ಹೆಣ್‌ಮಕ್ಳೇ ಸ್ಟ್ರಾಂಗು ಗುರೂ

ಅದು 'ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರ ಬಿಡುಗಡೆಯಾಗಿದ್ದ ಸಮಯ. 'ಇನ್ಮೇಲೆ ನಾನು, ಗಾಂಧಿನಗರಕ್ಕೆ ಬೇಕಿರೋ ಸಿನಿಮಾಗಳನ್ನೇ ಮಾಡ್ತೀನಿ' ಎನ್ನುತ್ತಾ ತಮ್ಮ ಚಿತ್ರವನ್ನು ಚಿತ್ರಮಂದಿರಗಳಿಂದ ವಾಪಸ್ ತೆಗೆದುಕೊಳ್ಳುವಾಗ ಬೇಸರದಿಂದ ನುಡಿದಿದ್ದರು ಚಿತ್ರದ ನಿರ್ಮಾಪಕ, ನಿರ್ದೇಶಕ ರವೀಂದ್ರದಾಸ್. ಸಿನಿಮಾ ನೋಡಿದವರೆಲ್ಲರೂ 'ಒಳ್ಳೆಯ ಸಿನಿಮಾ' ಎಂಬ ಸರ್ಟಿಫಿಕೇಟ್ ಕೊಟ್ಟರೂ ಗಾಂಧಿನಗರದ ಪ್ರೇಕ್ಷಕ ಮಾತ್ರ 'ಐ ಆ್ಯಮ್ ಸಾರಿ' ಎಂದಿದ್ದ. ಆದರೂ, ಆ ಚಿತ್ರದಿಂದ ಅವರು ಕಳೆದುಕೊಂಡಿದ್ದು 'ಕೇವಲ ಹಣ ಮಾತ್ರ' ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಸದ್ಯದ ವಿಷಯ ಏನೆಂದರೆ ಈಗ ಅವರ ಶಕುನದ ಹಕ್ಕಿ 'ಶುಭ' ನುಡಿಯುತ್ತಿದೆ. ಆ್ಯಡ್ ಫಿಲ್ಮ್‌ಗಳಲ್ಲಿ ಏನೇ ಸಾಧನೆ ಮಾಡಿದ್ದರೂ, ಬಹುಷಃ ರವೀಂದ್ರ ಅವರನ್ನು ನಿಮ್ಮ ಸಿನಿಮಾರಂಗದ ಟರ್ನಿಂಗ್ ಪಾಯಿಂಟ್ ಯಾವುದು ಎಂದು ಕೇಳಿದರೆ ಅವರು 'ರಿಂಗ್‌ರೋಡ್ ಶುಭ' ಚಿತ್ರವನ್ನು ಹೆಸರಿಸುವ ಎಲ್ಲಾ ಸಾಧ್ಯತೆಗಳಿವೆ. 'ರಿಂಗ್‌ರೋಡ್ ಶುಭಾ' ಚಿತ್ರಕ್ಕೆ ರವೀಂದ್ರದಾಸ್ ಕೇವಲ ಉಸ್ತುವಾರಿ ಸಚಿವರಷ್ಟೇ. ಈ ಚಿತ್ರದ ನಿರ್ಮಾಪಕಿ ರಂಜಿನಿ, ರವೀಂದ್ರರ ಪತ್ನಿ. ಅಲ್ಲದೆ ಚಿತ್ರದ ಎಲ್ಲ ತಂತ್ರಜ್ಞರೂ ಹೆಣ್ಣುಮಕ್ಕಳೇ. ಆದರೆ, ತಂಡದ ಯಾವ ಹೆಣ್ಣಿನ ಕಾಲ್ಗುಣ ರವೀಂದ್ರ ಅವರಿಗೆ ಪ್ಲಸ್ ಪಾಯಿಂಟ್ ಆಗುತ್ತಿದೆಯೋ ಗೊತ್ತಿಲ್ಲ. ಚಿತ್ರದ ಚಿತ್ರೀಕರಣ ಶುರುವಾಗುವ ಮುನ್ನವೇ ಚಿತ್ರದ ಅರ್ಧದಷ್ಟು ಬಜೆಟ್ ಕೊಟ್ಟು ಚಿತ್ರದ ಟಿವಿ ಪ್ರಸಾರದ ಹಕ್ಕುಗಳನ್ನು ಕೊಂಡುಕೊಳ್ಳಲು ಟಿವಿ ವಾಹಿನಿಯೊಂದು ಆಫರ್ ಕೊಟ್ಟಿದೆ. ನನ್ನ ಮುಂದಿನ ಚಿತ್ರದಿಂದ ಒಂದು ಪೈಸಾ ಕೂಡಾ ಕಳೆದುಕೊಳ್ಳಬಾರದು ಎಂದುಕೊಂಡಿದ್ದ ರವೀಂದ್ರ ಅವರ ನಿರ್ಧಾರ ಮೊದಲ ಫಲಿಂತಾಶ ಕೊಟ್ಟಿದೆ. ಅವರ ಈ 'ಗಾಂಧಿಗಿರಿ'ಗೆ ಫಲ ಸಿಕ್ಕಿದೆ. ಸುವರ್ಣ ನ್ಯೂಸ್‌ನಂಥ ಚಾನೆಲ್ ವತಿಯಿಂದ ತಮ್ಮ ಚಿತ್ರದ ನಾಯಕಿ ಆಯ್ಕೆಯಾಗುವ ಸಂಭ್ರಮದಲ್ಲಿರುವ ರವೀಂದ್ರ ಅವರಿಗೆ ಈಗ ಇನ್ನೊಂದು ಚಾನೆಲ್‌ನ ವತಿಯಿಂದ ಈ ಆಫರ್ ಬಂದಿರುವುದು ರಿಂಗ್‌ರೋಡ್‌ನಲ್ಲಿ ಅವರಿಗೆ ಸಿಕ್ಕಿರುವ ಟರ್ನಿಂಗ್ ಪಾಯಿಂಟ್. ಆದರೆ ಸದ್ಯಕ್ಕೆ ಸಿನಿಮಾ ಮಾರುವ ಯಾವ ಆತುರವನ್ನೂ ತೋರದೆ If you come today, its too early ಎಂಬ ಮೂಡಿನಲ್ಲಿದ್ದರೂ, ಬಹುಷಃ ಇದು ನನ್ನ ಹೆಂಡತಿಯ ಕಾಲ್ಗುಣವೇ ಇರಬೇಕು ಎನ್ನುತ್ತಾ ಎಲ್ಲಾ ಕ್ರೆಡಿಟ್ ಅನ್ನು ಪತ್ನಿ ರಂಜಿನಿ ಅವರಿಗೇ ವರ್ಗಾಯಿಸುತ್ತಾರೆ ರವೀಂದ್ರ .
ಅಲ್ಲದೆ, ಹೊಸಬರ ಚಿತ್ರಗಳು 'ಅಮ್ಮಾ ನಾನ್ ಸೇಲಾದೆ' ಎಂದು ಹಾಡುವುದು ಅಪರೂಪವಾಗುತ್ತಿರುವ ಹೊತ್ತಿನಲ್ಲಿ, ಹೊಸತನ ಇದ್ದರೆ ಸಾಕು, ಹೊಸಬರ ಚಿತ್ರವಾದರೂ ಪರವಾಗಿಲ್ಲ ಎನ್ನುವ ಧೈರ್ಯ ತುಂಬುವ ಬೆಳವಣಿಗೆ ಇದು.
-ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


