ರೌಡಿಗೆ ನಾಯಕನ ರಕ್ತ
ರೌಡಿ ಮೈಕೋನಾಗರಾಜನ ಸಹೋದರ ಹೊಡೆದಾಟದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುತ್ತಾನೆ. ಆತನಿಗೆ ಎ ನೆಗೆಟಿವ್ ರಕ್ತದ ಅವಶ್ಯಕತೆ ಇದ್ದಾಗ ನಾಯಕ ಲಿಖಿತ್ರಾಜ್ ತನ್ನ ರಕ್ತ ಕೊಡುತ್ತಾನೆ. ಮೇಲ್ಕಂಡ ದೃಶ್ಯವನ್ನು ಬಿ.ಇ.ಎಲ್. ಸರ್ಕಲ್ ಸಮೀಪ ಇರುವ ರಾಜಲಕ್ಷ್ಮಿ ನರ್ಸಿಂಗ್ ಹೋಂನಲ್ಲಿ ಓಂ ಸಾಯಿ ಪ್ರಕಾಶ್ ನಿರ್ದೇಶನದ ಆ್ಯಕ್ಷನ್ ಚಿತ್ರಕ್ಕಾಗಿ ಚಿತ್ರೀಕರಿಸಿಕೊಳ್ಳಲಾಯಿತು. ಇದರೊಂದಿಗೆ ಶೇ.75 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು ಇದೇ 26 ರಿಂದ ಶಿಂಷಾದಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.
ನಿಮಿಷಾಂಭ ಸಿನಿ ಕಂಪೆನಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಎಮ್.ನೀಲ್ ಸಂಗೀತ, ಜಿ.ರೇಣುಕುಮಾರ್ ಛಾಯಾಗ್ರಹಣ, ವಿಜಯಕುಮಾರ್.ಎಂ.ಸಿ. ಕಥೆ, ಚಿತ್ರಕಥೆ, ಸಂಭಾಷಣೆ ಇದೆ. ಸಾಯಿಕುಮಾರ್, ಲಿಖಿತರಾಜ್ ಅರಸ್, ದುನಿಯಾ ರಶ್ಮಿ, ಸಾಧುಕೋಕಿಲ, ಪದ್ಮಜಾ ರಾವ್, ಶಂಕರ್ ಅಶ್ವತ್, ಸತ್ಯಜಿತ್, ರಾಜು ತಾಳಿಕೋಟೆ, ಮೈಕೋ ನಾಗರಾಜ್ ಮುಂತಾದವರ ತಾರಾಗಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

