ಈ ಸಂಭಾಷಣೆ...

ಆಡಿಯೋ ಸಿಡಿ ಮಾರ್ಕೆಟ್‌ನಲ್ಲಿ ಹೆಚ್ಚು ಲಾಭವಿಲ್ಲ ಎಂಬುದು ಇತ್ತೀಚಿನ ದಿನಗಳಲ್ಲಿ ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಮಾತು. ಆದರೆ ನಮ್ಮ ಚಿತ್ರಗಳಲ್ಲಿ ಮಾತಿಗಂತೂ ಬೆಲೆ ಇದೆ ಎಂಬುದು ಹಲವಾರು ಬಾರಿ ಪ್ರೂವ್ ಆಗಿದೆ. ಅದಕ್ಕೆ ಕಾರಣ ಸಂಭಾಷಣೆಯನ್ನೇ ಹೆಚ್ಚಾಗಿ ನಂಬಿಕೊಂಡು ಯಶಸ್ಸು ಕಂಡಿರುವ ಅನೇಕ ಚಿತ್ರಗಳು ಮತ್ತದರ ನಿರ್ದೇಶಕರುಗಳು. ನಿರ್ದೇಶಕ ಯೋಗರಾಜ್‌ಭಟ್ ಅವರ ಚಿತ್ರಗಳಲ್ಲಂತೂ ಮಾತಿನ ಮಳೆಯೇ ಹರಿಯುತ್ತದೆ, ಗುರುಪ್ರಸಾದ್ ಕೂಡ ಮಾತಿಗೆ ತಪ್ಪಿದವರಲ್ಲ, ಇವರ ಜೊತೆಗೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಸುನಿ, ಗೋವಿಂದಾಯನಮಃ, ಗೂಗ್ಲಿ ಚಿತ್ರಗಳ ಒಡೆಯ ಪವನ್ ಒಡೆಯರ್ ಕೂಡಾ ಈಗ ಮನೆಮಾತಾಗಿದ್ದಾರೆ. ಇವರೆಲ್ಲ ಮಾತು ನಂಬಿಕೊಂಡೇ ಗೆಲ್ಲಬಹುದು ಎಂದು ತೋರಿಸಿದವರು. ಪ್ರೇಕ್ಷಕರಿಗೆ ಹಾಡುಗಳನ್ನು ಕೇಳಲು ಟಿವಿ, ಟೂಟ್ಯೂಬ್‌ನಂಥ ಅನೇಕ ದಾರಿಗಳಿವೆ. ಆದರೆ ಸಂಭಾಷಣೆ ಕೇಳಲು ಚಿತ್ರಮಂದಿರಕ್ಕೇ ಹೋಗಬೇಕು. ಹಿಂದೆಲ್ಲಾ ಹಾಡುಗಳ ಕ್ಯಾಸೆಟ್ ಜೊತೆಗೆ ಚಿತ್ರಕಥೆಯ ಕ್ಯಾಸೆಟ್‌ಗಳು ಕೂಡ ಬಿಡುಗಡೆಯಾಗುತ್ತಿದ್ದವು. ಈಗ ಆ ಸಂಸ್ಕೃತಿ ಕಡಿಮೆಯಾಗಿದೆ. ಹೆಚ್ಚು ಕಡಿಮೆ ಇಲ್ಲವೇ ಇಲ್ಲ ಎಂದೇ ಹೇಳಬಹುದು. ಹಾಗಾಗಿ ಮಾತಿನಲ್ಲೇ ಮನೆ ಕಟ್ಟುತ್ತಿರುವ ಇಂದಿನ ಹಿಟ್ ಚಿತ್ರಗಳ ಚಿತ್ರಕಥೆಯನ್ನು ಸಂ ಬಂಧಪಟ್ಟವರು ಯಾಕೆ ಕ್ಯಾಷ್ ಮಾಡಿಕೊಳ್ಳಬಾರದು? ಎಂಬುದು ಕೇಳಬಹುದಾದ ಪ್ರಶ್ನೆ. ಹಾಡುಗಳ ಮಾರ್ಕೆಟ್‌ನಲ್ಲಿ ಲಾಭ ಇಲ್ಲದಿದ್ದರೂ ಚಿತ್ರಕಥೆ ಸಿಡಿಗಳ ಯುಗ ಮತ್ತೆ ಪ್ರಾರಂಭವಾದರೆ ತಮ್ಮ ಫೇವರೆಟ್ ಚಿತ್ರದ ಫೇವರೆಟ್ ಸಂಭಾಷಣೆಯನ್ನು ಮತ್ತೆ ಮತ್ತೆ ಕೇಳಬಯಸುವ ಪ್ರೇಕ್ಷಕರಿಗೆ ಇದು ಇಷ್ಟವಾಗಬಹುದು. ಜೊತೆಗೆ ಕೇವಲ ಸಿಡಿಗಳಷ್ಟೇ ಅಲ್ಲದೆ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದರೆ, ಅದರಲ್ಲೂ ದುಡ್ಡು ಮಾಡಿಕೊಳ್ಳುವ ಎಲ್ಲ ಸಾಧ್ಯತೆಗಳಂತೂ ಇವೆ.
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


