ಸಿನಿಮಾ ಲೇಖನ

ಇವಳೇ...ಇವಳೇ... ಚಂದನವನದ ಗೊಂಬೆ

'ರಿಂಗ್‌ರೋಡ್‌' ಶುಭ ಪ್ರಯಾಣದಲ್ಲಿ ಮೊದಲ ಸ್ಟಾಪ್ ಬಂದಿದೆ. ಚಿತ್ರದ ನಾಯಕಿಯ ಹುಡುಕಾಟಕ್ಕೆ ಈಗ 'ಶುಭಂ'. ಚಿತ್ರದ ನಾಯಕಿಯ ಆಯ್ಕೆಗಾಗಿ ಸುವರ್ಣ ನ್ಯೂಸ್ ವಾಹಿನಿಯ ಮೂಲಕ ನಡೆಸಲಾದ...

ಇವಳೇ...ಇವಳೇ... ಚಂದನವನದ ಗೊಂಬೆ
Published On :

'ರಿಂಗ್‌ರೋಡ್‌' ಶುಭ ಪ್ರಯಾಣದಲ್ಲಿ ಮೊದಲ ಸ್ಟಾಪ್ ಬಂದಿದೆ. ಚಿತ್ರದ ನಾಯಕಿಯ ಹುಡುಕಾಟಕ್ಕೆ ಈಗ 'ಶುಭಂ'. ಚಿತ್ರದ ನಾಯಕಿಯ ಆಯ್ಕೆಗಾಗಿ ಸುವರ್ಣ ನ್ಯೂಸ್ ವಾಹಿನಿಯ ಮೂಲಕ ನಡೆಸಲಾದ 'ಸುವರ್ಣ ಸುಂದರಿ' ಕಾರ್ಯಕ್ರಮದ ಫಲಿತಾಂಶ ಬಂದಿದ್ದು, ಮೊನ್ನೆ ವಾಹಿನಿಯ ಮುಖ್ಯಸ್ಥರಾದ ವಿಶ್ವೇಶ್ವರಭಟ್ 'ರಿಂಗ್‌ರೋಡ್ ಶುಭ' ಆಗಿ ಆಯ್ಕೆಯಾಗಿರುವ ದೆಹಲಿಯ ಸುಂದರಿ ಅಲ್ತಮಶ್‌ಗೆ 'ಸುವರ್ಣ ಸುಂದರಿ' ಕಿರೀಟ ತೊಡಿಸಿ ನಾಯಕಿಯ ಆಯ್ಕೆಯ ಘೋಷಣೆ ಮಾಡಿದರು.
 ಈ ಚಿತ್ರಕ್ಕಾಗಿ ಒಟ್ಟು ಮೂವರು ಹುಡುಗಿಯರನ್ನು ಆಯ್ಕೆ ಮಾಡಿದೆ ಚಿತ್ರತಂಡ. ಶುಭ ಪಾತ್ರವನ್ನು ಬಗಲಿಗೆ ಹಾಕಿಕೊಂಡಿರುವ ಅಲ್ತಮಶ್ ಅವರ ಜೊತೆ, ಚಿತ್ರದ ಉಳಿದ ಎರಡು ಪಾತ್ರಗಳಲ್ಲಿ ಅನುಶ್ಕಾ ಮತ್ತು ಸಂಜನಾ ಪ್ರಕಾಶ್ ಎಂಬ ಇಬ್ಬರು ಕನ್ನಡದ ಹುಡುಗಿಯರು ಹೆಗಲು ಕೊಟ್ಟು ನಿಲ್ಲಲಿದ್ದಾರೆ.
 ಶುಭಾ ಪಾತ್ರಕ್ಕೆ ಆಯ್ಕೆಯಾಗಿರುವ ಅಲ್ತಮಶ್ ಈಗ 'ಖುಷಿ'ಯಾಗಿದ್ದಾರೆ ಎಂದರೆ ಆಗಲೇಬೇಕು ಬಿಡಿ ಎಂದುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ 'ಖುಷಿ' ಎಂಬುದು 'ರಿಂಗ್‌ರೋಡ್ ಶುಭ' ಚಿತ್ರದ ನಿರ್ಮಾಪಕಿ ರಂಜಿನಿ ರವೀಂದ್ರ ಅಲ್ತಮಶ್‌ಗೆ ಇಟ್ಟಿರುವ ಹೊಸ ಹೆಸರು. ಹಾಗಾಗಿ, 'ದೆಹಲಿಯ' ಅಲ್ತಮಶ್ ಎಂಬ ಬಿಜ್‌ಲೀ 'ಇದೀಗ ಬೆಂಗಳೂರಿಗೆ' ಬಂದು 'ಖುಷಿ' ಆಗಿದ್ದಾರೆ ಎಂಬುದು ರಾಜಧಾನಿಯಿಂದ ರಾಜಧಾನಿಗೆ ಬಂದಿರುವ ಈ ಹುಡುಗಿ ಸೃಷ್ಟಿಸಿರುವ 'ನ್ಯಾಷನಲ್ ನ್ಯೂಸ್‌'.
  ನನ್ನನ್ನು ಆಯ್ಕೆ ಮಾಡಿದ ಎಲ್ಲ ಕರ್ನಾಟಕದ ಜನತೆಗೂ ನನ್ನ ಧನ್ಯವಾದಗಳು. ನನ್ನ ಪಾತ್ರದ ಮೂಲಕ ನಾನು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂಬ ಭರವಸೆ ನೀಡುತ್ತಾರೆ ಅಲ್ತಮಶ್ ಆಲಿಯಾಸ್ ಖುಷಿ.

