ಧನುರ್ ಮಾಸ ಮುಂದಿದೆ

ಗೊತ್ತು ಗುರಿ ಇಲ್ಲದ ರೌಡಿಸಂಗೆ ಅಂತ್ಯ ಯಾರಿಂದ? ಪೊಲೀಸರಿಂದಲೋ ರೌಡಿಗಳಿಂದಲೋ... ಇಂಥದ್ದೊಂದು ಟ್ಯಾಂಗ್ಲೈನಿಂದ ಬಂದಿರುವ ಚಿತ್ರ 'ಧನು'. ಚಿತ್ರದ ನಿರ್ದೇಶಕ ಕೆ. ದೇವು. ಇದು ರೌಡಿಯಿಸಂ ಚಿತ್ರವಾದರೂ ಹದೆಗೆಟ್ಟ ರಾಜಕೀಯ ವ್ಯವಸ್ಥೆಯನ್ನು ಕೂಡ ತೆರೆ ಮೇಲೆ ತಂದಿದ್ದಾರಂತೆ ನಿರ್ದೇಶಕರು. ರಾಜಕೀಯ ವ್ಯವಸ್ಥೆಯನ್ನು ಬಿಂಬಿಸುವ ಹಾಡೊಂದನ್ನು ಕೂಡ ರಚನೆ ಮಾಡಿರುವ ನಿರ್ದೇಶಕರು ಹಾಡಿನಲ್ಲೂ ತಮ್ಮ ಪ್ರತಿಭೆ ಮೆರೆಯಲು ಹೊರಟಿದ್ದಾರೆ.
ಇನ್ನು ಸಂತೋಷ್ ಚಿತ್ರದ ನಾಯಕ. ಇವರು ಈ ಹಿಂದೆ 'ಇಷ್ಟ', 'ಅಭಿರಾಮ್' ಹಾಗೂ 'ಬೆಂಗಳೂರು ಮೆಟ್ರೊ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಖುಷಿ ಚಿತ್ರದ ನಾಯಕಿ. ಈಕೆಗೆ ಇದೇ ಮೊದಲ ಚಿತ್ರ. ಮುನಿ, ಪೆಟ್ರೋಲ್ ಪ್ರಸನ್ನ, ಕಿಲ್ಲರ್ ವೆಂಕಟೇಶ್, ಬುಲೆಟ್ ಪ್ರಕಾಶ್ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಕರಿಗೆ ಇದು ಮೊದಲ ಚಿತ್ರವಾದರೂ ಈ ಹಿಂದೆ ಡಾನ್, ಪಟ, ಅಂಕ, ಬಾಡಿಗಾರ್ಡ್, ಮ್ಯಾಡ್ ಲವ್ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಇನ್ನು ದೂರದರ್ಶನದಲ್ಲಿ ಪ್ರಸಾರವಾದ ಒಂಟಿಮನೆ, ಋಣಮುಕ್ತ, ಇಂದಿರಾ ಮತ್ತಿತರ ಧಾರಾವಾಹಿಗಳಿಗೂ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ.
ಬಹುತೇಕ ಹೊಸಬರೇ ಚಿತ್ರವನ್ನು ಮಾಡಿದ್ದರೂ ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರೀಕರಣ ಮಾಡಿರುವುದಾಗಿ ನಿರ್ದೇಶಕರು ಹೇಳಿಕೊಂಡರು. ಚಿತ್ರದ ಹಾಡುಗಳನ್ನು ಭದ್ರಾವತಿ, ಶಿವಮೊಗ್ಗ, ಚಿಕ್ಕಮಗಳೂರು, ಮುಳ್ಳಯ್ಯನಗಿರಿಯಲ್ಲಿ ಚಿತ್ರೀಕರಿಸಲಾಗಿದೆ. ಕೌರವ ವೆಂಕಟೇಶ್, ಸುಪ್ರೀಂ ಸುಬ್ಬು ಸಾಹಸ ನಿರ್ದೇನದಲ್ಲಿ ಮೂರು ಫೈಟ್ಗಳಿವೆ. ರಾಜೇಶ್ ಕೃಷ್ಣನ್, ಸಂತೋಷ್, ಸಚಿನ್, ಅನುರಾಧಾ ಭಟ್, ಲಕ್ಷೀ, ಶ್ರೀದೇವಿ ಮುಂತಾದವರು ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಮಮತಾ ರಾಹುತ್ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿರ್ಮಾಪಕ ಮುನಿರಾಜು ಚೌಕಾಶಿ ಮಾಡದೆ ಚಿತ್ರಕ್ಕೆ ಕೇಳಿದ್ದೆಲ್ಲವನ್ನೂ ನೀಡಿದ್ದಾರೆ ಎಂದು ನಿರ್ದೇಶಕರು ಮೆಚ್ಚುಗೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


