ಸಿನಿಮಾ ಲೇಖನ

ಮನಮೋಹಕ ಪಯಣ

ನಟ ಶಿವರಾಜ್‌ಕುಮಾರ್ ಹಳೆ ಸೈಕಲ್‌ನೊಂದಿಗೆ ತಮ್ಮ ಹೊಸ ಪಯಣ ಆರಂಭಿಸಿದ್ದಾರೆ. ಅದರ ಹೆಸರು ಮನಮೋಹಕ...

ಮನಮೋಹಕ ಪಯಣ
Published On :

ನಟ ಶಿವರಾಜ್‌ಕುಮಾರ್ ಹಳೆ ಸೈಕಲ್‌ನೊಂದಿಗೆ ತಮ್ಮ ಹೊಸ ಪಯಣ ಆರಂಭಿಸಿದ್ದಾರೆ. ಅದರ ಹೆಸರು ಮನಮೋಹಕ. ಅಂದಹಾಗೆ ಈ ಸೈಕಲ್‌ನ ಸೂತ್ರಧಾರ ಸಿಂಪಲ್ ಸುನಿ.
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ನಿರ್ದೇಶಕ ಸುನಿ ತಮ್ಮ ಎರಡನೇ ಚಿತ್ರವಾದ 'ಬಹುಪರಾಕ್‌'ನ ನಂತರ ಕೈಗೆತ್ತಿಕೊಳ್ಳುತ್ತಿರುವ ಚಿತ್ರ ಶಿವರಾಜ್‌ಕುಮಾರ್ ನಾಯಕತ್ವದ 'ಮನಮೋಹಕ'. ಮೊನ್ನೆ ಶಿವಣ್ಣರ ಹೆಬ್ಬಾಳದ ಮನೆಯ ಬಳಿ ಈ ಚಿತ್ರದ ಅಫಿಶಿಯಲ್ ಫೋಟೋಶೂಟ್ ನಡೆಸಲಾಯಿತು.
ಅಂದಹಾಗೆ ಈ ಚಿತ್ರಕ್ಕಾಗಿ ಸುನಿ ಅಂಡ್ ಟೀಮ್ ಚೆನ್ನೈಗೆ ಹೋಗಿ ಚಿತ್ರಕ್ಕೆ ಹೊಂದುವ ಒಂದು ವಿಶೇಷ ಸೈಕಲ್ ಅನ್ನು ಆರಿಸಿ ತಂದು ಅದಕ್ಕೆ ವಿಶೇಷ ವಿನ್ಯಾಸ ಮಾಡಿದ್ದಾರೆ. ಪೋಟೋಶೂಟ್‌ನ ದಿನ, 80ರ ದಶಕದ ಗೆಟಪ್‌ನಲ್ಲಿ, ದೇವಾನಂದ್ ಕ್ಯಾಪ್ ಧರಿಸಿದ ಶಿವಣ್ಣ, ಅದೇ ಕಾಲದ ಮೂರು ಚಕ್ರದ ಸೈಕಲ್ ಹತ್ತಿ, ಕಾಲಲ್ಲಿ ಸೈಕಲ್ ತುಳಿಯುತ್ತಾ ಕಾಲಚಕ್ರವನ್ನು ಹಿಂದಕ್ಕೋಡಿಸುತ್ತಿದ್ದರು. ಒಂದು ಕಡೆ ಸೈಕಲ್‌ನ ಚಕ್ರ ಉರುಳುತ್ತಿದ್ದಂತೆ ಇನ್ನೊಂದು ಕಡೆ ಕ್ಯಾಮೆರಾಮನ್ ವೇಣು ಅವರ ಕ್ಯಾಮರಾದಲ್ಲಿ ಮನಮೋಹಕ ಚಿತ್ರಗಳು ಅರಳುತ್ತಿದ್ದವು. ಈ ಚಿತ್ರಗಳಲ್ಲಿ ಶಿವಣ್ಣನ ಸಿಂಪ್ಲಿಸಿಟಿ ಮತ್ತು ಸುನಿಯ ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ ಚಿತ್ರದ ಕೆಮಿಸ್ಟ್ರಿ ಎರಡೂ ಕೆಲಸ ಮಾಡಿದಂತಿದೆ ಎನಿಸಿದರೆ ತಪ್ಪಿಲ್ಲ. ಈ ಎಕ್ಸ್‌ಕ್ಲೂಸಿವ್ ಪೋಟೋಗಳು ಕನ್ನಡಪ್ರಭ ಓದುಗ, ಸಾರಿ...ನೋಡುಗರಿಗೆ ಮಾತ್ರ.

-  ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.