ದಾದಾ ಈಸ್ ಬ್ಯಾಕ್ ಇನ್ ಬಜಾರ್
ನಿರ್ಮಾಪಕ ಅಜಯ್‌ರಾವ್ ಅರಸ್ ಅವರನ್ನು ಒಳಗೊಂಡಂತೆ, ದಾದಾ ಈಸ್ ಬ್ಯಾಕ್‌ನಲ್ಲಿ ಗೊಂಬೆಗಳ ಲವ್ ತಂಡವೇ ಮುಂದುವರಿದಿದೆ.

ನಿರ್ಮಾಪಕ ಅಜಯ್‌ರಾವ್ ಅರಸ್ ಅವರನ್ನು ಒಳಗೊಂಡಂತೆ, ದಾದಾ ಈಸ್ ಬ್ಯಾಕ್‌ನಲ್ಲಿ ಗೊಂಬೆಗಳ ಲವ್ ತಂಡವೇ ಮುಂದುವರಿದಿದೆ. ಚಿತ್ರದಲ್ಲಿ ದಾದಾ ಆಗಿ ಕಾಣಿಸಿಕೊಳ್ಳುತ್ತಿರುವುದು ತಮಿಳು ಚಿತ್ರರಂಗದ ಖ್ಯಾತ ತಾರೆ ಪಾರ್ಥಿಬನ್.
ಗೊಂಬೆಗಳ ಲವ್ ಚಿತ್ರದ ನಾಯಕ ನಟ ಅರುಣ್ ಈಗ ಡಬಲ್ ಖುಷಿಯಲ್ಲಿದ್ದಾರೆ. ಸಿನಿಮಾ ತೆರೆಕಂಡು ಹೆಸರು ಮಾಡಿ ಒಂದೂವರೆ ವರುಷ ಕಳೆದರೂ ಇಷ್ಟು ದಿನ ಅರುಣ್‌ರ ಸುದ್ದಿ ಇರಲಿಲ್ಲ. ಆದರೆ ಈಗ ಅದನ್ನು ಓವರ್‌ಕಮ್ ಮಾಡುವಂತೆ ಎರಡು ಚಿತ್ರಗಳೊಂದಿಗೆ ಬಂದಿದ್ದಾರೆ ಅರುಣ್.
ಈಗ ಅರುಣ್ ನಾಯಕರಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ ದಾದಾ ಈಸ್ ಬ್ಯಾಕ್. ಗೊಂಬೆಗಳ ಲವ್ ಚಿತ್ರದ ಸಂತೋಷ್ ಅವರೇ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಎರಡನೇಯದು ಬಜಾರ್. ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಚಿತ್ರ ತಂಡದ ಹರೀಶ್ ನಿರ್ದೇಶನದ ಚಿತ್ರ ಇದು. ದಾದಾ ಈಸ್ ಬ್ಯಾಕ್ ಮೊದಲು ಶುರು. ಆನಂತರ ನವೆಂಬರ್‌ನಲ್ಲಿ ಬಜಾರಿಗೆ ಕಾಲಿಡಲಿದ್ದಾರೆ ಅರುಣ್. ವಿಶೇಷ ಎಂದರೆ ರೋಜ್ ಚಿತ್ರದ ನಾಯಕಿ ಶ್ರಾವ್ಯ ಈ ಎರಡೂ ಚಿತ್ರಗಳಿಗೆ ನಾಯಕಿ. ಹಾಗಾಗಿ ಇದೊಂಥರಾ ಅವರಿಗೆ ಡಬಲ್ ರೋಲ್ ಎನ್ನಬಹುದು.
