ಇನ್ನೂ ಚಿತ್ರಮಂದಿರದಲ್ಲಿದೆ

ಗೆಲ್ಲುವೆವು ನಾವು ಎಂಬ ನಂಬಿಕೆಯಿಂದ ಸಿನಿಮಾ ಮಾಡುವವರೇ ಎಲ್ಲ. ಆದರೆ ಇಲ್ಲಿ ಕೆಲವರು ಮಾತ್ರ ಗೆಲ್ಲುತ್ತಾರೆ. ಅಂಥ ಗೆದ್ದ ಮಕ್ಕಳ ವಿಭಾಗಕ್ಕೆ ಸಿಲ್ಕ್ ಚಿತ್ರ ಕೂಡ ಸೇರಿದೆ. ಆದರೆ ಸಿಲ್ಕ್ ಈಗ ಗೆದ್ದ ಮಗಳು. ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ನಳನಳಿಸುತ್ತಿರುವ ಸಿಲ್ಕ್ಳನ್ನು ಮಾತನಾಡಿಸಿದರೆ 'ನಂಗೀಗ 25 ತುಂಬಿ ಐವತ್ತಕ್ಕೆ ಬಿದ್ದಿದೆ' ಎನ್ನುತ್ತಾಳೆ. ಅಂದರೆ ಸಿಲ್ಕ್ ಚಿತ್ರ 25ನೇ ದಿನ ಪೂರೈಸಿ ಸಿಲ್ಕ್ 50ನೇ ದಿನದತ್ತ ಮುಂದುವರಿಯುತ್ತಿದೆ.
ತಮ್ಮ ಚಿತ್ರ ಯಶಸ್ವೀ 25 ದಿನಗಳನ್ನು ಪೂರೈಸಿದೆ ಎಂಬುದನ್ನು ಹೇಳಿಕೊಳ್ಳಲು ಪತ್ರಿಕಾಗೋಷ್ಠಿ ಕರೆದಿದ್ದ ಚಿತ್ರತಂಡದಲ್ಲಿ ಅಂದು ಸಿಲ್ಕ್ ವೀಣಾ ಮಲ್ಲಿಕ್ ಇರಲಿಲ್ಲ. ಆದರೆ ಚಿತ್ರತಂಡದಲ್ಲಿ ಸಂತೋಷ ಮತ್ತು ನಿರಾಸೆ ಎರಡೂ ಮನೆ ಮಾಡಿತ್ತು. ಅದಕ್ಕೆ ಕಾರಣ ಚಿತ್ರ ಕಾಣುತ್ತಿರುವ ಗೆಲುವು ಮತ್ತು ಚಿತ್ರಕ್ಕೆ ಆತಂಕ ತಂದೊಡ್ಡಿದ ಕೆಲವರ ಹುನ್ನಾರ.
ಬಿಡುಗಡೆಯ ಸಮಯದಲ್ಲೇ ಹೇಳ್ಕೊಂಡಿದ್ದ ಮಾತನ್ನು ಮತ್ತೊಮ್ಮೆ ಹೇಳಿಕೊಂಡಿತು ಚಿತ್ರತಂಡ. ನಾಯಕ ಅಕ್ಷಯ್ ನಮ್ಮ ಚಿತ್ರ ಇನ್ನೂ ಚಿತ್ರಮಂದಿರದಲ್ಲಿದೆ ಎಂಬ ಮಾತನ್ನೇ ಪುನರುಚ್ಛರಿಸಿದರು. ಯಾರ ಮಾತೂ ಕೇಳಬೇಡಿ, ಸಿನಿಮಾಗೆ ಕೋರ್ಟ್ನಿಂದ ಯಾವ ಅಡ್ಡಿ ಆತಂಕವೂ ಇಲ್ಲ. ಯಾವ ತಡೆಯಾಜ್ಞೆಯೂ ಇಲ್ಲ. ಸಿನಿಮಾವನ್ನು ಜನ ನೋಡುತ್ತಿದ್ದಾರೆ. ನೀವೂ ನೋಡಿ ಆನಂದಿಸಿ ಎನ್ನುತ್ತಾರೆ.
ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ತ್ರಿಶೂಲ್ ಅವರದ್ದೂ ಇದೇ ಮಾತು. ಕೆಲವು ಸಂಘಟನೆಗಲು ಹೇಗೆ ತಮ್ಮ ಚಿತ್ರವನ್ನು ತಡೆಯಲು ನೋಡಿದವು ಎಂಬುದನ್ನು ವಿವರಿಸಲು ಉತ್ತರ ಕರ್ನಾಟಕದ ವಿತರಕರನ್ನು ಪತ್ರಿಕಾಗೋಷ್ಠಿಗೆ ಕರೆಸಿತ್ತು ಚಿತ್ರತಂಡ.
ನಮ್ಮ ಚಿತ್ರವನ್ನು ತುಳಿಯಲು ನೋಡಿದವರು ಬಹಳ. ಬಿಡುಗಡೆಯ ದಿನ ನಮ್ಮ ಬಳಿ ಸೆನ್ಸಾರ್ ಸರ್ಟಿಫಿಕೇಟ್ ಇದ್ದರೂ ಚಿತ್ರದ ಪ್ರದರ್ಶನಕ್ಕೆ ಅಡ್ಡಿ ಮಾಡಿದರು ಎನ್ನುವ ಸಿಲ್ಕ್ ಇನ್ನೊಮ್ಮೆ ನಮ್ಮದು ಅಶ್ಲೀಲ ಚಿತ್ರ ಅಲ್ಲ. ಹಾಗಾಗಿ ಹೆಂಗಸರೂ ನೋಡಬಹುದು. ಮತ್ತು ಎಲ್ಲ ಹೆಂಗಸರೂ ಇಂಥ ಚಿತ್ರ ನೋಡಲೇಬೇಕು ಎನ್ನುತ್ತಾ, ಸುಮಾರು 25 ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿದೆ ಎಂಬ ಮಾತಿನೊಂದಿಗೆ ಮಾತುಕತೆ ಮುಗಿಸಿತು ಸಿಲ್ಕ್ ಟೀಮ್.
- ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


