ಸಿನಿಮಾ ಲೇಖನ

ಸಿಂಗಲ್ ಆಗೊಂದ್ ಲವ್ ಸ್ಟೋರಿ

ಸಿಂಗಲ್ ಆಗೊಂದ್ ಲವ್ ಸ್ಟೋರಿ
Published On :

ಸಿಂಗಲ್ ಶಾಟ್‌ನಲ್ಲೇ ಒಂದು ಸಿನಿಮಾ ತೆಗೆಯಲು ಹೊರಟಿದ್ದಾರೆ ನಿರ್ದೇಶಕ ಗುಣವಂತ ಮಂಜು. ಕರ್ಣ ಶ್ರೀಎಂಟರ್‌ಪ್ರೈಸಸ್ ಮೂಲಕ ಇಂಥದೊಂದು ಸಾಧನೆ ಮಾಡಿ ಗಿನ್ನಿಸ್ ಮತ್ತು ಲಿಮ್ಕಾ ರೆಕಾರ್ಡ್‌ಗಳಲ್ಲಿ ತಮ್ಮ  ಹೆಸರು ಸೇರಿಸುವ ಹಂಬಲ ಅವರದ್ದು.
ಜಾಗತಿಕ ಸಿನಿಮಾ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ಆಗುತ್ತಿರುವ ಪ್ರಯತ್ನ ಎನ್ನುವ ಮಂಜು ತಮ್ಮ ಈ ಚಿತ್ರಕ್ಕೆ ನಮಸ್ತೆ ಇಂಡಿಯಾ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರವನ್ನು ಸಂಪೂರ್ಣವಾಗಿ ಹಂಪಿಯಲ್ಲಿ ಚಿತ್ರೀಕರಿಸಲಿದ್ದಾರೆ ಎಂಬುದು ಸದ್ಯದ ಸುದ್ದಿ.
ಈಗಾಗಲೇ ಕೆ.ವಿ.ರಾಜು, ಆರ್. ಚಂದ್ರು, ಎ.ಆರ್.ಬಾಬು ನಿರ್ದೇಶನದ ಅನೇಕ ಚಿತ್ರಗಳಿಗೆ ಸಹ ನಿರ್ದೇಶಕರು, ಬರಹಗಾರರು ಆಗಿ ಕೆಲಸ ಮಾಡಿ, ಅನೇಕ ಕಿರುಚಿತ್ರಗಳನ್ನು ಮಾಡಿರುವ ಮಂಜು, ನಮಸ್ತೆ ಇಂಡಿಯಾ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆ.  
 ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ಕೆ.ಎಂ. ಇಂದ್ರ ಅವರ ಸಂಗೀತ, ಸಾಹಿತ್ಯ ಇದೆ. ಸೈಕೋ ಚಿತ್ರದಲ್ಲಿ ಅಭಿನಯಿಸಿದ್ದ ಧನುಷ್, ಮೈತ್ರೇಯಾ ಚಿತ್ರದ ನಾಯಕ ನಾಯಕಿರಾಗಿ ಕಾಣಿಸಿಕೊಳ್ಳಲಿದ್ದರೆ, ತನುಷಾ ಎರಡನೇ ನಾಯಕಿಯಾಗಲಿದ್ದಾರೆ.
ಮಾಲಿನಿ, ಶಿವಕುಮಾರ್, ನಕ್ಷತಾ, ಸಂತೋಷ್ ನಮಸ್ತೆ ಇಂಡಿಯಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ತಮ್ಮ ನಿರ್ದೇಶನದ ಮೊದಲ ಚಿತ್ರದ ಮೂಲಕವೇ ಚಿತ್ರರಂಗದಲ್ಲೊಂದು ಹೊಸ ದಾಖಲೆ ಮಾಡುವ ಉತ್ಸಾಹದಲ್ಲಿದ್ದಾರೆ ಗುಣವಂತ ಮಂಜು. 

- ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.