ಸಿನಿಮಾ ಲೇಖನ

ಮಯ್ಯಾಸ್ ಮನರಂಜನೆ

Published On :

ಡಾ.ಪಿ. ಸದಾನಂದ ಮಯ್ಯಾ ಅವರ 'ಮಯ್ಯಾಸ್‌' ಸಂಸ್ಥೆ ಯಾರಿಗೆ ಗೊತ್ತಿಲ್ಲ. ರಸವತ್ತಾದ ರುಚಿಯ ಪದಾರ್ಥಗಳಿಗೇ ಫೇಮಸ್ಸಾಗಿರುವ 'ಮಯ್ಯಾಸ್‌' ಈಗ ಮನರಂಜನೆಯನ್ನು ಉಣಬಡಿಸಲು ಹೊರಟಿದೆ. ಖ್ಯಾತ ಕಲಾವಿದರನ್ನೊಳಗೊಂಡ ತಂಡದಿಂದ ಇನ್ನು ಪ್ರತಿ ವಾರ ನಾಡಿನೆಲ್ಲೆಡೆ ಹಲವು ಕಾರ್ಯಕ್ರಮಗಳನ್ನು ಸಾದರಪಡಿಸುತ್ತಿದೆ.
ಮಯ್ಯಾಸ್ ಮನರಂಜನೆಯ ಸುಗ್ಗಿ ಇದೇ ವಾರದಿಂದ ಶುರು. ಗಿರಿನಗರದ ಆವಲಹಳ್ಳಿ ಪಾರ್ಕಿನ ಎದುರಿರುವ ಕುವೆಂಪು ಬಯಲು ರಂಗಮಂದಿರದಲ್ಲಿ ಜೂ.7ರ ಶುಕ್ರವಾರ ಸಂಜೆ 6.30ಕ್ಕೆ 'ಮಯ್ಯಾಸ್ ಮನೋರಂಜನ್‌' ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದರಾದ ಅಜಯ್ ವಾರಿಯರ್, ದಿವ್ಯಾ ರಾಘವನ್ ಅವರಿಂದ ಮೊದಲು ಸುಮಧುರ ಗಾಯನ ಜರುಗಲಿದೆ. ನಂತರ ಡಾ. ಬಸವರಾಜ್ ಬೆಣ್ಣೆ ಅವರಿಂದ ಹಾಸ್ಯ ಭಾಷಣ, ಪೂರ್ಣಿಮಾ ಪ್ರಹ್ಲಾದ್ ಆಚಾರ್ಯರಿಂದ ಜಾದೂ ಪ್ರದರ್ಶನ ಏರ್ಪಡಿಸಲಾಗಿದೆ.
ಜೂ.8ರ ಶನಿವಾರ ಸಂಜೆ 6.30ಕ್ಕೆ ಅದೇ ಸ್ಥಳದಲ್ಲಿ ಏಕವ್ಯಕ್ತಿ ಹಾಸ್ಯರಂಗ ಪ್ರಯೋಗ 'ರಾಶಿಚಕ್ರ' ಇರುತ್ತದೆ. ಈಗಾಗಲೇ 'ರಾಶಿಚಕ್ರ' ದೇಶವಿದೇಶಗಳಲ್ಲಿ ಪ್ರದರ್ಶನ ಕಂಡಿದೆ.
ಜೂ.10ರ ಸೋಮವಾರ ಸುಂದರ ಕನ್ನಡ ನಗೆನಾಟಕ 'ಆಲ್ ದಿ ಬೆಸ್ಟ್‌' ಕೂಡ ಕುವೆಂಪು ಬಯಲು ರಂಗಮಂದಿರದಲ್ಲೇ ನಡೆಯಲಿದೆ. ಈ ನಾಟಕ ಕೂಡ ನೂರಾರು ಪ್ರದರ್ಶನಗಳನ್ನು ಕಂಡಿದೆ.
ಮಯ್ಯಾಸ್‌ನ ಈ ಮನರಂಜನಾ ಜಾತ್ರೆಯನ್ನು ನಿಮ್ಮ ಬಡಾವಣೆಗಳಲ್ಲೂ ಆಯೋಜಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮಹೇಶ್ (ಮೊ. 99028 92880) ಅವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.