ಸಿನಿಮಾ ಇಂಡಿಯಾ

ಕನ್ನಡದಲ್ಲಿ ಆಗಾಗ ದಾಖಲೆಗಳಲ್ಲಿ ಸೇರ್ಪಡೆಯಾಗುವ ಚಿತ್ರಗಳು ಸೆಟ್ಟೇರುತ್ತದೆ. ಅಂಥದೇ ಚಿತ್ರ 'ನಮಸ್ತೆ ಇಂಡಿಯಾ'. ಇಡೀ ಚಿತ್ರವನ್ನು ಒಂದೇ ಶಾಟ್ನಲ್ಲಿ ಚಿತ್ರೀಕರಣ ಮಾಡಿರುವ ಹೆಗ್ಗಳಿಕೆಯೊಂದಿಗೆ ಸುದ್ದಿಯಾದ ಈ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಚಿತ್ರದ ನಿರ್ಮಾಪಕ ಶಿವಕುಮಾರ್ ಗೌಡ. ಗುಣವಂತ ಮಂಜು ನಿರ್ದೇಶಕ. ಧನುಷ್ ಹಾಗೂ ಮೈತ್ರಿ ಚಿತ್ರದ ಜೋಡಿ. ಕೆ.ಎಂ. ಇಂದ್ರ ಅಲಿಯಾಸ್ ಇಂದ್ರಸೇನಾ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಂದಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.
ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಹರಿ ವೇಲು ಸೇರಿದಂತೆ ಇಡೀ ಚಿತ್ರತಂಡ ಸೇರಿ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿತ್ತು. 'ತುಂಬಾ ನಿರೀಕ್ಷೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಪ್ರೇಕ್ಷಕರು ಬೆಂಬಲಿಸುತ್ತಾರೆಂಬ ನಂಬಿಕೆ ಇದೆ. ಒಂದೇ ಶಾಟ್ನಲ್ಲಿ ಚಿತ್ರೀಕರಣ ಮಾಡಲು ಸಾಕಷ್ಟು ಶ್ರಮ ಹಾಕಿದ್ದೇವೆ. ನನ್ನ ಒಬ್ಬನ ಚಿತ್ರವಲ್ಲ. ಇಡೀ ತಂಡದ ಸಿನಿಮಾ ಇದು' ಎಂದರು ನಿರ್ದೇಶಕ ಮಂಜು. ನಿರ್ಮಾಪಕ ಶಿವಕುಮಾರ್ ಗೌಡ ರಿಯಲ್ ಎಸ್ಟೇಟ್ ಉದ್ಯಮಿ. ಬೆಂಗಳೂರಿನಲ್ಲಿ ದೊಡ್ಡ ಹೆಸರು ಮಾಡಿರುವ ಇವರು ಸಿನಿಮಾ ನಿರ್ಮಾಣಕ್ಕೆ ಬಂದಿದ್ದಾರೆ. 'ಮಂಜು ತುಂಬಾ ಒಳ್ಳೆಯ ಕಥೆ ಮಾಡಿಕೊಂಡಿದ್ದರು. ಹೀಗಾಗಿ ನಾನೇ ನಿರ್ಮಾಣ ಮಾಡುತ್ತೇನೆ ಎಂದು ಮುಂದೆ ಬಂದೆ' ಎನ್ನುವುದು ಶಿವಕುಮಾರ್ ಅವರ ಮಾತು.
ನಟಿ ಮೈತ್ರಿ ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತುಂಬಾ ದಿನಗಳ ನಂತರ 'ನಮಸ್ತೆ ಇಂಡಿಯಾ' ಚಿತ್ರದ ಮೂಲಕ ಬಂದಿದ್ದಾರೆ. 'ಈ ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ' ಎಂದರು ಮೈತ್ರಿ. ವೇಷಧಾರಿ ಮಕ್ಕಳ ಕೈಯಲ್ಲಿ ಚಿತ್ರದ ಆಡಿಯೋ ಸಿಡಿಗಳನ್ನು ಬಿಡುಗಡೆ ಮಾಡಿಸಲಾಯಿತು. 'ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ನಾನು ಈ ಚಿತ್ರದ ಆಡಿಯೋ ಸಿಡಿ ಮಾರುಕಟ್ಟೆ ಮಾಡುತ್ತಿದ್ದೇನೆ' ಎಂದರು ಲಹರಿ ವೇಲು. ಇಡೀ ಚಿತ್ರವನ್ನು ಹಂಪಿ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. ಧನುಷ್, ಶಿವಕುಮಾರ್ ಮತ್ತಿತರರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


