ಕಾಡಿನ ರಾಜೇಶ ಟಾಕೀಸಿಗೆ ಬಂದ!

ಅಂತೂ ಇಂತೂ ರಾಜೇಶ ಬಂದ. ಯಾರೀ ಈ ರಾಜೇಶ? ಅಂತೀರಾ, ಅದೇ 'ಜಂಗಲ್ ಜಾಕಿ' ಚಿತ್ರದ ನಾಯಕ. ಚಿತ್ರಮಂದಿರದಲ್ಲಿ ತೆರೆ ಮೇಲೆ ಸಿನಿಮಾ ಮೂಡುವ ಮೊದಲೇ ಪ್ರೊಜೆಕ್ಟರ್ ಮಿಷನ್ ಸದ್ದು ಮಾಡಿದಂತೆ ಬಿಡುಗಡೆ ಮುನ್ನ ಸಾಕಷ್ಟು ರಗಳೆ ಮಾಡಿದ್ದ ಈ ಚಿತ್ರಕ್ಕೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ.
ಹೀಗಾಗಿ ಕಾಡಿನ ರಾಜೇಶ ನಾಡಿನ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲಿದ್ದಾನೆ. ಈ ವಾರ (ಸೆ.20) ತೆರೆ ಕಾಣಲಿರುವ ಈ ಚಿತ್ರದ ನಿರ್ದೇಶಕ ರವಿ ಕಡೂರ್. ವಿ. ಮನೋಹರ್ ಸಂಗೀತ ಇದೆ. ಚಿತ್ರದ ನಾಯಕಿ ಐಶ್ವರ್ಯಾ. ಶಿವನಂಜೇ ಗೌಡ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
ಚಿತ್ರತಂಡದಲ್ಲಿ ಪರಿಚಿತ ಹಿರಿಯ ವ್ಯಕ್ತಿ ಎಂದರೆ ವಿ. ಮನೋಹರ್. 'ಇದೊಂದು ಹೊಸ ತಂಡ. ನಿಜಕ್ಕೂ ಒಳ್ಳೆಯ ಕನಸು ಕಟ್ಟಿಕೊಂಡು ಈ ಚಿತ್ರ ಮಾಡಿದ್ದಾರೆ. ಉತ್ಸಾಹಿ ಹುಡುಗರ ಹೊಸತನವಿರುವುದರಿಂದ ಚಿತ್ರದಲ್ಲೂ ಹೊಸತವಿರುತ್ತದೆ. ಹೊಸಬರಿಗೆ ಪ್ರೇಕ್ಷಕರ ಮತ್ತು ಮಾಧ್ಯಮಗಳ ನೆರವು ಅಗತ್ಯ' ಎಂದರು ಮನೋಹರ್. ರವಿಗೆ ಇದು ಮೊದಲ ನಿರ್ದೇಶನವಾದರೂ ತಾನು ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದೇನೆಂಬ ಖುಷಿಯಲ್ಲಿದ್ದರು. 'ತಡವಾದರೂ ಸಿನಿಮಾ ಕಳಪೆಯಾಗಿಲ್ಲ. ಪ್ರೇಕ್ಷಕರಿಗೆ ಇಷ್ಟವಾಗುವ ಚಿತ್ರವಿದು' ಎಂದರು ನಿರ್ದೇಶಕರು. ಚಿತ್ರದ ನಾಯಕ ಮತ್ತು ನಾಯಕಿ ರಿಯಾಲಿಟಿ ಶೋನಿಂದ ಬಂದವರು. ಆ ಶೋ ಪ್ರಸಿದ್ಧಿಯಾಗುತ್ತಿದ್ದಂತೆಯೇ ಈ ಇಬ್ಬರು ಚಿತ್ರಕ್ಕೆ ಜೋಡಿಯಾಗಿ ಆಯ್ಕೆಯಾದರು. 'ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ನಮಂಥ ಹೊಸಬರಿಗೆ ನಿಮ್ಮ ನೆರವು ಇರಲಿ' ಎಂದರು ನಾಯಕ ಮತ್ತು ನಾಯಕಿ, ಜಂಟಿಯಾಗಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


