ಸಿನಿಮಾ ಲೇಖನ

ಅರ್ಧ ಸತ್ಯಕ್ಕೆ ಯುಎ ಸರ್ಟಿಫಿಕೆಟ್

Published On :

ಶ್ರೀ ವೈಭವ ಲಕ್ಷ್ಮಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಶಶಿವರ್ಮಾ ನಿರ್ದೇಶನದ ಅರ್ಧ  ಸತ್ಯಚಿತ್ರಕ್ಕೆ ಸೆನ್ಸಾರ್ ಮಂಡಳಿ ಯುಎ ಸರ್ಟಿಫಿಕೆಟ್ ನೀಡಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ  ಚಿತ್ರಕ್ಕೆ ಜಗದೀಶ್ ಛಾಯಾಗ್ರಹಣ, ಬೋಲೆ ಸಂಗೀತೆ, ವಿದೆ. ತಾರಾಗಣದಲ್ಲಿ ಅಕ್ಷಯ್, ಪಾವನಿ, ಪ್ರಿಯಾಂಕ, ವಿಜಯ್ ಜೆಟ್ಟಿ, ಟಾರ್ಜನ್, ಬ್ಯಾಂಕ್ ಜನಾರ್ಧನ್, ಪ್ರೇಮಲತಾ, ನವನೀತಾ, ಸುರೇಶ್ ಮಂಗಳೂರು, ಸುಧೀರ್, ಶಿಂಬು ಮುಂತಾದವರು ಅಭಿನಯಿಸಿದ್ದಾರೆ.

ಕುಮಾರಸ್ವಾಮಿ ಸನ್ನಿಧಿಯಲ್ಲಿ  ರೋಸ್

ಶ್ರೀ ಭೈರವೇಶ್ವರ ಫಿಲಂ ಪ್ಲಾನೆಟ್ ಅರ್ಪಿಸುವ   ರೋಸ್ ಚಿತ್ರಕ್ಕೆ ಹನುಮಂತನಗರದ, ಕುಮಾರಸ್ವಾಮಿ ಸನ್ನಿಧಿಯಲ್ಲಿ ನಾಯಕ ನಾಯಕಿಯೊಂದಿಗೆ ಬುಲೆಟ್, ನಿರ್ದೇಶಕ ವಿಕ್ಟರಿ ವಾಸು ಮುಂತಾದವರು ಪಾಲ್ಗೊಂಡಿದ್ದ ದೃಶ್ಯ ಚಿತ್ರೀಕರಣವಾಯಿತು. ಈ ಚಿತ್ರದ ರಚನೆ -ನಿರ್ದೇಶನ  ಸಹನ ಹೆಚ್.ಎಸ್. ಅವರದ್ದು. ಗುರುಪ್ರಶಾಂತ್ ರೈ ಛಾಯಾಗ್ರಹಣ, ಸಂಗೀತ-ಅನೂಪ್ ಸೀಳಿನ್ ಸಂಗೀತ, ಚಿತ್ರಕ್ಕಿದೆ. ತಾರಾಗಣದಲ್ಲಿ ಅಜಯ್‌ರಾವ್, ಶ್ರಾವ್ಯ, ಚಿ, ಗುರುದತ್, ಬುಲೆಟ್‌ಪ್ರಕಾಶ್, ಸಾಧುಕೋಕಿಲಾ ಮುಂತಾದವರಿದ್ದಾರೆ.

ಟಿಪಿಕಲ್ ಕೈಲಾಸಂ
ಎನ್.ದೇವರಾಜ್ ಅರಸ್ ಹಾಗೂ ಎಸ್.ಟಿ.ಶಿವಕುಮಾರ್ ನಿರ್ಮಾಣದ 'ಟಿಪಿಕಲ್ ಕೈಲಾಸಂ' ಚಿತ್ರ ಕಳೆದ ವಾರ ಕಂಠೀರವ ಸ್ಟುಡಿಯೊದಲ್ಲಿ ಆರಂಭವಾಯಿತು. ಚಿತ್ರಕ್ಕೆ ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದ ಪ್ರಥಮ ಸನ್ನಿವೇಶಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ ಮಾಡಿದರು. ಗಿರಿಜಾಲೋಕೇಶ್ ಕ್ಯಾಮೆರಾ ಚಾಲನೆ ಮಾಡಿದರು. ಪ್ರಥಮ ಸನ್ನಿವೇಶಕ್ಕೆ ಓಂಪ್ರಕಾಶ್ ರಾವ್ ನಿರ್ದೇಶನ ಮಾಡಿದರು. ಸೃಜನ್ ಲೋಕೇಶ್ ನಾಯಕ.
ಮಲ್ಲಿಕಾರ್ಜುನ್.ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡುತ್ತಿದ್ದಾರೆ. ಬಸವರಾಜ್ ಅರಸ್ ಸಂಕಲನ, ಎನ್.ಕುಮಾರ್ ಕಲಾನಿರ್ದೇಶನ, ಮುರಳಿ, ಮದನ್ ಹರಿಣಿ ನೃತ್ಯ ನಿರ್ದೇಶನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.