ದಾಸ ಧಾರಾವಾಹಿ

ಹಿರಿಯ ನಟ ಶ್ರೀನಿವಾಸಮೂರ್ತಿ ಕಿರುತೆರೆಯಲ್ಲಿ ಮತ್ತೊಮ್ಮೆ ನಿರ್ದೇಶಕರಾಗುತ್ತಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಅವರಿಗಾಗಿ ಕನಕದಾಸ ಎಂಬ ಧಾರಾವಾಹಿಯ ಚಿತ್ರೀಕರಣವನ್ನು ಇದೇ ಜನವರಿಯಲ್ಲಿ ಆರಂಭಿಸಲಿದ್ದಾರೆ ಮೂರ್ತಿ ಅವರು.
ವಿಶೇಷ ಎಂದರೆ ಈ ಧಾರಾವಾಹಿಯಲ್ಲಿ ಬಾಲ ಕನಕನಾಗಿ ಮೂರ್ತಿಗಳ ಮೊಮ್ಮಗ, ನಟ ನವೀನ್‌ಕೃಷ್ಣ ಅವರ ಪುತ್ರ ಹರ್ಷ ಅಭಿನಯಿಸುತ್ತಿದ್ದರೆ, ಹರೆಯದ ಕನಕನಾಗಿ ನವೀನ್‌ಕೃಷ್ಣ ಮತ್ತು ಹಿರಿಯ ಕನಕನಾಗಿ ಸ್ವತಃ ಶ್ರೀನಿವಾಸಮೂರ್ತಿ ಅವರೇ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಕನಕನ ಹಿತೈಷಿಯಾಗಿ ನಟ ರಮೇಶ್‌ಭಟ್ ಅವರಿಗೊಂದು ವಿಶೇಷ ಪಾತ್ರವಿದೆ.
ಈ ವಿಷಯ ಹೇಳಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಇಂದು ಕೌಟುಂಬಿಕ ಧಾರಾವಾಹಿಗಳೇ ಹೆಚ್ಚಾಗಿವೆ. ಹಾಗಾಗಿ ಇಂಥ ಹೊಸತನದ ಧಾರಾವಾಹಿಗಳು ಬೇಕು ಅನಿಸಿದ್ದರಿಂದ ಕನಕದಾಸರ ಕಥೆ ಹೇಳಲು ಪ್ರಯತ್ನ ಮಾಡುತ್ತಿದ್ದೇವೆ, ನಾನೂ ಕೂಡ ಕನಕದಾಸರ ಬಗ್ಗೆ ಸಾಕಷ್ಟು ಓದಿ ತಿಳಿದುಕೊಂಡಿದ್ದೇನೆ ಎಂದರು ನಿರ್ಮಾಪಕರಾದ ಎಚ್‌ಡಿ. ಕುಮಾರಸ್ವಾಮಿ.
ನಿರ್ದೇಶಕ ಶ್ರೀನಿವಾಸಮೂರ್ತಿ ಅವರು ಈ ಕಥೆಯಲ್ಲಿ ವೈವಿಧ್ಯಮಯ ಅಂಶಗಳಿವೆ. ಇದೊಂದು ಜನಪ್ರಿಯ ಧಾರಾವಾಹಿ ಆಗುತ್ತದೆ ಎಂಬ ನಂಬಿಕೆ ನನಗಿದೆ ಎಂದರು. ದೊಡ್ಡವರ ಜೊತೆ ಕುಳಿತಿದ್ದೇನೆ. ಏನು ಮಾತನಾಡಬೇಕೆಂದು ತಿಳಿಯುತ್ತಿಲ್ಲ. ಆದರೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ಇದೆ ಎಂದಿದ್ದು ನಟ ನವೀನ್ ಕೃಷ್ಣ. ಇದರ ಜೊತೆಗೆ ಇಲ್ಲಿಯವರೆಗೂ ಅವರಿಗೆ ಇಂಥ ಪಾತ್ರ ಸಿಕ್ಕಿಲ್ಲ ಎಂಬುದು ರಮೇಶ್ ಭಟ್ ಅವರ ಪರವಾಗಿ ಸ್ವತಃ ಕುಮಾರಸ್ವಾಮಿ ಮತ್ತು ಶ್ರೀನಿವಾಸ, ಮೂರ್ತಿ ಅವರೇ ಹೇಳಿದ ಮಾತು. ಮುಂದಿನ ವರ್ಷದ ಯುಗಾದಿಯ ಹೊತ್ತಿಗೆ ಧಾರಾವಾಹಿ ಕಸ್ತೂರಿ ವಾಹಿನಿಯಲ್ಲಿ ಪ್ರಸಾರ ಆರಂಭಿಸಲಿದೆಯಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


