ಆ್ಯಸ್ ಸೀನ್ ಬೈ ದ ರೆಸ್ಟ್

ಉಳಿದವರು ಕಂಡಂತೆ ಚಿತ್ರದ ಬಿಡುಗಡೆ ಹಂತ ಸಮೀಪಿಸುತ್ತಿದ್ದಂತೆ ಚಿತ್ರದ ಬಗೆಗಿನ ಕ್ರೇಜ್ ಕೂಡಾ ಹೆಚ್ಚುತ್ತಿದೆ. ಇತ್ತೀಚಿನ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಹಾಕಿಕೊಂಡು ಓಡಾಡುತ್ತಿದ್ದ ಚಿತ್ರದ ಟೀ ಶರ್ಟ್ಗಳು ಎಲ್ಲರ ಗಮನ ಸೆಳೆದವು. ಆದರೆ ಈ ಟೀಶರ್ಟ್ ಎಲ್ಲಿ ಸಿಗುತ್ತದೆ ಎಂಬ ಕುತೂಹಲ ಇರುವವರಿಗೆ ಇಲ್ಲಿದೆ ಉತ್ತರ. ಚಿತ್ರದ ಆರಂಭದಲ್ಲಿ ಪ್ರಮೋಶನ್ ವಿಷಯ ಮಾತನಾಡುವಾಗ ಈ ಐಡಿಯಾ ಬಂದು ಆ್ಯಸ್ ಇಟ್ ಈಸ್.ಕಾಮ್ ವೆಬ್ಸೈಟ್, ಚಿತ್ರದ ಅಫಿಶಿಯಲ್ ಟೀ ಶರ್ಟ್ ಪಾರ್ಟ್ನರ್ ಆಗಿದೆ. 'ಉಳಿದವರು ಕಂಡಂತೆ' ಟೈಟಲ್ ಇರುವ ಟೀ ಶರ್ಟ್, 'ಶೂಟ್ ಮಾಡ್ಬೇಕಾ' ಎಂಬ ಸ್ಲೋಗನ್ ಇರುವ ಟೀ ಶರ್ಟ್ ಮತ್ತು ಪುಲ್ ಓವರ್ಗಳು ಆ್ಯಸ್ ಇಟ್ ಈಸ್.ಕಾಮ್ ವೆಬ್ಸೈಟ್ನಲ್ಲಿ ಮಾತ್ರ ಸಿಗುತ್ತಿದ್ದು ಅವುಗಳ ಬೆಲೆ ಕ್ರಮವಾಗಿ 350, 400 ಮತ್ತು 650 ರುಪಾಯಿಗಳು. ಈ ಐಡಿಯಾದ ಹಿಂದಿರುವ ಒಬ್ಬರಾದ ಉಳಿದವರು ಕಂಡಂತೆ ತಂಡದ ಜಯಂತ್ 'ಇದರಿಂದ ನಾವು ಲಾಭ ನಿರೀಕ್ಷಿಸುತ್ತಿಲ್ಲ. ಟೀ ಶರ್ಟ್ಗಳ ಸೇಲ್ನಿಂದ ನಮಗೆ ಬರುತ್ತಿರುವ ಹಣ ಕಡಿಮೆ. ಅಲ್ಲದೆ ಆ ಎಲ್ಲ ಲಾಭವನ್ನೂ ನಾವು ಮತ್ತಷ್ಟು ಟೀಶರ್ಟ್ ಉತ್ಪಾದನೆಗಾಗಿಯೇ ಬಳಸುತ್ತಿದ್ದೇವೆ ಎನ್ನುತ್ತಾರೆ. ಈ ಶರ್ಟ್ಗಳು ಬೇಕಿದ್ದವರು ಛಣ್ಝಡಿಜಜಣ.್ಛ್ಟಟ ಕಾಮ್ ಮತ್ತು 09964028466 ಅನ್ನು ಸಂಪರ್ಕಿಸಬಹುದು.