ನಿರ್ಮಾಪಕ ಅಜಯ್‌ರಾವ್ ಅರಸ್ ಅವರನ್ನು ಒಳಗೊಂಡಂತೆ, ದಾದಾ ಈಸ್ ಬ್ಯಾಕ್‌ನಲ್ಲಿ ಗೊಂಬೆಗಳ ಲವ್ ತಂಡವೇ ಮುಂದುವರಿದಿದೆ. ಚಿತ್ರದಲ್ಲಿ ದಾದಾ ಆಗಿ ಕಾಣಿಸಿಕೊಳ್ಳುತ್ತಿರುವುದು ತಮಿಳು ಚಿತ್ರರಂಗದ ಖ್ಯಾತ ತಾರೆ ಪಾರ್ಥಿಬನ್. ಗ್ಯಾಂಗ್‌ಸ್ಟರ್ ಆಗಿರುವ ಅವರ ರೈಟ್ ಹ್ಯಾಂಡ್ ಆಗಿ ಅರುಣ್ ಅಭಿನಯಿಸುತ್ತಿದ್ದಾರೆ. ಜೊತೆಗೆ ಶ್ರುತಿ ಕೂಡ ಒಂದು ಪ್ರಮುಖ ಪ್ರಾತದಲ್ಲಿದ್ದಾರೆ. 80ರ ದಶಕದಲ್ಲಿ ನಡೆಯುತ್ತಿದ್ದ ಗ್ಯಾಂಗ್‌ವಾರ್‌ಗಲೇ ಈ ಚಿತ್ರಕ್ಕೆ ಸ್ಫೂರ್ತಿಯಂತೆ. ಹಾಗಂತ ಅಗ್ನಿ ಶ್ರೀಧರ್ ಅವರ ದಾದಾಗಿರಿಯ ದಿನಗಳಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಅರುಣ್ ಹೇಳುವ ಮಾತು. ಇದು ಸತ್ಯ ಘಟನೆ ಆಧಾರಿತ ಕಥೆ ಅಲ್ಲ. ಇದು ಪೂರ್ತಿ ಕ್ರಿಯೇಟಿವ್ ಸಬ್ಜೆಕ್ಟ್. ಆದರೆ ಇಂಥ ಕಥೆ ಇದುವರೆಗೆ ಬಂದಿಲ್ಲ. ಇದು ಬೇರೆ ರೀತಿಯದ್ದೇ ಚಿತ್ರ ಎಂಬ ಗ್ಯಾರಂಟಿ ಕೊಡಬಲ್ಲೆ ಎನ್ನುತ್ತಾರೆ ಅರುಣ್.
ಇನ್ನು ಬಜಾರ್ ನಿರ್ದೇಶಕರ ವಿಷಯಕ್ಕೆ ಬಂದರೆ ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಚಿತ್ರದ ಚಿನಕುರಳಿ ಸಂಭಾಷಣೆಗಳಲ್ಲಿ ಹರೀಶ್ ಅವರ ಪಾಲೂ ಇತ್ತು. ಇತ್ತೀಚೆಗೆ ತೆರೆಕಂಡ ಬಹುಪರಾಕ್ ಚಿತ್ರದಲ್ಲೂ ಹರೀಶ್ ಸಂಭಾಷಣೆಯ ವಿಷಯದಲ್ಲಿ ಕೊಡುಗೆ ನೀಡಿದ್ದರು. ಬಹುಪರಾಕ್ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಹೇಮಂತ್ ಹೇಳುವಂತೆ ಹರೀಶ್ ಮುಂದೆ ನಿರ್ದೇಶಕರಾಗಿ ಒಳ್ಳೆಯ ಹೆಸರು ಮಾಡುವಂಥ ಪ್ರತಿಭೆ. ಬಜಾರ್ ಚಿತ್ರ ಕ್ರಿಕೆಟ್ ಬೆಟ್ಟಿಂಗ್‌ನ ಹಿನ್ನೆಲೆ ಹೊಂದಿದ್ದು, ನಾಯಕ ಅರುಣ್ ಅವರಿಗಷ್ಟೇ ಅಲ್ಲ, ವೇಶ್ಯೆಯ ಪಾತ್ರದಲ್ಲಿರುವ ನಾಯಕಿಗೂ ಹೆಚ್ಚು ಪ್ರಾಧಾನ್ಯತೆ ಇರುವ ಕಥೆ. ಬೆಟ್ಟಿಂಗ್ ಜಗತ್ತನ್ನು ಹತ್ತಿರದಿಂದ ನೋಡಿರುವವರ ದೃಷ್ಟಿಕೋನದಲ್ಲಿ ಕರಾಳ ಜಗತ್ತಿನಲ್ಲಿ ಅರಳುವ ಪ್ರೇಮಕಥೆ ಹೇಳಲು ಹೊರಟಿದ್ದಾರೆ ನಿರ್ದೇಶಕ ಹರೀಶ್. ಸುವಿನ್ ಸಿನಿಮಾಸ್ ಬ್ಯಾನರ್‌ನಲ್ಲೇ ಈ ಚಿತ್ರ ತಯಾರಾಗುತ್ತಿದ್ದು ಈಗಾಗಲೇ ಕಥೆ ಕೇಳಿದವರು ಬಜಾರು ಭಾರಿ ಜೋರೈತೆ ಎನ್ನುತ್ತಿರುವುದು ವಿಶೇಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


