ಸಿನಿಮಾ ಲೇಖನ

ಮೆಂಟಲ್‌ಗಿರಿ

Published On :

ತಲೆ ಕೆಡ್ತಿದೆಯಾ? 'ಹಾಫ್ ಮೆಂಟ್ಲು' ಅನ್ನೋ ಸಿನಿಮಾ ಬರ್ತಿದೆ. 'ಭಾವನೆಗಳ ಹಿಂದಿನ ಮನುಷ್ಯ' ಎನ್ನುವುದು ಚಿತ್ರದ ಅಡಿಶೀರ್ಷಿಕೆ. ಮೆಂಟಲ್ ಎಂಬೋ ಪದ ಟೈಟಲ್‌ನಲ್ಲಿ ಇದ್ರೆ ಕ್ಯಾಚಿಯಾಗಿರುತ್ತೆ ಅನ್ನುವ ಸೆಂಟಿಮೆಂಟ್ ಇಲ್ಲಿ ಕೆಲಸ ಮಾಡಿರಲೂಬಹುದು ಬಿಡಿ.
ಇಷ್ಟು ಹೇಳಿದರೆ 'ಇದು ಲವ್ವುಗಿವ್ವು ಅಂತ ಒದ್ದಾಡೋ ಹುಡುಗನ ಭಾವನೆಗಳ ಸ್ಟೋರಿ' ಎನ್ನುವುದು ನಿಮಗೆ ಅರ್ಥವಾಗೇ ಇರುತ್ತೆ. ಟ್ವಿಸ್ಟ್ ಏನೆಂದರೆ ಹೀರೋ ಪ್ರೀತಿಗಾಗಿ ಸಾಯಲ್ಲ! ಅಷ್ಟಲ್ಲದೆ ತಾನು ಪ್ರೀತಿಸೋ ಹುಡುಗೀಗೆ ಅಂದರೆ ಹೀರೋಯಿನ್‌ಗೆ ಪತ್ರ ಬೇರೆ ಬರೆದು, 'ಲೈಲಾ ಮಜ್ನೂ ಆಣೆಗೂ ನಾನು, ನೀವ್ ಸಿಗಲ್ಲ ಅಂತ ಸಾಯೋದಿಲ್ಲ. ಮೆಂಟ್ಲು ಆಗಲ್ಲ. ಆದ್ರೆ ಜನ ಹಾಫ್‌ಮೆಂಟ್ಲು ಅಂತ ಅಂದ್ಕೊಂಡ್ರೆ ನಾನೇನ್ಮಾಡ್ಲಿ? ತಪ್ಪಾಗಿ ತಿಳ್ಕೋಬೇಡಿ. ನನ್ನ ಫೀಲಿಂಗ್ಸ್‌ಗೆ ನೀವು ಜವಾಬ್ದಾರರಲ್ಲ ಬಿಡಿ' ಅಂತ ಹೇಳ್ತಾನೆ.
'ಕಾಲೇಜ್ ಟೈಮ್‌ನಲ್ಲಿ ನಾನು ನೋಡಿದ್ದ ಎರಡು ಕ್ಯಾರೆಕ್ಟರ್‌ಗಳನ್ನೇ ಕಥೆಯಾಗಿಸಿದ್ದೇನೆ' ಅಂತಾರೆ ನಿರ್ದೇಶಕ ಲಕ್ಷ್ಮೀ ದಿನೇಶ್. ಇದು ಮಧ್ಯಮ ವರ್ಗದ ಹುಡುಗ, ಹುಡುಗಿಯ ಕತೆ ಎಂಬ ಟಿಪ್ಪಣಿ ಅವರದ್ದು.
ಇನ್ನು ನಿರ್ಮಾಪಕ ಶಶಿಕುಮಾರ್ ವೃತ್ತಿಯಿಂದ ಗುತ್ತಿಗೆದಾರ. ಈ ಚಿತ್ರಕ್ಕಾಗಿ ಬರೆದ ಹಾಡುಗಳನ್ನು ಕೇಳಿಯೇ ಪ್ರೇರಿತರಾಗಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. 'ಪ್ರೇಕ್ಷಕರನ್ನು ಕನ್‌ಫ್ಯೂಸ್ ಮಾಡ್ತಾ ಮಾಡ್ತಾ ಒಳ್ಳೆಯ ಸಂದೇಶ ನೀಡುವ ಪ್ರಯತ್ನವಿದು' ಅಂತಾರೆ ಅವರು.
ನಾಯಕ ಸಂದೀಪ್ ಕೆಲವು ಸಿನಿಮಾಗಳ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಹಾಫ್ ಮೆಂಟ್ಲ್‌' ಆಗಿ ಮೊದಲ ಬಾರಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋನು ನಾಯಕಿ. ಭರತ್ ಸಂಗೀತ ನೀಡಲಿದ್ದಾರೆ. ರವಿ ಕ್ಯಾಮರಾಮನ್. ತಬಲಾ ನಾಣಿ, ಮೈಕೋ ನಾಗರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.