ಅಲ್ಲದೆ ಸುವರ್ಣ ಸುಂದರಿ ಕಾರ್ಯಕ್ರಮದ ಮೂಲಕ ಚಂದನವನಕ್ಕೆ ತನ್ನನ್ನು ಪರಿಚಯ ಮಾಡಿಸಿರುವ ಸುವರ್ಣ ನ್ಯೂಸ್ ವಾಹಿನಿ ಮತ್ತು ಕನ್ನಡಪ್ರಭ ಪತ್ರಿಕೆ ಈ ಬಗ್ಗೆ ಹೆಮ್ಮೆ ಪಡುವಂಥ ಕೆಲಸ ಮಾಡುತ್ತೇನೆ ಎಂಬುದು ಖುಷಿ ಉವಾಚ.
 ಇನ್ನು 'ಖುಷಿ'ಯ ವಿಷಯ ಏನೆಂದರೆ ಈಕೆಯ ತಂದೆ ವಾರಣಾಸಿ ನಿವಾಸಿ. ತಾಯಿ ಸೌದಿ ಅರೇಬಿಯಾ ಮೂಲದವರು.  ಮೂಳೆಯೇ ಕಾಣಿಸದ 5 ಅಡಿ 5 ಇಂಚು ಎತ್ತರದ ಖುಷಿಯ ತಂದೆ ಮೂಳೆತಜ್ಞ ವೈದ್ಯರಂತೆ. ಮಾಸ್ ಕಮ್ಯೂನಿಕೇಶನ್ ಪದವಿ ಪಡೆದಿರುವ ಖುಷಿ ಸನ್‌ಸಿಲ್ಕ್, ಸೋನಿ, ಡೊಕೊಮೊ, ಮಹೀಂದ್ರಾ, ಆದಿತ್ಯಾ ಬಿರ್ಲಾ ಸೇರಿದಂತೆ ಪ್ರಖ್ಯಾತ ಬ್ರ್ಯಾಂಡ್‌ಗಳ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಮಾಡೆಲ್. 'ಸುವರ್ಣ ಸುಂದರಿ'ಗಾಗಿ ಅರ್ಜಿ ಆಹ್ವಾನಿಸಿದಾಗ ಆಸಕ್ತಿ ತೋರಿಸಿದ ಹುಡುಗಿಯರಲ್ಲಿ ಒಬ್ಬರಾದ ಖುಷಿ 'ಈಗ ನನಗೆ ಮಿಸ್ ವರ್ಲ್ಡ್ ಪ್ರಶಸ್ತಿ ಗೆದ್ದಷ್ಟೇ ಖುಷಿಯಾಗಿದೆ' ಎನ್ನುತ್ತಾರೆ. ಸದ್ಯಕ್ಕೆ ಇಲ್ಲಿಂದ, ಸ್ಯಾಂಡಲ್‌ವುಡ್‌ನಲ್ಲಿ ಈಕೆಯ ಗೆಲುವಿನ ಓಟ ಶುರು. <


= ಹ್ಯಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.