ಸಿನಿಮಾ ಲೇಖನ

ಪ್ರಿಯಾ..ಪ್ರಿಯಾ..ಓ ಪ್ರಿಯಾ

ಸ್ಯಾಂಡಲ್‌ವುಡ್‌ನಲ್ಲಿ ನಾಯಕಿ ಮತ್ತು ನಿರ್ದೇಶಕಿ ಎರಡೂ ಆಗಿ ಹೆಸರು ಮಾಡಿರುವ ಪ್ರಿಯಾ ಹಾಸನ್ ಬಹಳ ದಿನಗಳ ನಂತರ ತಮ್ಮ ಹೊಸ ಚಿತ್ರವನ್ನು ...

ಪ್ರಿಯಾ..ಪ್ರಿಯಾ..ಓ ಪ್ರಿಯಾ
Published On :

ಸ್ಯಾಂಡಲ್‌ವುಡ್‌ನಲ್ಲಿ ನಾಯಕಿ ಮತ್ತು ನಿರ್ದೇಶಕಿ ಎರಡೂ ಆಗಿ ಹೆಸರು ಮಾಡಿರುವ ಪ್ರಿಯಾ ಹಾಸನ್ ಬಹಳ  ದಿನಗಳ ನಂತರ ತಮ್ಮ ಹೊಸ ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಮುನ್ಸೂಚನೆ ನೀಡಿದ್ದಾರೆ. ಮೊನ್ನೆ ತಮ್ಮ 'ಸ್ಮಗ್ಲರ್‌' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಿದ್ದ ಪ್ರಿಯಾ, ಸ್ಮಗ್ಲರ್ ಹಾಡುಗಳನ್ನು ಅನಾವರಣಗೊಳಿಸಲು ಹಲವು ಗಣ್ಯ ಅತಿಥಿಗಳನ್ನೇ ಕರೆಸಿದ್ದರು. ಹಾಗಾಗಿ, ಅಂದು
ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಭಾರತಿ ಆಡಿಟೋರಿಯಂನಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದವರು ಹಲವು. ಕನ್ನಡ ಚಿತ್ರರಂಗದ ರೆಬೆಲ್‌ಸ್ಟಾರ್ ಅಂಬರೀಶ್ ಅವರ ಜೊತೆಗೆ ತೆಲುಗು ಚಿತ್ರರಂಗದ ಸುಮನ್ ಕೂಡ ಪ್ರಿಯಾ ಅವರಿಗೆ ಸಾಥ್ ನೀಡಿದರು. ಅವರೊಂದಿಗೆ ನಮ್ಮ ಕನ್ನಡದ ಅಭಿನಯ ಶಾರದೆ ಜಯಂತಿ, ನಿರ್ದೇಶಕ ಸಾಯಿಪ್ರಕಾಶ್ ಮುಂತಾದವರ ಸಂಗಮ ಸ್ಮಗ್ಲರ್ ಸಮಾರಂಭಕ್ಕೆ ಕಳೆ ತಂದಿತ್ತು. ಉಳಿದಂತೆ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎಚ್.ಡಿ ಗಂಗರಾಜು, ಕರವೇ ನಾರಾಯಣ ಗೌಡ, ನಾಗಣ್ಣ, ಧರ್ಮ ಕೀರ್ತಿರಾಜ್, ಸರಿಗಮ ವಿಜಿ ಅವರ ಉಪಸ್ಥಿತಿಯಲ್ಲಿ ಝೇಂಕಾರ್ ಆಡಿಯೋ ಸಂಸ್ಥೆಯ ಭರತ್ ಜೈನ್ ಸ್ಮಗ್ಲರ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.
ನಮ್ಮ ಮಾಜಿ ಪ್ರಧಾನಿ ಮಂತ್ರಿಗಳ ಊರು ಹಾಸನ. ಅಲ್ಲಿಂದಲೇ ಬಂದ ರೈತನ ಮಗಳಾದ ನಮ್ಮ ಕನ್ನಡದ ಹುಡುಗಿ ಪ್ರಿಯಾ ಹಾಸನ್ ಚಿತ್ರರಂಗದಲ್ಲಿ ಸಿನಿಮಾ ಸೇವೆ ಮತ್ತು ನಾರಾಯಣ ಗೌಡ ಅವರೊಂದಿಗೆ ಸಮಾಜ ಸೇವೆ ಮಾಡುತ್ತಿದ್ದಾರೆ. ಇದು ನಾವೆಲ್ಲ ಹೆಮ್ಮೆ ಪಡುವ ವಿಚಾರ ಎಂದಿದ್ದು ಮಂಡ್ಯದ ಗಂಡು ಅಂಬರೀಷ್.
  ಜೈ ಕರ್ನಾಟಕ ಎನ್ನುತ್ತಾ ಮಾತನಾಡಿದ ನಟ ಸುಮನ್, ಪ್ರಿಯಾ ಹಾಸನ್‌ರಂಥ ಡೇರಿಂಗ್ ಮತ್ತು ಡ್ಯಾಷಿಂಗ್ ನಾಯಕಿ, ನಿರ್ದೇಶಕಿಯ ಜೊತೆ ಇದು ನನಗೆ ಮೊದಲ ಚಿತ್ರ ಎಂದರು. ಈ ಎಲ್ಲ ಅಬ್ಬರ, ಸಂಭ್ರಮದ ಮೂಲಕ ಚಕ್ರಿ ಸಂಗೀತ ನಿರ್ದೇಶನದ ಸ್ಮಗ್ಲರ್ ಚಿತ್ರದ ಆರು ಹಾಡುಗಳು ಅಂದು ಬಿಡುಗಡೆಯಾದವು.

- ಹ್ಯಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.