ಸಿನಿಮಾ ಲೇಖನ

ಶುಭಾಪೂಂಜಾಳ ಮದುವೆಯಲ್ಲ!

ಶುಭಾಪೂಂಜಾಳ ಮದುವೆಯಲ್ಲ!
Published On :

ಚಿತ್ರದ ಹೆಸರು 'ಶುಭವಿವಾಹ'. ಶೀರ್ಷಿಕೆಯಲ್ಲಿ 'ಶುಭ' ಇರುವುದರಿಂದ ನಟಿ ಶುಭಾಪೂಂಜಾಳ ಬದುಕಿಗೂ ಈ ಚಿತ್ರದ ಕಥೆಗೂ ಏನಾದರೂ ಲಿಂಕ್ ಇದೆಯಾ? ಅಂಥ ಲಿಟಿಗೇಷನ್ ಹುಡುಕಬೇಡಿ. ಇದು ಹೊಸಬರ ಚಿತ್ರ ಅಲ್ಲದಿದ್ದರೂ, ತುಂಬಾ ಹಳಬರಂತೂ ಅಲ್ಲ. ನೃತ್ಯ ನಿರ್ದೇಶಕರಾಗಿ 85ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ  ಮಾಡಿರುವ ಸೂರಿ ಅವರ ಮೊದಲ ನಿರ್ದೇಶನ, ನಿರ್ಮಾಣದ ಸಿನಿಮಾ. ಅಕುಲ್ ಬಾಲಾಜಿ, ನಕ್ಷಾ ಶೆಟ್ಟಿ, ರವಿತೇಜ ಚಿತ್ರದ ಜೋಡಿ. ಅಪ್ಪ ಮತ್ತು ಮಗನ ನಡುವಿನ ಸಂಬಂಧದ ಕಥೆ ಹೊಂದಿರುವ ಈ ಚಿತ್ರಕ್ಕೆ ಮೊನ್ನೆ ಮುಹೂರ್ತ ಕಂ ಚಿತ್ರೀಕರಣ ನಡೆಯಿತು. ಬಿಡದಿಯಲ್ಲಿ ಬೀಡು ಬಿಟ್ಟಿದ್ದ ಚಿತ್ರತಂಡ ಅಲ್ಲಿನ ಮದುವೆ ಸಂಭ್ರಮದ ದೃಶ್ಯಗಳನ್ನು ಚಿತ್ರೀಕರಣದಲ್ಲಿ ಬ್ಯುಸಿಯಾಗಿತ್ತು. ಚಿತ್ರಕ್ಕೆ ಎ.ಸಿ. ಮಹೇಂದ್ರ ಅವರ ಛಾಯಾಗ್ರಹಣ, ಶ್ರೀವಸ್ತ ಸಂಗೀತ ಚಿತ್ರಕ್ಕಿದೆ.
 ಚಿತ್ರದ ಶೀರ್ಷಿಕೆ ನೋಡಿದರೆ ಇದೊಂದು ಕೌಟುಂಬಿಕ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಮದುವೆ ಸಂಭ್ರಮದ ರಂಗು ರಂಗಿನ ದೃಶ್ಯಗಳ ಚಿತ್ರೀಕರಣದ ನಡುವೆ ಸೂರಿ ತಂಡ ಮಾತಿಗಿಳಿಯಿತು. 'ಒಂದು ಫ್ಯಾಮಿಲಿ ಕಥೆಯನ್ನು ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇನೆ. ಮಚ್ಚುಗಳ ಅಬ್ಬರವಿಲ್ಲ. ಅಲ್ಲದೆ ನಿರ್ಮಾಣ ವಿಭಾಗದಲ್ಲಿ ತಾಂತ್ರಿಕ ವಿಭಾಗದವರೂ ಕೈ ಜೋಡಿಸಿದ್ದಾರೆ. ಎಲ್ಲ ಸೇರಿ ಒಂದು ಅತ್ಯುತ್ತಮ ಸಿನಿಮಾ ಮಾಡುವ ಕನಸಿನೊಂದಿಗೆ 'ಶುಭವಿವಾಹ'ವನ್ನು ಆರಂಭಿಸಿದ್ದೇವೆ' ಎನ್ನುತ್ತಾರೆ ಸೂರಿ. ಅಕುಲ್ ಬಾಲಾಜಿ ಸಣ್ಣ ಪುಟ್ಟ ಪಾತ್ರಗಳ ಮೂಲಕ ಗಮನ ಸೆಳೆದರೂ ನಿರೂಪಕರಾಗಿ ಕಿರುತೆರೆಯಲ್ಲಿ ಹೆಸರು ಮಾಡಿದವರು. ಗೆಸ್ಟ್ ರೋಲ್‌ಗಳಲ್ಲೇ ಕಾಲ ಕಳೆದ ಬಾಲಾಜಿ ಮತ್ತೊಮ್ಮೆ ಇಲ್ಲಿ ನಾಯಕರಾಗುತ್ತಿದ್ದಾರೆ. ಇನ್ನು ನಕ್ಷಾ ಶೆಟ್ಟಿ ಈ ಹಿಂದೆ 'ಮದರಂಗಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರ 'ಶುಭವಿವಾಹ'ಕ್ಕೆ ಬಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.