ಪಾಪ ನಿವೇದನೆ

ಕ್ರೈಸ್ತ ಸಮುದಾಯದಲ್ಲಿರುವ ಕನ್‌ಫೆಶನ್ ಕಾನ್ಸೆಪ್ಟ್ ಅನ್ನು ತಲೆಯಲ್ಲಿಟ್ಟುಕೊಂಡು ಮನಸ್ಸಿಗೆ ಮುಟ್ಟುವಂಥ ಚಿತ್ರ ಮಾಡಿದ್ದೇವೆ ಎನ್ನುತ್ತದೆ ಆತ್ಮಸಾಕ್ಷಿ ಚಿತ್ರತಂಡ. ಅಂದಹಾಗೆ ಇದು ಕಥೆಗಾರ ನಾ. ಡಿಸೋಜ ಅವರ ಪಾಪ ನಿವೇದನೆ ಎಂಬ ಕಥೆ ಆಧಾರಿತ ಚಿತ್ರ. ದ್ವೀಪ, ಬಳುವಳಿ, ಬೆಟ್ಟದ ಪುರದ ದಿಟ್ಟ ಮಕ್ಕಳು ಚಿತ್ರಗಳ ನಂತರ ನಂತರ ಸಿನಿಮಾ ಆಗುತ್ತಿರುವ ನಾ. ಡಿಸೋಜ ಅವರ ನಾಲ್ಕನೇ ಕಥೆ ಇದು.
ಚಿತ್ರದ ನಾಯಕ, ನಿರ್ಮಾಪಕ ಮತ್ತು ನಿರ್ದೇಶಕ ಎಲ್ಲವೂ ಆಗಿರುವುದು ಮನು. ವಿಶೇಷ ಎಂದರೆ ಚಿತ್ರದ ನಾಯಕಿ ಶ್ವೇತಾ ಶ್ರೀವಾತ್ಸವ್. ಇದು ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿಗೆ ಮುಂಚೆ ಒಪ್ಪಿಕೊಂಡ ಚಿತ್ರ ಎಂಬುದು, ಆತ್ಮಸಾಕ್ಷಿ ಚಿತ್ರದ ಪತ್ರಿಕಾಗೋಷ್ಠಿಗೆ ನಾಯಕಿ ಬಂದಿರಲಿಲ್ಲ ಎನ್ನುವುದರಷ್ಟೇ ಸತ್ಯ. ಈ ಟಿವಿಯಲ್ಲಿ ಕೆಲಸ ಮಾಡಿ ನಂತರ ಹಲವು ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ ಅನುಭವ ನಾಯಕ, ಕಮ್ ನಿರ್ದೇಶಕ ಮನು ಅವರದು. ಹುಡುಗಿಯೊಬ್ಬಳು ಚರ್ಚ್‌ನಲ್ಲಿ ಫಾದರ್ ಮುಂದೆ ತನ್ನ ವ್ಯಥೆ ಹೇಳಿಕೊಂಡು ಪಾಪ ನಿವೇದನೆ ಮಾಡಿಕೊಳ್ಳುತ್ತಿರುವಾಗಲೇ ಒಂದು ಕೊಲೆಯಾಗುತ್ತದಂತೆ. ಆಮೇಲೇನಾಗುತ್ತೆ ಎಂಬುದು ಆತ್ಮಸಾಕ್ಷಿಯ ಕಥೆ. ಆಗ ಅಲ್ಲಿ ಬರುವ ತನಿಖಾ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ವಿಕ್ರಮ್ ಉದಯ್‌ಕುಮಾರ್ ಕಾಣಿಸಿಕೊಂಡಿದ್ದಾರಂತೆ. ತಮ್ಮ ಚಿತ್ರದ ಬಗ್ಗೆ ಇಷ್ಟೆಲ್ಲ ಹೇಳಿಕೊಂಡಮೇಲೆ ಇಡೀ ಚಿತ್ರತಂಡ ಒಟ್ಟಾಗಿ ಆತ್ಮಸಾಕ್ಷಿಯ ಹಾಡುಗಳ ಸಿಡಿ ಬಿಡುಗಡೆ ಮಾಡಿತು. ಲಹರಿ ವೇಲು ತಮ್ಮ ಲಹರಿ ಆಡಿಯೋ ಸಂಸ್ಥೆಯ ಮೂಲಕ ಈ ಚಿತ್ರದ ಹಾಡುಗಳನ್ನು ಮಾರುಕಟ್ಟೆಗೆ ತಂದಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕ ಎ.ಎಂ.ನೀಲ್.
- ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


