ಸಿನಿಮಾ ಲೇಖನ

ಗೂಳಿಯಿಂದ ಗೂಗ್ಲಿವರೆಗೆ

ಚಿತ್ರರಂಗದಲ್ಲಿ ಕೆಲವರ ಪರಿಸ್ಥಿತಿ ಹೀಗೆಯೇ. ಉಳಿದವರು ಕಂಡಂತೆ ಅವರೊಬ್ಬ ಬ್ಯುಸಿ ಮನುಷ್ಯ. ಆದರೆ ವಾಸ್ತವದಲ್ಲಿ ಅದು ಸುಳ್ಳಾಗಿರುತ್ತದೆ. ಈ ಮಾತು ಈಗ ...

ಗೂಳಿಯಿಂದ ಗೂಗ್ಲಿವರೆಗೆ
Published On :

ಚಿತ್ರರಂಗದಲ್ಲಿ ಕೆಲವರ ಪರಿಸ್ಥಿತಿ ಹೀಗೆಯೇ. ಉಳಿದವರು ಕಂಡಂತೆ ಅವರೊಬ್ಬ ಬ್ಯುಸಿ ಮನುಷ್ಯ. ಆದರೆ ವಾಸ್ತವದಲ್ಲಿ ಅದು ಸುಳ್ಳಾಗಿರುತ್ತದೆ. ಈ ಮಾತು ಈಗ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರಿಗೆ ಸರಿಯಾಗಿ ಹೊಂದುತ್ತದೆ. ಕೆಲವರಿಗೆ ಸಕ್ಸಸ್ ಸಿಗುವುದು ತಡವಾಗಿಯೇ. ಅನೂಪ್ಗೂ ಅದೂ ಆಗಿದೆ ಆದರೆ, ಅದರ ಜೊತೆಗೆ ಅವರ ಸಿನಿಮಾಗಳೂ ತಡವಾಗುತ್ತಿದ್ದುದು ಅವರ ಇನ್ನಷ್ಟು ಸಮಯ ತಿಂದದ್ದು ಸುಳ್ಳಲ್ಲ. ಮೊದಲ ಚಿತ್ರ ಗೂಳಿಯಿಂದ ಇತ್ತೀಚಿಗೆ ಹಿನ್ನೆಲೆ ಸಂಗೀತ ನೀಡಿದ ಗೂಗ್ಲಿವರೆಗೆ ಅನೂಪ್ ಕೆಲಸವನ್ನು ಮೆಚ್ಚಿಕೊಳ್ಳದವರಿಲ್ಲ. ಆದರೆ ಗೂಳಿಯ ನಂತರ ಅನೂಪ್ಗೆ ಒಂದು ಲಾಂಗ್ ಬ್ರೇಕ್. ಅದಾದ ಮೇಲೆ ಎದ್ದೇಳು ಮಂಜುನಾಥನ ಹಾಡುಗಳು ಗೆದ್ದರೂ ಅದರ ನಂತರ ಮತ್ತೊಂದು ಬ್ರೇಕ್. ಮುಂದಿನ ಹಿಟ್ ಆದ ಸಿದ್ಲಿಂಗು ನಂತರ ಮತ್ತೊಂದು ಬ್ರೇಕ್. ಹೀಗೆ ಬ್ರೇಕ್ ಸಿಗುವಂಥ ಹಾಡುಗಳನ್ನು ನೀಡುತ್ತಿದ್ದರೂ ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಅನೂಪ್ ಅವರದ್ದು. ಇವೆಲ್ಲದರ ನಂತರ ಪರಾರಿ ಹಾಡುಗಳು ಮತ್ತು ಅದಕ್ಕಿಂತ ಹೆಚ್ಚಾಗಿ ಮದರಂಗಿ ಚಿತ್ರದ ಡಾರ್ಲಿಂಗ್ ಡಾರ್ಲಿಂಗ್ ಹಾಡು ಅನೂಪ್ರನ್ನು ಮತ್ತೆ ಯಶಸ್ಸಿನ ಅಲೆಯಲ್ಲಿ ತೇಲಿಸಿದರೂ ಅವರು ನಾವಂದುಕೊಂಡಷ್ಟು ಬ್ಯುಸಿ ಆಗಿಲ್ಲ ಎನ್ನುವುದು ನಿರಾಸೆ. 'ಕೆಲವರು ನಾನು ಪೂರ್ತಿ ಬ್ಯುಸಿಯಾಗಿದ್ದೇನೆ ಎಂದು ತಾವೇ ಅಂದುಕೊಂಡುಬಿಡುತ್ತಾರೆ, ಇನ್ನು ಕೆಲವರು ನನ್ನ ಹಾಡುಗಳು ಹಿಟ್ ಆಗಿರುವುದನ್ನು ನೋಡಿ, ನಾನು ತುಂಬಾ ಕಾಸ್ಟ್ಲೀ ಎಂದುಕೊಂಡು ನನ್ನ ಹತ್ತಿರಕ್ಕೂ  ಬರುವುದಿಲ್ಲ. ಹಾಗಾಗಿ ನಾನು ಸಿಕ್ಕಾಪಟ್ಟೆ ಬ್ಯುಸಿ ಎಂಬ ಹಂತಕ್ಕೆ ಇನ್ನೂ ತಲುಪಿಲ್ಲ' ಎನ್ನುತ್ತಾರೆ ಅನೂಪ್. ಸದ್ಯಕ್ಕೆ ಲವ್ ಇನ್ ಮಂಡ್ಯ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಅನೂಪ್ರಂಥ ಪ್ರತಿಭೆಗೆ ಖಂಡಿತಾ ಈಗ ಸಿಗುತ್ತಿರುವ ಅವಕಾಶಗಳು ನ್ಯಾಯ ಒದಗಿಸುತ್ತಿಲ್ಲ. ಆದಷ್ಟು ಬೇಗನೆ ಅನೂಪ್ ಬ್ಯುಸಿ ಸಂಗೀತ ನಿರ್ದೇಶಕ ಎನಿಸಿಕೊಳ್ಳಲಿ ಎಂಬುದು ಅವರ ಹಾಡುಗಳ ಅಭಿಮಾನಿಗಳ ಆಶಯ.

- ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.