ಶಾನ್ ಆಫ್ ಕರ್ನಾಟಕ
ಜೈ ಜವಾನ್, ಜೈ ಕಿಶಾನ್
ಕಿಶನ್ರ ಹೊಸ ಚಿತ್ರ 'ಕೇರಾಫ್ ಫುಟ್ಪಾತ್ 2'ಗೆ ಸಂಬಂಧಿಸಿದ ಎರಡು ಸುದ್ದಿಗಳಿವು. ಬಾಲಿವುಡ್ನಲ್ಲಿ 'ಸಿಂಗ್ ಈಸ್ ಕಿಂಗ್', 'ನೋ ಎಂಟ್ರಿ' ಚಿತ್ರಗಳನ್ನು ನಿರ್ದೇಶಿಸಿದ ಅನೀಝ್ ಬಾಝ್ಮಿ ಈಗ ಫುಟ್ಪಾತ್ಗೆ ಎಂಟ್ರಿ ಪಡೆದಿದ್ದಾರೆ. ಅಂದರೆ ಕಿಶನ್ರ ಈ ಚಿತ್ರದಲ್ಲಿ ಪ್ರಥಮ ಬಾರಿಗೆ ಅನೀಝ್ ನಟನಾಗಿ ಕಾಣಿಸಿಕೊಳ ್ಳಲಿದ್ದಾರೆ. ಆದರೆ ಖ್ಯಾತ ನಿರ್ದೇಶಕರೊಬ್ಬರನ್ನು ನಟನಾಗಿಸುವ ಆಲೋಚನೆ ಬಂದಿದ್ದೇಕೆ ಮತ್ತು ಅವರನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ಏನು ಎಂದು ಕೇಳಿದರೆ 'ನಮ್ಮ ಕಾಸ್ಟಿಂಗ್ ಡೈರೆಕ್ಟರ್ ಅಮ್ಜದ್ ಅವರು ಅನೀಝ್ರ ವೆಲ್ಕಮ್ 2 ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಅವರು ನಾನು 9ನೇ ವರ್ಷಕ್ಕೆ ಚಿತ್ರ ನಿರ್ದೇಶನ ಮಾಡಿದ್ದನ್ನು ಅನೀಝ್ಗೆ ಹೇಳಿದಾಗ ಅವರು ನಂಬಲಿಲ್ಲವಂತೆ. ಆದರೆ ನನ್ನ ಬಗ್ಗೆ ಮಾಹಿತಿ ಸಂಗ್ರಹಿಸಿ ತಿಳಿದುಕೊಂಡ ಮೇಲೆ ಒಮ್ಮೆ ಕಿಶನ್ರನ್ನು ಮುಂಬೈಗೆ ಕರೆದುಕೊಂಡು ಬನ್ನಿ ಎಂದು ಅಮ್ಜದ್ ಅವರಿಗೆ ಹೇಳಿದ್ದರು. ಆ ನಂತರ ನನಗೆ ಗೊತ್ತಾಗಿದ್ದು ಅನೀಝ್ ಒಳ್ಳೆಯ ನಟ ಕೂಡ ಎಂದು. ಹಾಗಾಗಿ ಅವರಿಂದಲೇ ಯಾಕೆ ಒಂದು ಪಾತ್ರ ಮಾಡಿಸಬಾರದು ಎಂಬ ಯೋಚನೆ ಬಂದು ಅವರನ್ನೇ ಆಯ್ದುಕೊಂಡೆ' ಎನ್ನುತ್ತಾರೆ ಕಿಶನ್. ಇದರ ಜೊತೆಗೆ ಅಮೆರಿಕಾದ ಫೋರ್ಬ್ಸ್ ಪತ್ರಿಕೆಯ 30ರೊಳಗಿನ 30 ಸಾಧಕರ ಪಟ್ಟಿಯಲ್ಲಿ ಕಿಶನ್ ಕೂಡ ಸ್ಥಾನ ಪಡೆದಿರುವುದು ಇನ್ನೊಂದು ಹಾಟ್ ಸುದ್ದಿ. ಪೋರ್ಬ್ಸ್ ಇಂಡಿಯಾದ ಪಟ್ಟಿಯಲ್ಲಿ ಮೊದಲು ಒಟ್ಟು 400 ಕಿರಿಯ ಸಾಧಕರಿದ್ದರು. ಅಂತಿಮವಾಗಿ 30ರ ಪಟ್ಟಿ ಸಿದ್ಧವಾಯ್ತು. ವಿಶೇಷ ಎಂದರೆ ದೀಪಿಕಾ ಪಡುಕೋಣೆ ಮತ್ತು ವಿರಾಟ್ ಕೊಹ್ಲಿಯಂಥ ಘಟಾನುಘಟಿಗಳು ಪಟ್ಟಿಯಿಂದ ಹೊರಬಿದ್ದರೂ ಕಿಶನ್ ಮಾತ್ರ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಕೇರಾಫ್ ಫುಟ್ಪಾತ್ ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಕಿಶನ್ ಈಗ ಈ ಚಿತ್ರದ ಮುಂದುವರೆದ ಭಾಗದಲ್ಲಿ ತಮ್ಮ ದಾಖಲೆ ಯಾನವನ್ನೂ ಮುಂದುವರಿಸುತ್ತ, ತಮ್ಮ ಜವಾನೀ ತಲುಪುವ ಮುಂಚೆಯೇ ಕನ್ನಡ ಚಿತ್ರರಂಗದ ಶಾನ್ ಅನ್ನು ಹೆಚ್ಚಿಸುತ್ತ್ತಿರುವುದನ್ನು ನೋಡಿ ಕನ್ನಡ ಚಿತ್ರಪ್ರೇಮಿಗಳು ಜೈ ಜವಾನ್, ಜೈ ಕಿ'ಶಾನ್' ಎನ್ನುತ್ತಿದ್ದಾರೆ.
