ಮಿತ್ರೋತ್ಸವ
ಹಾಸ್ಯಕ್ಕೆ ಎಂದೂ ಸಾವಿಲ್ಲ ಎಂದು ನಿರೂಪಿಸಿರುವ ಚಿತ್ರರಂಗ 'ನಕ್ಕರೆ ಅದೇ ಸ್ವರ್ಗ' ಎನುವ ಪಾಲಿಸಿಯನು ತಪ್ಪದೆ ಅನುಸರಿಸಿಕೊಂಡು...

ಯಾವುದೇ ಭಾಷೆಯಲ್ಲಿ ಬರುವ ಹಾಸ್ಯ ಚಿತ್ರಗಳಿಗೆ ಪ್ರೇಕ್ಷಕ ಜೈ ಎಂದಿದ್ದಾನೆ. ಹಾಸ್ಯಕ್ಕೆ ಎಂದೂ ಸಾವಿಲ್ಲ ಎಂದು ನಿರೂಪಿಸಿರುವ ಚಿತ್ರರಂಗ 'ನಕ್ಕರೆ ಅದೇ ಸ್ವರ್ಗ' ಎನುವ ಪಾಲಿಸಿಯನು ತಪ್ಪದೆ ಅನುಸರಿಸಿಕೊಂಡು ಬಂದಿದೆ. ಹೀಗಾಗಿ ಕಾಮಿಡಿ ನಟರಿಗೆ ಸಿಕ್ಕಾಪಟ್ಟೆ ಬೇಡಿಕೆ. ಇಲ್ಲಿ ಇಬ್ಬರು ಕಾಮಿಡಿ ಕಲಿಗಳು ಒಂದಾಗಿದ್ದಾರೆ ಎಂಬುದು ವಿಶೇಷ ಸುದ್ದಿಯಾದರೆ, ಅವರಿಗಾಗಿಯೇ ಫೋಟೋ ಶೂಟ್ ಕೂಡ ಮಾಡಲಾಗಿದೆ ಎಂಬುದು ದೊಡ್ಡ ಸುದ್ದಿ.
ಸಾಮಾನ್ಯವಾಗಿ ಚಿತ್ರದ ನಾಯಕ, ನಾಯಕಿಯದ್ದೇ ಫೋಟೋ ಶೂಟ್ ಮಾಡುವುದು ಚಿತ್ರರಂಗದವರ ವಾಡಿಕೆ. ಪೋಷಕ ಪಾತ್ರಗಳಿಗಾಗಿ ಪ್ರತ್ಯೇಕ ಫೋಟೋ ಶೂಟ್ ಮಾಡುವುದು ಕಡಿಮೆ. ಆದರೆ, ಇಲ್ಲೊಂದು ಜೋಡಿ ಫೋಟೋ ಶೂಟ್ನಲ್ಲಿ ಮಿಂಚುತ್ತಿದೆ. ಅವರೇ ಹಾಸ್ಯ ನಟ ಮಿತ್ರ ಹಾಗೂ ತುಳು ರಂಗಭೂಮಿಯ ಪ್ರಸಿದ್ಧ ಹಾಸ್ಯ ಕಲಾವಿದ ಅರವಿಂದ್ ಬೋಳಾರ್. ಕಲರ್ ಕಲರ್ ಡ್ರೆಸ್ನಲ್ಲಿ ತಮ್ಮ ಹಾಸ್ಯದ ಝಲಕ್ ತೋರಿಸಿರುವ ಈ ಜೋಡಿ, 'ಪೌರ್ಣಮಿ' ಚಿತ್ರದಲ್ಲಿ ಪ್ರೇಕ್ಷಕರನು ಯಾವ ರೀತಿ ನಗಿಸಲಿದೆ ಎಂದು ಕಾದು ನೋಡಬೇಕಿದೆ.
ಶ್ರೀಕಿ ನಾಯಕನಾಗಿ, ನಿಖಿತಾ ನಾಯಕಿಯಾಗಿ ಅಭಿನಯಿಸುತ್ತಿರುವ 'ಪೌರ್ಣಮಿ' ಚಿತ್ರದ ನಿರ್ದೇಶಕರು ಎನ್.ಎಸ್. ಶ್ರೀಧರ್. ಖಳನಾಯಕನಾಗಿ ಅರುಣ್ ಸಾಗರ್ ಇದ್ದಾರೆ. ಇವರ ಜೊತೆ ಧರ್ಮ ಕೂಡ ಸೇರ್ಪಡೆಯಾಗಿದ್ದಾರೆ. ಗೌರಿ ವೆಂಕಟೇಶ್ ಛಾಯಾಗ್ರಹಣ, ಅರುಣ್ ಸಂಗೀತವಿದೆ. ಅಂದಹಾಗೆ ಇಲ್ಲಿ ಅರವಿಂದ್ ಬೋಳಾರ್ ಮತ್ತು ಮಿತ್ರ ಅಪ್ಪ, ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಗನ ಪಾತ್ರದಲ್ಲಿ ಅಭಿನಯಿಸುತ್ತಿರುವ ಮಿತ್ರ ಇಲ್ಲಿ 'ಮನ್ಮಥ'! ಇದು ಅವರ ಪಾತ್ರದ ಹೆಸರು.
ಅರವಿಂದ್ ಬೋಳಾರ್ ಮತ್ತು ಮಿತ್ರನ ಟೈಮ್ ಸೆನ್ಸ್ ಕಾಮಿಡಿ ಕಿಕ್ ನೋಡಿರುವ ನಿರ್ದೇಶಕ ಎನ್.ಎಸ್. ಶ್ರೀಧರ್ ತುಳು ಭಾಷೆಯಲ್ಲೊಂದು ಸಿನಿಮಾ ಮಾಡಲಿಕ್ಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಮಿತ್ರ ಮತ್ತು ಬೋಳಾರ್ ಅವರೇ ಜೋಡಿ. ಎಲ್ಲವೂ ಅಂದುಕೊಂಡಂತೆ ಆದರೆ ನವೆಂಬರ್ ತಿಂಗಳೊಳಗೆ ತುಳು ಚಿತ್ರ ಸೆಟ್ಟೇರಲಿದೆ. ನಟ ಮಿತ್ರ, ಟೈಮಿಂಗ್ ಡೈಲಾಗ್ಗಳಿಂದಲೇ ತಮ್ಮ ಕಾಮಿಡಿ ಟ್ರ್ಯಾಕ್ ಅನು ಮುನಡೆಸಿಕೊಂಡು ಬಂದಿದ್ದಾರೆ. 'ಚಡ್ಡಿ ದೋಸ್ತ್' ಚಿತ್ರದಲ್ಲೂ ಮಿತ್ರೋತ್ಸವ ಸರಾಗವಾಗಿ ಸಾಗಿದೆ. 'ಪೌರ್ಣಮಿ'ಯಲ್ಲಿ ಒಂದಾಗಿರುವ ಅರವಿಂದ್ ಬೋಳಾರ್ ಮತ್ತು ಮಿತ್ರನ ಕಾಮಿಡಿ ಕಮಾಲ್ ನೋಡಲು ಸಿದ್ಧರಾಗಿ.
- ಕೇಶು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


