀರೋ ಆಗಿದ್ದಾರೆ ಎನ್ನಬಹುದು.

- ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.