ಸಿನಿಮಾ ಲೇಖನ

ಲಂಡನ್ ಲೂಸಿಯಾ

ಲಂಡನ್ ಲೂಸಿಯಾ
Published On :

ಸತೀಶ್ ನೀನಾಸಂ, ಶೃತಿ ತಾರಾಗಣದಲ್ಲಿ ಪೂರ್ಣ ಚಂದ್ರತೇಜಸ್ವಿ ಸಂಗೀತದಲ್ಲಿ ಹಲವು ಹೊಸ ಪ್ರತಿಭೆಗಳಿಗೆ ಆಗರವಾಗಿರುವ  'ಲೂಸಿಯಾ' ಚಿತ್ರ ಕನ್ನಡ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿರುವುದು ಹಳೆಯ ವಿಷಯ. ಆದರೆ, ಈಗ ಲೂಸಿಯಾ ಚಿತ್ರದ  'ತಿನ್‌ಬೇಡ ಕಮ್ಮಿ' ಜಾಸ್ತಿ ಸೌಂಡು ಮಾಡುತ್ತಿದ್ದಂತೆ ಚಿತ್ರದ ಸೌಂಡ್ ಕೂಡ ಇನ್ನಷ್ಟು ಹೆಚ್ಚಾಗಿದೆ. 'ತಿನ್‌ಬೇಡ ಕಮ್ಮಿ ನೀ ನೆಲ್ಲಗಳ್ಳೆಯಾ' ಎನ್ನುವ ಸಾಹಿತ್ಯದಲ್ಲಿ ನಮ್ಮ ನೆಲದ ವಾಸನೆ ಇದೆ ಎಂದು ಖುಷಿಪಡುತ್ತಿದ್ದವರಿಗೆ ಈಗ ಲೂಸಿಯಾ ಚಿತ್ರ ನಮ್ಮ ನೆಲ ಬಿಟ್ಟು  ವಿದೇಶೀ ನೆಲದಲ್ಲೂ ಸುದ್ದಿ ಮಾಡುತ್ತಿದೆ ಎಂಬ ಇನ್ನೊಂದು ಖುಷಿ. ಲಂಡನ್ ಇಂಡಿಯನ್ ಇಂಟರ್‌ನ್ಯಾಷನಲ್ ಫಿಲ್ಮ್ ಫ ೆಸ್ಟಿವಲ್‌ಗೆ 'ಲೂಸಿಯಾ' ಚಿತ್ರ ಆಯ್ಕೆಯಾಗಿರುವುದು ಈ ವಿಶೇಷ ಖುಷಿ.
ನಮ್ಮ ಕಲಾತ್ಮಕ ಚಿತ್ರಗಳು ಜಗತ್ತಿನ ಎಲ್ಲ ಚಿತ್ರೋತ್ಸವಗಳಿಗೂ ಆಯ್ಕೆಯಾಗುವುದು ಯಾರಿಗೂ ಗೊತ್ತಿರದ ವಿಷಯವೇನಲ್ಲ, ಆದರೆ  ಕೇವಲ ಅಂಥ ಚಿತ್ರಗಳಿಗೆ ಮಾತ್ರ ಮೀಸಲಾಗಿದ್ದ ಈ ಫಿಲ್ಮ್ ಫೆಸ್ಟಿವಲ್‌ಗಳ ಮೆರವಣಿಗೆ ಈಗ ಮೊದಲಬಾರಿಗೆ ಕಮರ್ಷಿಯಲ್  ಚಿತ್ರವೊಂದಕ್ಕೂ ವಿಸ್ತರಣೆಯಾಗಿರುವುದು ಈ ಸುದ್ದಿಯ ವಿಶೇಷ.
ಅಂತರರಾಷ್ಟ್ರೀಯ ಚಿತ್ರೋತ್ಸವವೊಂದಕ್ಕೆ ಆಯ್ಕೆಯಾಗಿರುವ ಕನ್ನಡದ ಮೊಟ್ಟ ಮೊದಲ ಮುಖ್ಯವಾಹಿನಿಯ ಚಿತ್ರ ನಮ್ಮದು  ಎನ್ನುವ 'ಲೂಸಿಯಾ' ನಿರ್ದೇಶಕ ಸದ್ಯದಲ್ಲೇ ಪ್ರಪಂಚದಾದ್ಯಂತ ತಮ್ಮ ಚಿತ್ರವನ್ನು ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.