ಅನೂಪನ ಸಾಹಸಗಳು
ಸೋಡಾ ಸ್ಪೆಷಲ್
ಕನ್ನಡದ ಪ್ರತಿಭೆಗಳು ಹೊರ ರಾಜ್ಯದ ಚಿತ್ರರಂಗದಲ್ಲಿ ಮಿಂಚುವ ಸಂಪ್ರದಾಯಕ್ಕೆ ಇನ್ನೊಂದು ಸೇರ್ಪಡೆ ಸಂಗೀತ ನಿರ್ದೇಶಕ. ಗೋಲಿಸೋಡಾ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿರುವ ತಮಿಳು ಚಿತ್ರ. ಕನ್ನಡದ ಅಟ್ಟಹಾಸ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ವಿಜಯ್ ಮೆಲ್ಟನ್ ನಿರ್ದೇಶನದ ಗೋಲಿ ಸೋಡಾ ತಮಿಳುನಾಡಿನಲ್ಲಿ ಈಗಾಗಲೇ ಭರ್ಜರಿ ಸುದ್ದಿ ಮಾಡುತ್ತಿದೆ. ಚೆನ್ನೈನ ಕೊಯೆಂಬೆಡು ಮಾರ್ಕೆಟ್ನಲ್ಲಿ ಚಿತ್ರಿತವಾಗಿರುವ ಈ ಚಿತ್ರ ಸಿನಿಮಾರ್ಕೆಟ್ನಲ್ಲೂ ಸೂಪರ್ಹಿಟ್ ಆಗಿದೆ. ಸೂಪರ್ಸ್ಟಾರ್ ರಜನೀಕಾಂತ್ ಕೂಡಾ ಗೋಲಿ ಸೋಡಾ ನೋಡಿ ನಿರ್ದೇಶಕರನ್ನು ಕರೆದು ಅಭಿನಂದಿಸಿದರಂತೆ. ಹರೆಯಕ್ಕೆ ಬರುತ್ತಿರುವ ಮಕ್ಕಳನ್ನಿಟ್ಟುಕೊಂಡು ಒಂದು ವಿಶೇಷ ಪ್ಲಾಟ್ ಇರುವ ಚಿತ್ರ ಮಾಡಿರುವ ವಿಜಯ್ ಮೆಲ್ಟನ್ರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಕುಮ್ಕಿ, ವಜಕ್ಕು ಎನ್ 18/9 ಚಿತ್ರಗಳನ್ನು ನಿರ್ಮಿಸಿದ ತಿರುಪತಿ ಬ್ರದರ್ಸ್ ಬ್ಯಾನರ್ನ ಲಿಂಗುಸ್ವಾಮಿ. ಇತ್ತೀಚೆಗೆ ಈ ಚಿತ್ರದ ಪ್ರದರ್ಶನ ಬೆಂಗಳೂರಲ್ಲೂ ಏರ್ಪಾಡಾಗಿತ್ತು. ಚಿತ್ರದ ಇತರ ಎಲ್ಲ ಸಂಗತಿಗಳ ಜೊತೆಗೆ ತಮ್ಮ ಹಿನ್ನೆಲೆ ಸಂಗೀತದ ಮೂಲಕ ಇನ್ನಷ್ಟು ಜೀವ ತುಂಬಿರುವ ಅನೂಪ್ ಸೀಳಿನ್ರ ಬಗೆಗೂ ಅಂದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು.
-ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


